Home News ತೇಜಸ್ವಿ ಯಾದವ್ ಪತ್ನಿ ಒಂದು ‘ಜೆರ್ಸಿ ಹಸು’: ಸುಂಟರಗಾಳಿ ಎಬ್ಬಿಸಿದ ಮಾಜಿ ಶಾಸಕನ ಹೇಳಿಕೆ

ತೇಜಸ್ವಿ ಯಾದವ್ ಪತ್ನಿ ಒಂದು ‘ಜೆರ್ಸಿ ಹಸು’: ಸುಂಟರಗಾಳಿ ಎಬ್ಬಿಸಿದ ಮಾಜಿ ಶಾಸಕನ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

Bihar:ಚುನಾವಣೆ ಹೊಸ್ತಿಲಲ್ಲಿ ಬಿಹಾರದಲ್ಲಿ ಮತ್ತೊಮ್ಮೆ ರಾಜಕೀಯ ವಾಕ್ಸಮರ ಶುರುವಾಗಿದ್ದು ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿರಿ ಸೊಸೆ, ತೇಜಸ್ವಿ ಯಾದವ್ ಪತ್ನಿಯನ್ನು ಮಾಜಿ ಶಾಸಕ ರಾಜವಲ್ಲಭ್ ಯಾದವ್ ಜೆರ್ಸಿ ಹಸು ಎಂದು ಕರೆದಿದ್ದಾರೆ. ಈ ವಿವಾದಾತ್ಮಕ ಹೇಳಿಕೆ ಬಿಹಾರದಲ್ಲಿ ರಾಜಕೀಯ ಬಿರುಗಾಳಿ ಸೃಷ್ಟಿಸಿದೆ.

ಮಾಜಿ ಶಾಸಕರಾದ ರಾಜ್‌ ವಲ್ಲಭ್‌ರವರು ತೇಜಸ್ವಿ ಯಾದವ್ ಪತ್ನಿ ವಿರುದ್ಧ ಕೀಳಾಗಿ ಮಾತನಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. “ತೇಜಸ್ವಿ ಯಾದವ್ ಜಾತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಯಾದವ ಹುಡುಗಿಯನ್ನ ಮದುವೆಯಾಗಲಿಲ್ಲ, ಮದುವೆಯಾಗಿದ್ದರೆ, ಯಾದವ್ ಸಮುದಾಯದ ಮಗಳಿಗೆ ಲಾಭವಾಗುತ್ತಿತ್ತು. ಅವರು ಹರಿಯಾಣ-ಪಂಜಾಬ್‌ನಿಂದ ಜೆರ್ಸಿ ಹಸುವನ್ನು ಕರೆತಂದಿದ್ದಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ವಿರುದ್ಧ ಮಾತನಾಡಿದ ಆರ್​ಜೆಡಿ ನಾಯಕ ಕೌಶಲ್ ಯಾದವ್, ತೇಜಸ್ವಿ ಪತ್ನಿಯ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ರಾಜ್ವಲ್ಲಭ್ ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಇಂತಹ ಹೇಳಿಕೆಯಿಂದ ಸಮಾಜದ ಪ್ರತಿಯೊಂದು ವರ್ಗಕ್ಕೂ ನೋವಾಗಿದೆ. ಇದು ತೇಜಸ್ವಿ ಅವರ ಪತ್ನಿಗೆ ಮಾತ್ರವಲ್ಲದೆ ಇಡೀ ಮಹಿಳಾ ಸಮಾಜಕ್ಕೆ ಮಾಡಿದ ಅವಮಾನ. ಈ ವ್ಯಕ್ತಿಯನ್ನು ಮತ್ತೆ ಜೈಲಿಗೆ ಕಳುಹಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:Karisma Kapoor: ನಟಿ ಕರಿಷ್ಮಾ ಕಪೂರ್‌ ಮಾಜಿ ಗಂಡ ಸಂಜಯ್ ಕಪೂರ್ ಅವರ ಆಸ್ತಿಗಳನ್ನು ಪಟ್ಟಿ ಮಾಡಲು ತಾಯಿ ಪ್ರಿಯಾ ಕಪೂರ್ ಗೆ ನ್ಯಾಯಾಲಯ ಸೂಚನೆ

ತೇಜಸ್ವಿ ಯಾದವ್ 2021 ರಲ್ಲಿ ಡಿಪಿಎಸ್ ನ ತಮ್ಮ ಬ್ಯಾಚ್‌ಮೇಟ್ ರಾಚೆಲ್ ಕೊಡಿನ್ಹೋರನ್ನು ವಿವಾಹವಾಗಿದ್ದಾರೆ. ಆಕೆ ಮೂಲತಃ ಹರಿಯಾಣದ ಹುಡುಗಿ. ತಮ್ಮ ಆಕೆ ಮದುವೆ ಬಳಿಕ ತಮ್ಮ ಹೆಸರನ್ನು ರಾಜಶ್ರೀ ಯಾದವ್ ಎಂದು ಬದಲಾಯಿಸಿಕೊಂಡಿದ್ದರು. ಹತ್ತು ವರ್ಷಗಳ ಹಿಂದೆ, ಕುರ್ಮಿ ​​ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನಿತೀಶ್ ಕುಮಾರ್ ಸರ್ಕಾರವೂ, ಇದೇ ಮಾಜಿ ಶಾಸಕ ರಾಜವಲ್ಲಭ್ ಯಾದವ್ ರನ್ನು ಜೈಲಿಗೆ ಕಳಿಸಿತ್ತು.