Home News Bihar: ಏಷ್ಯಾಕಪ್ ಗೆದ್ದ ಭಾರತದ ಹಾಕಿ ತಂಡ – ಆಟಗಾರರಿಗೆ ತಲಾ 10 ಲಕ್ಷ ರೂ...

Bihar: ಏಷ್ಯಾಕಪ್ ಗೆದ್ದ ಭಾರತದ ಹಾಕಿ ತಂಡ – ಆಟಗಾರರಿಗೆ ತಲಾ 10 ಲಕ್ಷ ರೂ ಬಹುಮಾನ ಘೋಷಿಸಿದ ನಿತೀಶ್ ಕುಮಾರ್

Hindu neighbor gifts plot of land

Hindu neighbour gifts land to Muslim journalist

Bihar: ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ 2025 ರ ಹಾಕಿ ಏಷ್ಯಾಕಪ್ (Hockey Asia Cup 2025) ಫೈನಲ್​ನಲ್ಲಿ ಭಾರತ ಹಾಕಿ ತಂಡವು, ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲೇ ಬಿಹಾರ ಸರ್ಕಾರವು ಆಟಗಾರರಿಗೆ ತಲಾ ಹತ್ತು ಲಕ್ಷ ರೂ ಬಹುಮಾನವನ್ನು ಘೋಷಿಸಿದೆ

ಹೌದು, 2025 ರ ಹಾಕಿ ಏಷ್ಯಾ ಕಪ್ ಆವೃತ್ತಿಯಲ್ಲಿ ದಕ್ಷಿಣ ಕೊರಿಯಾವನ್ನು ಸೋಲಿಸುವ ಮೂಲಕ ಹರ್ಮನ್​​ಪ್ರೀತ್ ಸಿಂಗ್ (Harmanpreet Singh) ನಾಯಕತ್ವದ ಭಾರತ ಪುರುಷರ ಹಾಕಿ ತಂಡ ಭಾನುವಾರ ನಾಲ್ಕನೇ ಬಾರಿಗೆ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ. ಈ ಮೂಲಕ 2026ರ ಹಾಕಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಈ ಬೆನ್ನಲ್ಲೇ ಏಷ್ಯಾ ಕಪ್‌ -2025 ಹಾಕಿ ಟೂರ್ನಿಯಲ್ಲಿ ವಿಜೇತರಾಗಿರುವ ಭಾರತೀಯ ಆಟಗಾರರಿಗೆ ತಲಾ ₹10 ಲಕ್ಷ ಬಹುಮಾನ ನೀಡಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸೋಮವಾರ ತಿಳಿಸಿದ್ದಾರೆ.

ಇದನ್ನೂ ಓದಿ:Kia: GST ಕಡಿತ ಹಿನ್ನೆಲೆ ‘ಕಿಯಾ’ ಕಾರುಗಳ ಬೆಲೆಯಲ್ಲಿ ಭರ್ಜರಿ ಇಳಿಕೆ – ಹೊಸ ದರ ಘೋಷಿಸಿಕೊಂಡ ಕಂಪನಿ !!

ಈ ಕುರಿತಾಗಿ ಪೋಸ್ಟ್ ಹಂಚಿಕೊಂಡಿರುವ ಅವರು ‘ರಾಜಗೀರ್‌ನಲ್ಲಿರುವ ಬಿಹಾರ ಕ್ರೀಡಾ ವಿಶ್ವವಿದ್ಯಾನಿಲಯದಲ್ಲಿರುವ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಹಾಕಿ ಪಂದ್ಯವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಭಾರತೀಯ ತಂಡವು ಪ್ರಶಸ್ತಿ ಗೆದ್ದಿರುವುದು ದೇಶಕ್ಕೆ ಹೆಮ್ಮೆಯ ಸಂಗತಿ. ಏಷ್ಯಾ ಕಪ್‌ನಲ್ಲಿ ವಿಜೇತರಾಗಿರುವ ಭಾರತ ಹಾಕಿ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಸನ್ಮಾನಿಸಲು ಬಿಹಾರ ಸರ್ಕಾರವು ನಿರ್ಧರಿಸಿದೆ. ಪ್ರತಿಯೊಬ್ಬ ಆಟಗಾರರಿಗೂ ತಲಾ ₹10 ಲಕ್ಷ ಹಾಗೂ ಸಹಾಯಕ ಸಿಬ್ಬಂದಿಗೆ ತಲಾ ₹5 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.