UPI Transaction: ಸೆಪ್ಟೆಂಬರ್ 15ರಿಂದ ಫೋನ್‌ಪೇ, ಗೂಗಲ್‌ಪೇನಲ್ಲಿ ಹಣ ವರ್ಗಾವಣೆ ಮಿತಿ ಹೆಚ್ಚಳ

Share the Article

UPI Transaction: ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಸಿಪಿಐ) ಯುಪಿಐ ಪಾವತಿ (UPI Transaction) ಮಿತಿಯನ್ನು ಹೆಚ್ಚಳ ಮಾಡಿದೆ. ಸೆಪ್ಟೆಂಬರ್ 15ರಿಂದ ಜಾರಿಯಾಗಲಿರುವ ಹೊಸ ನಿಯಮಗಳ ಅನ್ವಯ ಗ್ರಾಹಕರು ಕೆಲವೊಂದು ವಿಶೇಷ ವರ್ಗಗಳಿಗೆ ಏಕಕಾಲಕ್ಕೆ ₹5 ಲಕ್ಷದವರೆಗೆ ಹಾಗೂ 24 ಗಂಟೆಗಳಲ್ಲಿ ಒಟ್ಟು ₹10 ಲಕ್ಷವರೆಗೆ ಯುಪಿಐ ಮೂಲಕ ಪಾವತಿ ಮಾಡಬಹುದಾಗಿದೆ.

ಯಾರಿಗೆಲ್ಲ ಅನುಕೂಲ?

ಇದು ತೆರಿಗೆ, ವಿಮೆ ಕಂತು, ಬಂಡವಾಳ ಮಾರುಕಟ್ಟೆ ಹೂಡಿಕೆ, ಬ್ಯಾಂಕ್ ಸಾಲದ ಇಎಂಐ ಮುಂತಾದ 12 ನಿರ್ದಿಷ್ಟ ವ್ಯವಹಾರಗಳಿಗೆ ಮಾತ್ರ ಈ ಹೆಚ್ಚುವರಿ ಮಿತಿ ಅನ್ವಯವಾಗಲಿದೆ. ಪರ್ಸನ್-ಟು-ಪರ್ಸನ್ ಪಾವತಿ ಮಿತಿ ದಿನಕ್ಕೆ ₹1 ಲಕ್ಷವಿರುತ್ತದೆ. ಐಪಿಒ ಹೂಡಿಕೆಗಳ ಪಾವತಿ ಮಿತಿಯೂ ₹5 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಕ್ರೆಡಿಟ್ ಕಾರ್ಡ್ ಪಾವತಿಯು ಒಂದು ವರ್ಗಾವಣೆಗೆ ₹5 ಲಕ್ಷ ಮತ್ತು ಒಂದೇ ದಿನಕ್ಕೆ ₹6 ಲಕ್ಷಕ್ಕೆ ಸೀಮಿತವಾಗಿದೆ.

ಅದರಂತೆ ಸೆಪ್ಟೆಂಬರ್ 15ರಿಂದ ಬಳಕೆದಾರರು ತೆರಿಗೆ ಪಾವತಿಗಳು, ವಿಮಾ ಕಂತುಗಳು, ಇಎಂಐ ಮತ್ತು ಬಂಡವಾಳ ಮಾರುಕಟ್ಟೆ ಹೂಡಿಕೆಗಳಂತಹ ನಿರ್ದಿಷ್ಟ ವರ್ಗಗಳಿಗೆ 24 ಗಂಟೆಗಳ ಅವಧಿಯಲ್ಲಿ ₹10 ಲಕ್ಷದವರೆಗೆ ಹಣ ವರ್ಗಾಯಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಮೌಲ್ಯದ ಡಿಜಿಟಲ್ ವಹಿವಾಟುಗಳನ್ನು ಸರಳಗೊಳಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಈ ಹೊಸ ವ್ಯವಸ್ಥೆ ಕಲ್ಪಿಸಿದೆ.

ಇದನ್ನೂ ಓದಿ:UPI Transaction: ತಪ್ಪಾದ UPI ID ಖಾತೆಗೆ ಹಣ ಹೋದರೆ ಏನು ಮಾಡಬೇಕು?

ಎಲ್ಲ ಬ್ಯಾಂಕ್ ಹಾಗೂ ಯುಪಿಐ ಆಯಪ್‌ಗಳಿಗೆ ಈ ನಿಯಮ ಜಾರಿಗೆ ಸೂಚನೆ ನೀಡಲಾಗಿದೆ. ಯುಪಿಐ ಮೂಲಕ ಉದ್ಯಮಿಗಳು, ಹೂಡಿಕೆದಾರರು ಹೆಚ್ಚಿನ ಮೊತ್ತದ ಪಾವತಿಯನ್ನು ಇನ್ನು ಸುಲಭವಾಗಿ ಮಾಡಬಹುದು. ಈಗ ಪ್ರತಿ ವಹಿವಾಟಿಗೆ ₹5 ಲಕ್ಷದವರೆಗೆ ಅವಕಾಶವಿದ್ದು, ಯುಪಿಐ ಮೂಲಕ ದಿನಕ್ಕೆ ₹10 ಲಕ್ಷದವರೆಗೆ ಮಿತಿ ನಿಗದಿಪಡಿಸಲಾಗಿದೆ. ಈ ಹಿಂದೆ ಇದ್ದ ₹2 ಲಕ್ಷ ಮಿತಿಯಿಂದ ಪ್ರತಿ ವಹಿವಾಟಿಗೆ ₹5 ಲಕ್ಷಕ್ಕೆ ಮತ್ತು 24 ಗಂಟೆಗಳಲ್ಲಿ ₹10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

Comments are closed.