Terrorists Arrest: ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು, ಇಬ್ಬರು ಶಂಕಿತ ಐಎಸ್‌ಐಎಸ್‌ ಉಗ್ರರು ಬಂಧನ

Share the Article

Terrorists Arrest: ದೆಹಲಿ ಪೊಲೀಸ್‌ ವಿಶೇಷ ಘಟಕವು ದೇಶಾದ್ಯಂತ ವಿವಿಧ ಸ್ಥಳಗಳಿಂದ ಇಬ್ಬರು ಶಂಕಿತ ಐಸಿಸ್‌ ಭಯೋತ್ಪಾದಕರನ್ನು ಬಂಧನ ಮಾಡಿದೆ.

ಕೇಂದ್ರೀಯ ಸಂಸ್ಥೆಗಳು ಮತ್ತು ಜಾರ್ಖಂಡ್‌ ಭಯೋತ್ಪಾದನಾ ನಿಗ್ರಹ ದಳದ ಸಮನ್ವಯದಲ್ಲಿ ಈ ಕೆಲಸ ನಡೆದಿದೆ. ಆರೋಪಿಗಳಲ್ಲಿ ಒಬ್ಬನಾದ ಅಫ್ತಾಬ್‌ನನ್ನು ದೆಹಲಿಯಲ್ಲಿ ಬಂಧನ ಮಾಡಲಾಗಿದೆ. ಈತ ಮುಂಬೈ ನಿವಾಸಿ. 12 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಯುತ್ತಿರುವ ದಾಳಿಗಳ ಭಾಗವಾಗಿ ಈತನ ಬಂಧನವಾಗಿದೆ.

ಎಂಟಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಶಂಕಿತರು ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ರಾಂಚಿಯ ಇಸ್ಲಾಂನಗರದ ತಬ್ರಾಕ್‌ ಲಾಡ್ಜ್ನಿಂದ ಶಂಕಿತ ಐಸಿಸ್‌ ಭಯೋತ್ಪಾದಕ ಆಶರ್‌ ಡ್ಯಾನಿಶ್ ಬಂಧನವಾಗಿದೆ. ಲಾಡ್ಜ್‌ನಲ್ಲೇ ಈತ ವಾಸ ಮಾಡುತ್ತಿದ್ದು, ಜಾರ್ಖಂಡ್ನ ಬೊಕಾರೊ ಜಿಲ್ಲೆಯ ಪೆಟರ್ವಾರ್‌ ನಿವಾಸಿ. ಬಂಧನ ಸಮಯದಲ್ಲಿ ಈತನಿಂದ ಹಲವಾರು ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:IPhone: ಆಪಲ್‌ ನಿಂದ ಭರ್ಜರಿ ಫ್ಯೂಚರ್ಸ್ ಇರೋ ಐಫೋನ್‌ 17, 17 ಪ್ರೋ, 17 ಮ್ಯಾಕ್ಸ್‌, ಐಫೋನ್‌ ಏರ್‌ ಮೊಬೈಲ್ ಗಳ ಬಿಡುಗಡೆ – ಭಾರತದಲ್ಲಿ ಬೆಲೆ ಎಷ್ಟು?

ಡ್ಯಾನಿಶ್‌ ವಿಚಾರಣೆ ನಡೆಯುತ್ತಿದ್ದು, ದೆಹಲಿ ಪೊಲೀಸ್‌ ವಿಶೇಷ ಘಟಕವು ಹೆಚ್ಚಿನ ತನಿಖೆಗಾಗಿ ಆತನನ್ನು ವಶಕ್ಕೆ ಪಡೆದಿದ್ದಾರೆ.

Comments are closed.