Supreme Court: ಶಿಕ್ಷೆ ಮುಗಿದರೂ ನಾಲ್ಕು ವರ್ಷ ಹೆಚ್ಚಾಗಿ ಜೈಲಲಿದ್ದ ಅಪರಾಧಿ – 25 ಲಕ್ಷ ನೀಡಲು ಸುಪ್ರೀಂ ಕೋರ್ಟ್ ಆದೇಶ

Supreme Court : ಪ್ರಕರಣ ಒಂದರಲ್ಲಿ ಅಪರಾಧಿ ಎಂಬುದು ಸಾಬೀತಾಗಿ ಶಿಕ್ಷೆ ಅನುಭವಿಸಿದ ವ್ಯಕ್ತಿ ಒಬ್ಬ ತನ್ನ ಶಿಕ್ಷೆ ಮುಗಿದರೂ ಕೂಡ ನಾಲ್ಕು ವರ್ಷಕ್ಕೂ ಹೆಚ್ಚಾಗಿ ಮತ್ತೆ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ. ಈ ಕಾರಣಕ್ಕೆ ಆತನಿಗೆ ಸುಮಾರು 25 ಲಕ್ಷ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಹೌದು, ಮಧ್ಯಪ್ರದೇಶದಲ್ಲಿ ಅಪರಾಧಿ ಸೋಹನ್ ಸಿಂಗ್, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಪೂರ್ಣಗೊಂಡ ನಂತರವೂ ಸಿಂಗ್ ಅವರು ನಾಲ್ಕು ವರ್ಷ ಏಳು ತಿಂಗಳು ಹೆಚ್ಚುವರಿಯಾಗಿ ಜೈಲಿನಲ್ಲಿ ಕಳೆದಿದ್ದಾರೆ. ಅವರು ಒಟ್ಟು 11 ವರ್ಷ 7 ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ. ಸ್ವಲ್ಪ ಸಮಯ ಮಾತ್ರ ಜಾಮೀನಿನ ಮೇಲೆ ಹೊರಗಿದ್ದರು. ಆದರೆ, ಅವರಿಗೆ ವಿಧಿಸಿದ್ದ ಜೈಲು ಶಿಕ್ಷೆ ಕೇವಲ 7 ವರ್ಷಗಳು. ಹೀಗಾಗಿ ಶಿಕ್ಷೆಗೂ ಮೀರಿ ಜೈಲಿನಲ್ಲಿರಿಸಲ್ಪಟ್ಟ ಅಪರಾಧಿಗೆ ₹25 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
‘ಏಳು ವರ್ಷಗಳ ಸಂಪೂರ್ಣ ಶಿಕ್ಷೆಯನ್ನು ಅನುಭವಿಸಿದ ನಂತರವೂ ಅರ್ಜಿದಾರರು ಎಂಟು ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಏಕೆ ಇದ್ದರು ಮತ್ತು ಅಂತಹ ಗಂಭೀರ ಲೋಪ ಹೇಗೆ ಸಂಭವಿಸಿತು ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಈ ನಿಟ್ಟಿನಲ್ಲಿ ರಾಜ್ಯ (ಮಧ್ಯಪ್ರದೇಶ) ಸೂಕ್ತ ವಿವರಣೆಯನ್ನು ನೀಡಬೇಕೆಂದು ನಾವು ಬಯಸುತ್ತೇವೆ’ ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿದೆ.
Comments are closed.