Chikkamaglur : ಚಿಕ್ಕಮಗಳೂರಿನ 10 ಸಾವಿರ ಎಕ್ರೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ – ಶೋಧ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ

Chikkamaglur : ಕಾಫಿ ನಾಡು ಚಿಕ್ಕಮಗಳೂರುಇದೀಗ ಚಿನ್ನದ ನಾಡು ಆಗಲು ಹೊರಟಿದೆ. ಕಾರಣ ಚಿಕ್ಕಮಗಳೂರಲ್ಲಿ ಇದೀಗ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಚಿಕ್ಕಮಗಳೂರಿನ ತರಿಕೆರೆ ತಾಲ್ಲೂಕಿನಲ್ಲಿ ಚಿನ್ನದ ನಿಕ್ಷೇಪದ ಶೋಧನೆಗೆ ಅನುಮತಿ ಕೋರಿರುವ ಬಗ್ಗೆ ವರದಿಯಾಗಿದೆ.

ಹೌದು, ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಲ್ಲಿಯೂ ಚಿನ್ನದ ಅದಿರು ಇದೆ ಎಂಬ ಮಾಹಿತಿ ಲಭ್ಯವಾಗಿದೆ. ತರೀಕೆರೆಯಲ್ಲಿನ ಸುಮಾರು 10,100 ಎಕರೆ ಭೂ ಪ್ರದೇಶದಲ್ಲಿ ಚಿನ್ನದ ಅದಿರನ್ನು ಹುಡುಕಲು ಕೊಳವೆಬಾಯಿಯನ್ನು ಕೊರೆಯಲು ಅನುಮತಿ ನೀಡಬೇಕೆಂದು ಬೆಂಗಳೂರು ಮೂಲಕ ಕಂಪನಿಯೊಂದು ಮನವಿ ಮಾಡಿದೆ. ಈ ಮನವಿಯನ್ನು ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಪರಿಗಣಿಸಲು ಮುಂದಾಗಿದೆ. ಈ 10,100 ಎಕರೆ ಪ್ರದೇಶದಲ್ಲಿ ಚಿರತೆಗಳು, ಕರಡಿಗಳು ಸೇರಿದಂತೆ ಇತರ ಪ್ರಾಣಿಗಳ ನೆಲೆಯಾಗಿರುವ ಸುಮಾರು 5,600 ಎಕರೆ ಅರಣ್ಯ ಪ್ರದೇಶವೂ ಸೇರಿದೆ.
‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿರುವಂತೆ ಔರಮ್ ಜಿಯೋ ಎಕ್ಸ್‌ಪ್ಲೋರೇಶನ್ ಪ್ರೈವೇಟ್ ಲಿಮಿಟೆಡ್‌ಗೆ 10,082 ಎಕರೆ ಭೂಮಿಯಲ್ಲಿ ಚಿನ್ನದ ನಿಕ್ಷೇಪ ಕುರಿತು ಶೋಧ ಕಾರ್ಯ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಈಗಾಗಲೇ ಪರವಾನಗಿ ನೀಡಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಅದರಲ್ಲಿ 5,600 ಎಕರೆ ಅರಣ್ಯ ಪ್ರದೇಶ ಮತ್ತು 3,600 ಎಕರೆ ಕೃಷಿ ಭೂಮಿ ಸೇರಿವೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Golden Kalash: ಕೆಂಪು ಕೋಟೆಯಲ್ಲಿ ಚಿನ್ನದ ಕಲಶ ಕದ್ದ ಕಳ್ಳ ಅರೆಸ್ಟ್
ಅಂದಹಾಗೆ ಈ ಕಂಪನಿಯು ತರೀಕೆರೆಯ ಸುಮಾರು 10,100 ಎಕರೆ ಭೂಭಾಗದಲ್ಲಿ ಚಿನ್ನದ ನಿಕ್ಷೇಪವಿದೆ. ಆ ಬಗ್ಗೆ ಮತ್ತಷ್ಟು ನಿಖರವಾಗಿ ಸಂಶೋಧನೆಯನ್ನು ನಡೆಸುವ ಅವಶ್ಯಕತೆಯಿದೆ. ಆ 10,100 ಎಕರೆ ಭೂಭಾಗದಲ್ಲಿ 5,600 ಎಕರೆ ಭೂಮಿಯು ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಕ್ಕೆ ಸೇರುತ್ತದೆ. ಉಳಿದ ಭೂಮಿಯಲ್ಲಿ 3,600 ಎಕರೆ ಪಪ್ರದೇಶವು ಕೃಷಿ ಭೂಮಿ. ಈ ಭೂಮಿಯು ಕಲ್ಲು ಬಂಡೆಗಳನ್ನು ಹೊಂದಿರುವುದರಿಂದ ಇಲ್ಲಿ ಸರಿಯಾಗಿ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಾವು ಈ ಪ್ರದೇಶಗಳಲ್ಲಿ ಡ್ರಿಲ್ಲಿಂಗ್ ನಡೆಸಬೇಕಿದೆ. ಆ ಹಿನ್ನೆಲೆಯಲ್ಲಿ ನಮಗೆ 10,000 ಎಕರೆ ಪ್ರದೇಶಗಳಲ್ಲಿ ಡ್ರಿಲ್ಲಿಂಗ್ ನಡೆಸಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಕಂಪನಿಯು ವಿವರಿಸಿದೆ.
Comments are closed.