Thawar Chand Gehlot: ಸರ್ಕಾರದ 32 ಮಸೂದೆಗಳಿಗೆ ರಾಜ್ಯಪಾಲರ ಸಹಿ

Thawar Chand Gehlot: ಬಾಲ್ಯ ವಿವಾಹ ನಿಷೇಧ, ದೇವದಾಸಿ ಪದ್ಧತಿ ನಿರ್ಮೂಲನೆ ಸೇರಿದಂತೆ 32 ಮಸೂದೆಗಳಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಅವರು ಸಹಿ ಹಾಕಿದ್ದಾರೆ.

ಈಗಾಗಲೇ ಸರ್ಕಾರ 37 ಮಸೂದೆಗಳನ್ನು ರಾಜ್ಯಪಾಲರಿಗೆ ಕಳಿಸಿತ್ತು. ಈ ಪೈಕಿ 32 ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಅಂತೆಯೇ ರಾಜ್ಯಪಾಲರು ಅನುಮೋದಿಸಿದ ಮಸೂದೆಗಳು ಕಾಯ್ದೆಗಳಾಗಿ ಜಾರಿಯಾಗಲಿವೆ. ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಇನ್ನು ರಾಷ್ಟ್ರಪತಿಗಳ ಅಂಗಳಕ್ಕೆ ರಾಜ್ಯದ ಮೂರು ಮಸೂದೆಗಳನ್ನು ರಾಜ್ಯಪಾಲರು ಕಳುಹಿಸಿದ್ದಾರೆ. ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ- 2025, ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ- 2025, ನೋಂದಣಿ ಮಸೂದೆ-2025 ಮಸೂದೆಗಳು ರಾಷ್ಟ್ರಪತಿಗಳ ಬಳಿಗೆ ಹೋಗಿವೆ.
Comments are closed.