Ankita Amar: ಸೈಮಾ ಅವಾರ್ಡ್ ಗೆದ್ದ ಅಂಕಿತಾ ಅಮರ್ ಸ್ಪೆಷಲಿಟಿಗೆ ಅಭಿಮಾನಿಗಳು ಫಿದಾ!

Share the Article

Ankita Amar: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ನಮ್ಮನೆ ಯುವರಾಣಿ (Nammane Yuvarani) ಮೂಲಕ ಜನಪ್ರಿಯತೆ ಪಡೆದ ನಟಿ ಅಂಕಿತಾ ಅಮರ್ (Ankita Amar) , ಕಳೆದ ವರ್ಷ ನಟಿಸಿರುವ ಇಬ್ಬನಿ ತಬ್ಬಿದ ಇಳಿಯಲಿ ಸಿನಿಮಾದಲ್ಲಿ ಸೈಮಾ ಅವಾರ್ಡ್ ಬಂದಿದೆ.

ರಕ್ಷಿತ್ ಶೆಟ್ಟಿ ನಿರ್ಮಾಣದ, ಚಂದ್ರಜಿತ್ ನಿರ್ದೇಶನದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ರಿಲೀಸ್ ಆಗಿ ಭಾರಿ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಅಂಕಿತಾ ಅಮರ್ ನಾಯಕಿಯಾಗಿ ನಟಿಸಿದ್ದರು. ಇದೀಗ ಈ ವರ್ಷದ ಸೈಮಾ ಅವಾರ್ಡ್ (SIIMA Award 2025) ಕಾರ್ಯಕ್ರಮದಲ್ಲಿ ಚೊಚ್ಚಲ ಬೆಸ್ಟ್ ಡೆಬ್ಯೂಟ್ ನಾಯಕಿ ಪ್ರಶಸ್ತಿ ಗೆದ್ದಿದ್ದಾರೆ.

ಇದನ್ನೂ ಓದಿ;Karnataka: ಕರ್ನಾಟಕದಲ್ಲಿ ಕ್ವಾಂಟಮ್ ಸಿಟಿ ನಿರ್ಮಾಣಕ್ಕೆ 6.17 ಎಕರೆ ನೀಡಿದ ಸರ್ಕಾರ

ಇನ್ನು ತಮ್ಮ ಸಿಂಪ್ಲಿಸಿಟಿಗೆ ಜನಪ್ರಿಯತೆ ಪಡೆದಿರುವ ಸಾಯಿ ಪಲ್ಲವಿ (Sai Pallavi) ಅವರಿಗೆ ಅಂಕಿತಾ ಅಮರ್ ಅವರನ್ನು ಹೋಲಿಕೆ ಮಾಡುತ್ತಿದ್ದಾರೆ. ಅಂಕಿತಾ ಅಮರ್ ಕೂಡ ತುಂಬಾ ಸಿಂಪಲ್ ಆಗಿದ್ದು, ಅವರು ಕಾರ್ಯಕ್ರಮಗಳಿಗೆ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂಕಿತಾ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು, ಎಂಎಸ್ಸಿ ಬಯೋಕೆಮೆಸ್ಟ್ರಿ ಮಾಡಿದ್ದು, ಎಲ್ಲದರಲ್ಲೂ ಸಾಯಿ ಪಲ್ಲವಿಗೆ ಹೋಲಿಕೆಯಾಗೋದರಿಂದ ಜನ ಕನ್ನಡಕ್ಕೊಬ್ಬರು ಸಾಯಿ ಪಲ್ಲವಿ ಸಿಕ್ಕಿದ್ದಾರೆ ಎನ್ನುತ್ತಿದ್ದಾರೆ ಅಷ್ಟೇ ಅಲ್ಲ ಅಂಕಿತ ಸ್ಪೆಷಲಿಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Comments are closed.