ಈ ದಂಪತಿಯ ತಿಂಗಳ ಮನೆ ಖರ್ಚು 5.9 ಲಕ್ಷ ರೂ.; ಅವರ ಲೆಕ್ಕ ನೋಡಿ ಬೇಸರ ಪಡ್ಕೋ ಬೇಡಿ ಪ್ಲೀಸ್!

Share the Article

ಬೆಂಗಳೂರು: ದುನಿಯಾ ದುಬಾರಿ ಅಂತೇವೆ. ಅದೂ ಬೆಂಗಳೂರಿನ ದುನಿಯಾ ಯಾವತ್ತೂ ದುಬಾರಿಯೇ. ಇಲ್ಲಿ ಬದುಕೋದು ತುಂಬಾನೇ ಕಷ್ಟ ಅನ್ನೋದು ಎಲ್ಲರ ಸಾಮಾನ್ಯ ಅಭಿಪ್ರಾಯ. ಆದರೂ ಇವತ್ತಿಗೂ ಬೆಂಗಳೂರಿನಲ್ಲಿ ಪರಮ ಶ್ರೀಮಂತರಿಂದ ಹಿಡಿದು, ಒಂದು ಹೊತ್ತು ಮಾತ್ರ ಚಿತ್ರಾನ್ನ ತಿಂದು ಜೀವಿಸುವ ಜನರು ಕೂಡಾ ಬದುಕುತ್ತಲೇ ಇದ್ದಾರೆ. ಬೆಂಗಳೂರು ಮಾತ್ರ ಶ್ರೀಮಂತ ಬಡವ ಎನ್ನದೆ ಎಲ್ಲರಿಗೂ ಆಶ್ರಯ ನೀಡುತ್ತಾ ಪೋಷಿಸುತ್ತಾ ಗಡಿಗಳನ್ನು ದಾಟಿ ಬೆಳೆಯುತ್ತಲೇ ಇದೆ. ಇದೀಗ ಇಲ್ಲೊಂದು ಕುಟುಂಬ ತಮ್ಮ ತಿಂಗಳ ಖರ್ಚು ವೆಚ್ಚದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದೆ. ಅವರ ಲೆಕ್ಕ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ಈ ದಂಪತಿ ತಮ್ಮ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿದ್ದು ಆಗಸ್ಟ್ ತಿಂಗಳ ಒಟ್ಟು ಖರ್ಚು ಎಷ್ಟಾಯಿತು ಎಂದು ಬಹಿರಂಗ ಪಡಿಸಿದ್ದಾರೆ. ಈ ಕುರಿತಾದ ಪೋಸ್ಟ್ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ನೋಡಿ ಶಾಕ್ ಆಗಿದ್ದಾರೆ.

eacapetolandscapes ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದಂಪತಿ ತಮ್ಮ ತಿಂಗಳ ಒಟ್ಟು ಖರ್ಚಿನ ಲೆಕ್ಕ ಬಿಚ್ಚಿಟ್ಟು ಅಚ್ಚರಿ ಮೂಡಿಸಿದೆ.

ಹಾಗಾದ್ರೆ ಒಟ್ಟು ಎಷ್ಟು ಖರ್ಚು?
*ಮನೆ ಬಾಡಿಗೆ 42,000 ರೂ.
*ಫಿಟ್ನೆಸ್ 40,000 ರೂ (ಪರ್ಸನಲ್ ಟ್ರೇನರ್ ಹಾಗೂ ಪಿಲೇಟ್ಸ್ ಸೆಷನ್)
*ದಿನಸಿಗೆ ರೂ 20,000
*ದಿನನಿತ್ಯದ ಅಗತ್ಯಗಳು 10,000 ರೂ (ಮನೆ ಕೆಲಸದಾಕೆಯ ವೆಚ್ಚ, ಒಟಿಟಿ, ಅಗತ್ಯ ವೆಚ್ಚಗಳು)
*ಆಹಾರ 13,000 ರೂ (ಆನ್ಲೈನ್ ಆರ್ಡರ್ + ಔಟ್‌ಸೈಡ್ ತಿನ್ನೋದು)
*ಟ್ರಾವೆಲ್ 3,50,000 ರೂ (2 ಅಂತರಾಷ್ಟ್ರೀಯ ಮತ್ತು 2 ದೇಶೀಯ ಪ್ರವಾಸ)
*ಹೂಡಿಕೆ 1,00,000 ರೂ ಹಾಗೂ ಇತರ ವೆಚ್ಚಗಳು 13,000 ರೂ (ಕ್ಯಾಬ್, ಇನ್ಶುರೆನ್ಸ್)
ಕೊನೆಗೆ ಒಟ್ಟು ವೆಚ್ಚ 5,90,000 ರೂ. (ಸುಮಾರು 6 ಲಕ್ಷ)!!!

ವಿಡಿಯೋದಲ್ಲಿ ದಂಪತಿಗಳು, ನಾವು ಪ್ರತಿ ತಿಂಗಳು ಖರ್ಚು-ಗಳಿಕೆಗಳ ಬಗ್ಗೆ ಚರ್ಚೆ ಮಾಡುತ್ತೇವೆ, ಹೂಡಿಕೆಗೆ ಹಣ ಮೀಸಲಿಡುತ್ತೇವೆ. ಹಣದ ಬಗ್ಗೆ ಪ್ರಾಮಾಣಿಕ ಮಾತುಕತೆ ಯಾವುದೇ ದಂಪತಿಗೆ ಅಗತ್ಯ ಎಂದಿದ್ದಾರೆ. ಈ ವಿಡಿಯೋ ಇದುವರೆಗೆ 4.5 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.

ಇದನ್ನೂ ಓದಿ:Odisha: ಮದರಸಾದಲ್ಲಿ ಬಾಲಕನಿಗೆ ಲೈಂಗಿಕ ದೌರ್ಜನ್ಯ, ಸಾವು: ಐವರು ಬಾಲಾಪರಾಧಿಗಳ ಬಂಧನ

ಅವರ ಮನೆ ಖರ್ಚು ನೋಡಿ, ನಿಮ್ಮ ತಿಂಗಳ ಆದಾಯ ಎಷ್ಟೆಂದು ಪ್ರಶ್ನೆ ಮಾಡಿದ್ದಾರೆ. ಇಷ್ಟೊಂದು ಐಷಾರಾಮಿ ಜೀವನ ನಡೆಸಿದ್ರೆ ಎಷ್ಟು ದುಡಿದ್ರೂ ಸಾಕಾಗಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರ ತಿಂಗಳ ಖರ್ಚು, ನನ್ನ ಒಂದು ವರ್ಷದ ಖರ್ಚು ಎಂದು ಮತ್ತೊಬ್ಬರು ತಮ್ಮ ಸ್ಥಿತಿಯನ್ನು ಹೇಳಿಕೊಂಡು ಬೇಸರಿಸಿಕೊಂಡಿದ್ದಾರೆ.

Comments are closed.