Vice President Election : ನಾಳೆ ಉಪರಾಷ್ಟ್ರಪತಿ ಚುನಾವಣೆ – ತಟಸ್ಥರಾದ 18 ಸಂಸದರು

Share the Article

Vice President Election : ಚುನಾವಣಾ ಆಯೋಗ ಘೋಷಿಸಿದಂತೆ ನಾಳೆ ಅಂದರೆ ಸೆಪ್ಟೆಂಬರ್ 9ರಂದು ದೇಶದ ಎರಡನೇ ಅತ್ಯುನ್ನತ ಹುದ್ದೆಯಾದ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಕುತೂಹಲದ ಸಂಗತಿ ಏನೆಂದರೆ ಎನ್.ಡಿ.ಎ ಮಿತ್ರ ಪಕ್ಷಗಳ ಸುಮಾರು 18 ಸದಸ್ಯರು ತಮ್ಮ ಮತ ಯಾರಿಗೆ ಎಂಬುದನ್ನು ಬಹಿರಂಗಪಡಿಸದೆ ತಟಸ್ಥರಾಗಿದ್ದಾರೆ.

ಹೌದು, ಬಿಜೆಡಿಯ 7, ಬಿಆರ್‌ಎಸ್‌ನ 4, ಅಕಾಲಿ ದಳ, ಜೆಡ್‌ಪಿಎಂ, ವಿಒಟಿಟಿಪಿಯಿಂದ ತಲಾ ಒಬ್ಬರು ಹಾಗೂ 3 ಪಕ್ಷೇತರ ಸಂಸದರು ಸೇರಿ 18 ಸಂಸದರು ಪ್ರಸ್ತುತ ಎನ್‌ಡಿಎ ಕೂಟದ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್‌ ಅವರಿಗಾಗಲಿ, ಐಎನ್‌ಡಿಐಎ ಕೂಟದ ಅಭ್ಯರ್ಥಿ ಬಿ. ಸುದರ್ಶನ್‌ ರೆಡ್ಡಿ ಅವರಿಗಾಗಲಿ ಬೆಂಬಲ ಸೂಚಿಸಿಲ್ಲ. ಹಾಗಾಗಿ ಎರಡೂ ಕೂಟಗಳು ಈ 18 ಸಂಸದರನ್ನು ತಮ್ಮ ಪರ ಸೆಳೆಯಲು ಕಸರತ್ತು ನಡೆಸುತ್ತಿವೆ.

ಇನ್ನು ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ, ತಮಿಳುನಾಡು ಮೂಲದ ಸಿ.ಪಿ.ರಾಧಾಕೃಷ್ಣನ್‌ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ತೆಲಂಗಾಣ ಮೂಲದ ಬಿ.ಸುದರ್ಶನ ರೆಡ್ಡಿ ಕಣದಲ್ಲಿದ್ದಾರೆ. 781 ಸಂಸದರು ಪ್ರಸ್ತುತ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ಈಗಾಗಲೇ 439 ಮಂದಿ ಸಂಸದರು ಎನ್‌ಡಿಎ ಕೂಟದ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಉಪರಾಷ್ಟ್ರಪತಿ ರೇಸ್‌ನಲ್ಲಿ ರಾಧಾಕೃಷ್ಣನ್‌ ಮುಂದಿದ್ದು, ಗೆಲುವು ಬಹುತೇಕ ಖಚಿತವಾಗಿದೆ. ಇತ್ತ ಐಎನ್‌ಡಿಐಎ ಕೂಟದ ಅಭ್ಯರ್ಥಿ ಸುದರ್ಶನ್‌ ರೆಡ್ಡಿಯವರಿಗೆ 324 ಮಂದಿ ಸಂಸದರು ಬೆಂಬಲ ಸೂಚಿಸಿದ್ದು, ಮತಗಳನ್ನು ಹೆಚ್ಚಿಸಲು ಐಎನ್‌ಡಿಐಎ ಕೂಟ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.

ಇದನ್ನೂ ಓದಿ:Vice President: ನಿಮಗೆ ಗೊತ್ತಾ? ಭಾರತದ ಉಪರಾಷ್ಟ್ರಪತಿಗಳಿಗೆ ಯಾವುದೇ ಸಂಬಳವಿಲ್ಲ !!

Comments are closed.