Digital ration card: ಡಿಜಿಟಲ್ ರೇಷನ್ ಕಾರ್ಡ್ ಪಡೆಯಲು ಈ ರೀತಿ ಮಾಡಿ

Digital Ration Card: ಯಾವುದೇ ಅರ್ಜಿ ಸಲ್ಲಿಕೆಗೆ ಅತ್ಯಗತ್ಯವಾಗಿ ರೇಷನ್ ಕಾರ್ಡ್ ಬೇಕಾಗುತ್ತದೆ. ಆದ್ರೆ ರೇಷನ್ ಕಾರ್ಡ್ ಈ ಹಿಂದೆ ಕಾಗದ ಅಥವಾ ಪ್ಲಾಸ್ಟಿಕ್ ಕವರ್ ರೂಪದಲ್ಲಿದ್ದು ಇದು ಬೇಗನೆ ಹರಿದು ಹೋಗುವ ಸಾಧ್ಯತೆ ಹೆಚ್ಚಿತ್ತು. ಅದಲ್ಲದೆ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಿತ್ತು. ಆದರೆ, ಇದೀಗ ನೀವು ಡಿಜಿಟಲ್ ರೇಷನ್ ಕಾರ್ಡ್ ಅನ್ನು ಮೊಬೈಲ್, ಕಂಪ್ಯೂಟರ್, ಟ್ಯಾಬ್‌ಗಳಲ್ಲಿ ಇಟ್ಟುಕೊಳ್ಳಬಹುದು. ಇದನ್ನು ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಅರ್ಹ ಫಲಾನುಭವಿಗಳು ಪಡೆಯಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಡಿಜಿಟಲ್ ರೇಷನ್ ಕಾರ್ಡ್( Digital Ration Card) ಪಡೆಯಲು, ಸರ್ಕಾರಿ ಪೋರ್ಟಲ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ಡೌನ್‌ಲೋಡ್ ಮಾಡಿಕೊಂಡು ಪಡೆದುಕೊಳ್ಳಬಹುದು. ಈ ಕಾರ್ಡ್ ನಿಮ್ಮ ಸ್ಮಾರ್ಟ್ ಫೋನ್ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹ ಆಗಿರುತ್ತದೆ. ಇದರಲ್ಲಿ ಬಳಕೆದಾರರ ಎಲ್ಲಾ ಮಾಹಿತಿಯನ್ನು ಕ್ಯೂಆರ್ ಕೋಡ್ ಹಾಗೂ ಬಾರ್ ಕೋಡ್ ಮೂಲಕ ಸಂಗ್ರಹ ಮಾಡಲಾಗುತ್ತದೆ. ಇದರಿಂದ ಅದನ್ನು ಸುಲಭವಾಗಿ ಸ್ಕ್ಯಾನ್ ಮಾಡಿ ಪರಿಶೀಲನೆ ಮಾಡಬಹುದು.
ಇದನ್ನೂ ಓದಿ:Nano Banana: “ನ್ಯಾನೋ ಬನಾನಾ” ಟ್ರೆಂಡ್ ಎಂದರೇನು?ಫೋಟೋಗಳನ್ನು 3D ಪ್ರತಿಮೆಗಳಾಗಿ ಮಾಡೋದು ಹೇಗೆ?
ಹೊಸ ಡಿಜಿಟಲ್ ರೇಷನ್ ಕಾರ್ಡ್ ಪಡೆಯಲು ಏನು ಮಾಡಬೇಕು?
* ನಿಮ್ಮ ರಾಜ್ಯದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಉದಾಹಣೆಗೆ ಕರ್ನಾಟಕದವರಾಗಿದ್ದರೆ, https://ahara.kar.nic.in/ ಗೆ ಭೀಟಿ ನೀಡಬೇಕಾಗುತ್ತದೆ.
* ಹೊಸ ರೇಷನ್ ಕಾರ್ಡ್ ಅರ್ಜಿ ಆಯ್ಕೆ ಮಾಡಿ ಮಾಡಿ
* ಅರ್ಜಿ ಫಾರಂನಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
* ನಂತರ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಿ
* ಅರ್ಜಿ ಸಲ್ಲಿಸಿದ ಬಳಿಕ ನೋಂದಣಿ ಸಂಖ್ಯೆ ನೀಡಲಾಗುವುದು
* ನೋಂದಣಿ ಸಂಖ್ಯೆ ಬಳಸಿಕೊಂಡು ನಿಮ್ಮ ಅರ್ಜಿ ಸ್ಥಿತಿಯನ್ನು ಆನ್‌ಲೈನ್‌ಲ್ಲಿ ಪರಿಶೀಲನೆ ಮಾಡಬಹುದು.
Comments are closed.