‘ವಿಷ ಕುಡಿದ್ರೆ ಕಕ್ಕಿಸಬಹುದಿತ್ತು, ಆದ್ರೆ..’- ಡೌರಿ ಕೇಸ್ ಕೊಟ್ಟ ಸೊಸೆ ಬಗ್ಗೆ ಮಾವ ಎಸ್.ನಾರಾಯಣ್ ಹೀಗೆ ಅನ್ನೋದಾ?

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಎಸ್.ನಾರಾಯಣ್ ರವರ ವಿರುದ್ಧ ವರದಕ್ಷಿಣೆ ಕೇಸ್ ದಾಖಲಾಗಿದೆ. ನಾರಾಯಣ್ ಪುತ್ರ ಪವನ್ ಪತ್ನಿ ಪವಿತ್ರಾ ನೀಡಿರುವ ದೂರನ್ನು ಆಧರಿಸಿ, ಈಗಾಗಲೇ ಪೊಲೀಸರು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಮಾವ ಎಸ್.ನಾರಾಯಣ್ ಹಾಗೂ ಅವರ ಪತ್ನಿ, ಮಗನ ವಿರುದ್ಧ ಗಂಭೀರ ಪವಿತ್ರಾ ಗಂಭೀರ ಆರೋಪ ಮಾಡಿದ್ದಾರೆ.

ಎಸ್.ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಹಾಗೂ ಪತಿ ಪವನ್ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರೆಂದು ಆರೋಪ ಮಾಡಿದ್ದಾರೆ ಪವಿತ್ರಾ. ನಾನು ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಗಂಡ ಹಾಗೂ ಪುತ್ರನ ಜವಾಬ್ದಾರಿಯನ್ನು ತಾವೇ ನೋಡಿಕೊಳ್ಳುತ್ತಿದ್ದೇನೆ. ಈಗಾಗಲೇ ಹಲವು ಬಾರಿ ಮನೆಯಿಂದ ಹಣವನ್ನು ತಂದು ಕೊಟ್ಟಿದ್ದು, ಆದರೂ ಪದೇ ಪದೆ ಹಣ ಕೇಳುತ್ತಿದ್ದಾರೆಂದು ಅವರು ನಾರಾಯಣ್ ಕುಟುಂಬದ ಮೇಲೆ ಆರೋಪಿಸಿದ್ದಾರೆ.
ಅತ್ತ ಸೊಸೆ ವರದಕ್ಷಿಣೆ ಕೇಸ್ ದಾಖಲಿಸುತ್ತಿದ್ದಂತೆ ಮಾಧ್ಯಮಗಳಿಗೆ ಎಸ್.ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ನಿರ್ದೇಶಕ ಎಸ್.ನಾರಾಯಣ್ ಟಿವಿ9 ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ “ಅವರು ಮನೆ ಬಿಟ್ಟು ಹೋಗಿ 14 ತಿಂಗಳಾಗಿತ್ತು. ಕಳೆದ ವರ್ಷ ಜುಲೈ ತಿಂಗಳಲ್ಲಿ ಮನೆ ಬಿಟ್ಟು ಹೋಗುತ್ತಾರೆ. ಅಂದು ಅವರು ಮನೆ ಬಿಟ್ಟು ಹೋಗುವ ವಿಚಾರ ನನಗೆ ಗೊತ್ತಿರಲಿಲ್ಲ. ನಾವು ಈ ರೀತಿ ಮಾಡಿದ್ದರೆ, ಅಂದೇ ದೂರನ್ನು ಕೊಡಬೇಕಿತ್ತು. ಯಾಕೆ ಆ ಸಮಯದಲ್ಲಿ ನಿದ್ದೆ ಮಾಡುತ್ತಿದ್ರಾ? ಇನ್ನು ವರದಕ್ಷಿಣೆ ವಿಷಯಕ್ಕೆ ಬಂದರೆ, 60ನೇ ದಶಕದಲ್ಲಿ ನನ್ನ ತಂದೆ ವರದಕ್ಷಿಣೆ ವಿರುದ್ಧ ದೊಡ್ಡ ಅಭಿಯಾನ ಮಾಡಿದ್ದರು. ಅಂತಹವರ ಮಗ ನಾನು. ಅಲ್ಲದೆ ನನ್ನ ಸಿನಿಮಾದ ಮುಖಾಂತರ ವರದಕ್ಷಿಣೆ ಪಿಡುಗು ತೊಡಗಿಸಬೇಕು ಅಂತ ಸಿನಿಮಾ ಮಾಡಿದವನು. ನಮ್ಮ ಕುಟುಂಬದಲ್ಲಾಗಲಿ, ಪರಂಪರೆಯಲ್ಲಾಗಲಿ ಇದೆಲ್ಲವೂ ಸಾಧ್ಯವೇ ಇಲ್ಲ” ಎಂದಿದ್ದಾರೆ ಎಸ್.ನಾರಾಯಣ್.
