Nepal: ನೇಪಾಳದ ಮುಂದಿನ ಪಿಎಂ ಆಗ್ತಾರಾ ಯುವ ನಾಯಕ, ಬೆಳಗಾವಿ VTU ಈ ಹಳೆ ವಿದ್ಯಾರ್ಥಿ?

Share the Article

Nepal: ನೆಮ್ಮದಿಯಾಗಿದ್ದ ನೇಪಾಳ ದೇಶ ಇದೀಗ ಸರ್ಕಾರ ಮಾಡಿಕೊಂಡ ಸಣ್ಣ ಎಡವಟ್ಟಿನಿಂದಾಗಿ ದೊಡ್ಡ ವಿಪತ್ತನ್ನು ಸೃಷ್ಟಿಸಿಕೊಂಡಿದೆ. ಅಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯ ನಂತರ, ನೇಪಾಳದ ಹೊಸ ಪ್ರಧಾನಿ ಯಾರಾಗುತ್ತಾರೆ ಎಂಬ ಚರ್ಚೆ ಜೋರಾಗಿದೆ.

ಈ ಚರ್ಚೆ ಬೆನ್ನಲ್ಲೇ ಕಠ್ಮಂಡುವಿನ ಜನಪ್ರಿಯ ಇಂಜಿನಿಯರ್, ರ್‍ಯಾಪರ್, ಮೇಯರ್… ನೇಪಾಳದ ಪಿಎಂ ಆಗ್ತಾರಾ ಬೆಳಗಾವಿ ವಿಟಿಯು ಹಳೆ ವಿದ್ಯಾರ್ಥಿ ಬಾಲೆಂದ್ರ ಶಾ (ಬಾಲೆನ್) ಅವರನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡಬೇಕು ಎಂಬ ಆನ್‌ಲೈನ್ ಅಭಿಯಾನ ದೇಶಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ. ಹಾಗಿದ್ರೆ ಯಾರು ಬಾಲೆಂದ್ರ ಶಾ? ಇಲ್ಲಿದೆ ಡಿಟೇಲ್ಸ್

ಬಾಲೆನ್ ಎಂದೇ ಖ್ಯಾತರಾಗಿರುವ ಬಾಲೆಂದ್ರ ಶಾ, 1990ರಲ್ಲಿ ಕಠ್ಮಂಡುವಿನಲ್ಲಿ ಜನಿಸಿದವರು. ನೇಪಾಳದಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು, ನಂತರ ಕರ್ನಾಟಕ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು)ನಲ್ಲಿ ಸ್ಟ್ರಕ್ಚರಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ, ಅವರು ನೇಪಾಳದ ಹಿಪ್ ಹಾಪ್ ಸಂಗೀತ ಲೋಕದಲ್ಲಿ ಸಕ್ರಿಯರಾಗಿದ್ದರು. ತಮ್ಮ ಸಂಗೀತದ ಮೂಲಕ ಭ್ರಷ್ಟಾಚಾರ ಮತ್ತು ಅಸಮಾನತೆಯಂತಹ ಸಾಮಾಜಿಕ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು.

ಇದನ್ನೂ ಓದಿ:Vice President: ಭಾರತದ ನೂತನ ಉಪರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಆಯ್ಕೆ !!

ಅಲ್ಲದೆ ಸಬೀನಾ ಕಾಫ್ಲೆ ಅವರನ್ನು ವಿವಾಹವಾಗಿರುವ ಬಾಲೆನ್, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು, ಜನರೊಂದಿಗೆ ನೇರ ಸಂವಹನ ನಡೆಸುತ್ತಾರೆ. ಇದೀಗ ಇವರೇ ಮುಂದಿನ ಪ್ರಧಾನಿಯಾಗಬೇಕು ಎಂದು ಜೆನ್‌ ಝಡ್‌ ಜನರು ಆಗ್ರಹಿಸುತ್ತಿದ್ದಾರೆ. “ಬಾಲೆನ್ ಅವರೇ, ದಯವಿಟ್ಟು ನಾಯಕತ್ವ ವಹಿಸಿ,” ಎಂದು ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರೆ, “ಸ್ವಂತ ಹಿತಾಸಕ್ತಿಯಿಲ್ಲದೆ ದೇಶಕ್ಕಾಗಿ ದುಡಿಯುವ ನಾಯಕ ನಮ್ಮಲ್ಲಿದ್ದಾರೆ. ಬಾಲೆನ್ ಪ್ರಧಾನಿಯಾಗಲಿ,” ಎಂದು ಅಲ್ಲಿನ ಜನ ಒತ್ತಡ ಹೇರುತ್ತಿದ್ದಾರೆ.

Comments are closed.