Pawan Kalyan : ಪವನ್ ಕಲ್ಯಾಣ್ ಧರ್ಮಸ್ಥಳ ಭೇಟಿ ದಿಢೀರ್ ರದ್ದು!!

Share the Article

Pawan Kalyan : ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಧರ್ಮಸ್ಥಳಕ್ಕೆ ಬಂದು ವಿಶೇಷ ಪೂಜೆಯನ್ನು ಸಲ್ಲಿಸಿ ಬೆಂಬಲ ಸೂಚಿಸಲು ನಿರ್ಧರಿಸಿದ್ದರು. ಅದರಂತೆ ನಿನ್ನೆ ಅಂದರೆ ಸೆಪ್ಟೆಂಬರ್ 11 ರಂದು ಅವರು ಕ್ಷೇತ್ರಕ್ಕೆ ಆಗಮಿಸಬೇಕಿತ್ತು. ಆದರೆ ಇದೀಗ ಅವರ ಭೇಟಿ ದಿಢೀರ್ ರದ್ದಾಗಿದೆ ಎನ್ನಲಾಗಿದೆ.

ಹೌದು, ಧರ್ಮಸ್ಥಳಕ್ಕೆ ಬೆಂಬಲವಾಗಿ ಆಂಧ್ರಪ್ರದೇಶ ಡಿಸಿಎಂ, ಸ್ಟಾರ್ ನಟ ಪವನ್ ಕಲ್ಯಾಣ್ ಅವರ ಧರ್ಮಸ್ಥಳ ದೇವಸ್ಥಾನದ ಭೇಟಿ ರದ್ದಾಗಿದೆ ಎನ್ನಲಾಗಿದೆ. ತಮ್ಮ ಭೇಟಿ ಬಗ್ಗೆ ಪವನ್ ಅವರು ಅಧಿಕೃತವಾಗಿ ಹಾಗೂ ಭದ್ರತೆಯ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ ನೀಡದ ಹಿನ್ನಲೆ ರದ್ದಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ವಿಷ ಕುಡಿದ್ರೆ ಕಕ್ಕಿಸಬಹುದಿತ್ತು, ಆದ್ರೆ..’- ಡೌರಿ ಕೇಸ್ ಕೊಟ್ಟ ಸೊಸೆ ಬಗ್ಗೆ ಮಾವ ಎಸ್‌.ನಾರಾಯಣ್ ಹೀಗೆ ಅನ್ನೋದಾ?

ಅಷ್ಟೇ ಅಲ್ಲದೆ ಪವನ್ ಕಲ್ಯಾಣ್ ಭೇಟಿಯ ಬಗ್ಗೆ ಧರ್ಮಸ್ಥಳ ದೇವಾಲಯದ ಮಂಡಳಿಯಿಂದ ಕೂಡ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಹೀಗಾಗಿ ನಟ ಪವನ್ ಕಲ್ಯಾಣ್ ಕ್ಷೇತ್ರದ ಭೇಟಿಯನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.

Comments are closed.