“ಹೆಣ್ಣು ಮಕ್ಕಳಿಗೆ ನಮ್ಮ ವಿರುದ್ಧ ಹೂಡಲು ಬೇರೆ ಅಸ್ತ್ರ ಸಿಗುವುದಿಲ್ಲ. ಹೀಗಾಗಿ ಇಂತದ್ದೊಂದು ಅಸ್ತ್ರವನ್ನು ಬಳಸುತ್ತಿದ್ದಾರೆ. ಸದ್ಯ ಈ ಕೇಸ್ ಕೋರ್ಟ್‌ನಲ್ಲಿ ಇದೆ. ನಾವು ಅಲ್ಲಿಗೆ ಹೋಗಬೇಕಿದೆ. ಹೀಗಾಗಿ ನಾನು ಅವರ ಬಗ್ಗೆ ಹೆಚ್ಚೇನು ಹೇಳುವುದಕ್ಕೆ ಇಷ್ಟ ಪಡುವುದಿಲ್ಲ.” ಎಂದೂ ಎಸ್.ನಾರಾಯಣ್ ಹೇಳಿದ್ದಾರೆ.”ಇವರಿಬ್ಬರೂ ಪ್ರೀತಿಸಿ ಮದುವೆ ಆಗಿದ್ದಾರೆ. ಅವರ ಮನೆಯವರಿಗೆ ಗೊತ್ತಿದ್ದು, ಕೊನೆಯ ಕ್ಷಣದಲ್ಲಿ ಬಂದು ನನಗೆ ಹೇಳುತ್ತಾರೆ. ನಾವು ವಿರೋಧ ಮಾಡಿಲ್ಲ. ಇಬ್ಬರನ್ನೂ ಮದುವೆ ಮಾಡಿಕೊಟ್ಡಿದ್ವಿ. ಒಂದು ಕುಟುಂಬಕ್ಕೆ ಸೊಸೆಯಾಗಿ ಬಂದ್ಮೇಲೆ ಆ ಕುಟುಂಬದ ಸಂಸ್ಕೃತಿ-ಸಂಸ್ಕಾರ ಅವರು ಬದುಕಿ ಬಾಳಿದ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು ಅಲ್ಲಿ ಬಾಳುವುದನ್ನು ಕಲಿಯಬೇಕು. ನಾವೆಲ್ಲ ಬುದ್ದಿ ಹೇಳಕ್ಕೆ ಆಗಲ್ಲ. ಇವತ್ತಿನ ಪೀಳಿಗೆ ಹಿರಿಯರು ಹೇಳಿದ ಯಾವುದೇ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧರಿಲ್ಲ. ಇದು ದೊಡ್ಡ ದುರಂತ. ಹಾಗಾಗಿ ಮೌನವಾಗಿ ಬಿಡುತ್ತೇವೆ” ಎಂದಿದ್ದಾರೆ ನಾರಾಯಣ್.
ಇದನ್ನೂ ಓದಿ:Dasara Festival: ದಸರಾ ಪ್ರಯುಕ್ತ ನೈಯುತ್ಯ ರೈಲ್ವೆಯಿಂದ ವಿಶೇಷ ರೈಲು: ಇಲ್ಲಿದೆ ಸಂಪೂರ್ಣ ವಿವರ
ವಿಷ ಕುಡಿದಿದ್ರೆ ಕಕ್ಕಿಸಬಹುದಿತ್ತು ಅನ್ನೋ ಲೂಸ್ ಟಾಕ್!
“ಸಮಸ್ಯೆ ಬಗೆಹರಿಯುವಂತದ್ದು ಆಗಿದ್ದರೆ, ಅದು ಬಗೆ ಹರಿಯುತ್ತಿತ್ತು. ಇದು ಬಗೆಹರಿಸುವಂತಹ ವಿಷಯವಲ್ಲವೇ ಅಲ್ಲ. ವಿಷ ಕುಡಿದಿದ್ದರೆ, ಆಸ್ಪತ್ರೆಗೆ ಹಾಕಿ ವಿಷ ಕಕ್ಕಿಸಬಹುದು. ನೇಣು ಹಾಕಿಕೊಂಡರೆ ಏನು ಮಾಡೋಣ? ಈಗ ಈ ಥರದ ಪರಿಸ್ಥಿತಿಯಿದೆ. ನಮ್ಮಲ್ಲಿರೋ ಎಲ್ಲಾ ಅಸ್ತ್ರಗಳನ್ನ ಬಳಸಿದ್ವಿ. ಅದು ವರ್ಕ್ ಆಗಲಿಲ್ಲ. ಅದಕ್ಕೆ ನೋಡೋಣ, ಕೋರ್ಟ್‌ಗೆ ಹೋಗ್ತೀವಿ. ಏನು ಹೇಳ್ಬೇಕೋ ಅಲ್ಲೇ ಹೇಳ್ತೀನಿ” ಎಂದು ಎಸ್.ನಾರಾಯಣ್ ಹೇಳಿಕೆ ನೀಡಿದ್ದಾರೆ. ವಿಷ ಕುಡಿದಿದ್ರೆ ಕಕ್ಕಿಸಬಹುದಿತ್ತು.. ಅನ್ನೋ ಅವರ ಮಾತಿನ ಮೇಲೆ ಹಲವಾರ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Comments are closed.