Home News Bhatkala: ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? ನೂರಾರು ಹಸುಗಳ ಎಲುಬುಗಳು ಪತ್ತೆ, ಪೊಲೀಸರಿಂದ ತನಿಖೆ

Bhatkala: ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? ನೂರಾರು ಹಸುಗಳ ಎಲುಬುಗಳು ಪತ್ತೆ, ಪೊಲೀಸರಿಂದ ತನಿಖೆ

Hindu neighbor gifts plot of land

Hindu neighbour gifts land to Muslim journalist

Bhatkala: ರಾಜ್ಯದಲ್ಲಿ ʼಪೈಶಾಚಿಕ ಕೃತ್ಯʼ ಘಟನೆ ನಡೆದಿದೆ. ಗೋವುಗಳ ನರಮೇಧ ಶಂಕೆ ವ್ಯಕ್ತವಾಗಿದ್ದು, ಭಟ್ಕಳದಲ್ಲಿ ಸಾವಿರಾರು ಹಸುಗಳ ಎಲುಬುಗಳು ಪತ್ತೆಯಾಗಿರುವ ವರದಿಯಾಗಿದೆ.

ಉತ್ತರ ಕರ್ನಾಟಕ ಜಿಲ್ಲೆಯ ಭಟ್ಕಳ ಪಟ್ಟಣದ ಮುಗ್ಗುಮ್‌ ಕಾಲನಿಯ ಗುಡ್ಡದ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಹಲವು ಜಾನುವಾರುಗಳ ಮೂಳೆಗಳು, ಅಸ್ಥಿಪಂಜರಗಳು ಪತ್ತೆಯಾಗಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಗ್ದಮ್‌ ಕಾಲೋನಿ ಬಳಿಯ ಅರಣ್ಯ ಇಲಾಖೆಗೆ ಸೇರಿದ ಬೆಳ್ನೆ ಅರಣ್ಯದ ಸರ್ವೆ ನಂಬರ್‌ 74 ರ ಜಾಗದಲ್ಲಿ ನೂರಾರು ಗೋವುಗಳ ಕಳೇಬರದ ರಾಶಿಯೇ ಪತ್ತೆಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಹಿಂದೂ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಸೂಕ್ತ ತನಿಖೆ ಮಾಡುವಂತೆ ಹಿಂದೂ ಸಂಘಟನೆಗಳ ಮುಖಂಡರು ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ:Pawan Kalyan : ಪವನ್ ಕಲ್ಯಾಣ್ ಧರ್ಮಸ್ಥಳ ಭೇಟಿ ದಿಢೀರ್ ರದ್ದು!!

ಅಕ್ರಮವಾಗಿ ಗೋವುಗಳನ್ನು ಭಟ್ಕಳಕ್ಕೆ ತಂದು ಹತ್ಯೆ ಮಾಡಲಾಗಿದ್ದು, ಕೂಡಲೇ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧನ ಮಾಡಬೇಕು ಎಂದು ಹಿಂದೂ ಕಾರ್ಯಕರ್ತರು ಆಗ್ರಹ ಮಾಡಿದ್ದಾರೆ.