FD: ಒಂದು ವರ್ಷಕ್ಕೆ FD ಇಡಲು ಯೋಚಿಸುತ್ತಿದ್ದೀರಾ? 6 ರಿಂದ 7% ಬಡ್ಡಿ ನೀಡುವ ಬ್ಯಾಂಕ್ ಗಳಿವು

Share the Article

FD ಬಹಳ ಜನಪ್ರಿಯ ಹೂಡಿಕೆಯ ಮಾರ್ಗವಾಗಿದೆ. ವಿಶೇಷವಾಗಿ ಒಂದು ವರ್ಷದ ಎಫ್‌ಡಿಗಳು ಸುರಕ್ಷತೆ ಮತ್ತು ಲಿಕ್ವಿಡಿಟಿ (Liquidity) ಎರಡನ್ನೂ ಒಟ್ಟಿಗೆ ನೀಡುವ ಕಾರಣ ಅನೇಕರ ಪ್ರಥಮ ಆಯ್ಕೆ ಇದೆ ಆಗಿವೆ. ಹಾಗಿದ್ದರೆ ನೀವು ಎಫ್ ಡಿ ಇಡಲು ಯೋಚಿಸುತ್ತಿದ್ದೀರಾ? ಸುಮಾರು 6% ನಿಂದ 7% ಬಡ್ಡಿ ನೀಡುವ ಬ್ಯಾಂಕುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಖಾಸಗಿ ಬ್ಯಾಂಕುಗಳು:

ಖಾಸಗಿ ವಲಯದಲ್ಲಿ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡಾ 6.60 ರಷ್ಟು ಬಡ್ಡಿ ನೀಡುತ್ತಿವೆ. ಇವುಗಳಲ್ಲಿ 1 ಲಕ್ಷ ರೂ. ಎಫ್‌ಡಿ ಮಾಡಿದರೆ ಒಂದು ವರ್ಷದ ನಂತರ ರೂ.1,06,600 ಆಗುತ್ತದೆ. ಅದೇ ಐಸಿಐಸಿಐ ಬ್ಯಾಂಕ್ ಶೇಕಡಾ 6.40 ಬಡ್ಡಿ ನೀಡುತ್ತಿದ್ದು, ಇಲ್ಲಿ ರೂ.1 ಲಕ್ಷ ಹೂಡಿಕೆಯು ರೂ.1,06,000ಕ್ಕೆ ಏರುತ್ತದೆ.

ಸಾರ್ವಜನಿಕ ವಲಯ ಬ್ಯಾಂಕುಗಳು:

ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಶೇಕಡಾ 6.60 ಬಡ್ಡಿ ನೀಡುತ್ತಿವೆ. ಈ ಬ್ಯಾಂಕುಗಳಲ್ಲಿ ಒಂದು ವರ್ಷದ ಎಫ್‌ಡಿಗೆ ರೂ.1 ಲಕ್ಷ ಹೂಡಿಸಿದರೆ, ಪಕ್ವಾವಧಿ ಮುಗಿದಾಗ ರೂ.1,06,600 ಸಿಗುತ್ತದೆ.

ಇದನ್ನೂ ಓದಿ:Suicide: ಈ ‘ಇಂಜೆಕ್ಷನ್’ ಕೊಟ್ಟರೆ ‘ಆತ್ಮಹತ್ಯೆ’ ಯೋಚನೆಯೇ ಸುಳಿಯಲ್ಲ!

ಇನ್ನು ಕೆನರಾ ಬ್ಯಾಂಕ್ ಶೇಕಡಾ 6.50 ಬಡ್ಡಿ ನೀಡುತ್ತಿದ್ದು, ರೂ.1 ಲಕ್ಷ ಠೇವಣಿ ಒಂದು ವರ್ಷದಲ್ಲಿ ರೂ.1,06,500ಕ್ಕೆ ಏರುತ್ತದೆ. ಅದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಂದು ವರ್ಷದ ಎಫ್‌ಡಿಗೆ ಶೇಕಡಾ 6.45 ಬಡ್ಡಿ ನೀಡುತ್ತಿದ್ದು, ಹೂಡಿಕೆಯು ರೂ.1,06,450 ಕ್ಕೆ ಬೆಳೆಯುತ್ತದೆ.

Comments are closed.