Bengaluru Bulls: ‘ಬೆಂಗಳೂರು ಬುಲ್ಸ್‌’ ನಲ್ಲಿ ಬಿರುಕು? ತಂಡದ ಕ್ಯಾಪ್ಟನ್ ಅಂಕುಶ್ ರಾಠಿ ಟೀಮ್ ನಿಂದ ಔಟ್?

Share the Article

Bengaluru Bulls: ಬೆಂಗಳೂರು ಬುಲ್ಸ್ ಕಬಡ್ಡಿ ತಂಡದಲ್ಲಿ ಇದೀಗ ಬಿರುಕು ಉಂಟಾಗಿದೆ ಎಂಬ ಗುಮಾನಿ ಮೂಡಿದೆ. ಇಷ್ಟೇ ಅಲ್ಲದೆ ಕ್ಯಾಪ್ಟನ್ ಅಂಕುಶ್ ಅವರನ್ನೇ ತಂಡದಿಂದ ಹೊರಗಿಡಲಾಗಿದೆಯೇ ಎಂಬ ಅನುಮಾನ ಕೂಡ ಶುರುವಾಗಿದೆ.

ಅಂಕುಶ್ ರಾಠಿ ಅವರು ಆರಂಭಿಕ 2 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಆದರೆ ಯು ಮುಂಬಾ, ಪಾಟ್ನಾ ಪೈರೇಟ್ಸ್‌ ವಿರುದ್ಧ ಆಡಿರಲಿಲ್ಲ. ಈ ನಡುವೆ ಅವರು ಸಾಮಾಜಿಕ ತಾಣಗಳಲ್ಲಿ ಬುಲ್ಸ್‌ ಖಾತೆಯನ್ನು ಅನ್‌ಫಾಲೋ ಮಾಡಿ, ತಂಡಕ್ಕೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಅಳಿಸಿಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಅಲ್ಲದೆ ಮುಖ್ಯ ಕೋಚ್ ಬಿ.ಸಿ.ರಮೇಶ್‌ ಜೊತೆಗಿನ ಮನಸ್ತಾಪ ಅಥವಾ ಇನ್ಯಾವುದೋ ಕಾರಣದಿಂದ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:Chikkamaglur : ಚಿಕ್ಕಮಗಳೂರಿನ 10 ಸಾವಿರ ಎಕ್ರೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ – ಶೋಧ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ

ಆದರೆ ಈ ಕುರಿತಾಗಿ ಸ್ಪಷ್ಟೀಕರಣ ನೀಡಿರುವ ಬೆಂಗಳೂರು ಬುಲ್ಸ್‌ ಕೋಚ್ ಬಿ.ಸಿ.ರಮೇಶ್ ಅಂಕುಶ್ ಈಗಲೂ ಬೆಂಗಳೂರು ಬುಲ್ಸ್‌ನ ಭಾಗವಾಗಿದ್ದಾರೆ. ಮನಸ್ತಾಪ, ಬಿರುಕು ಎಂಬುದರ ಬಗ್ಗೆ ನಾನು ಏನೂ ಹೇಳಲ್ಲ. ಕಬಡ್ಡಿಯಲ್ಲಿ ಅದೆಲ್ಲವೂ ಸಹಜ. ತಂಡದ ಆಂತರಿಕ ವಿಷಯದ ಬಗ್ಗೆ ಮಾತನಾಡಲ್ಲ. ಆಟಗಾರರು ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

Comments are closed.