ರಸ್ತೆಗೆ ರಾಜನಂತೆ ಇಳಿದೇ ಬಿಟ್ಟ ಟೆಸ್ಲಾ ಇವಿ ಕಾರು: ಸಾರಿಗೆ ಸಚಿವರೇ ಟೆಸ್ಲಾ ಮಾಡೆಲ್ Y ಕಾರಿನ ಮೊದಲ ಗ್ರಾಹಕ

ಮುಂಬೈ: ಎಲೆಕ್ಟ್ರಿಕ್ ವಾಹನ (EV) ತಯಾರಿಕೆಯಲ್ಲಿ ಜಗತ್ ಪ್ರಸಿದ್ಧ ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ಮೊದಲ ಕಾರನ್ನು ವಿತರಿಸಿದೆ. ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಭಾರತದ ಮೊದಲ ಟೆಸ್ಲಾ ಮಾಡೆಲ್ Y ಕಾರನ್ನು ಶುಕ್ರವಾರ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಹೊಸ ಶೋರೂಂನಿಂದ ಸ್ವೀಕರಿಸಿದರು.

ಈ ಕಾರು ಖರೀದಿಯು ಗ್ರೀನ್ ಎನರ್ಜಿ ಮತ್ತು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ ಎಂದು ಸಚಿವ ಸರ್ನಾಯಕ್ ಹೇಳಿ ಕೊಂಡಿದ್ದಾರೆ. “ನಾನು ಈ ಟೆಸ್ಲಾ ಕಾರನ್ನು ನಾಗರಿಕರಲ್ಲಿ, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಅರಿವು ಮೂಡಿಸಲು ಖರೀದಿಸಿದ್ದೇನೆ. ನಮ್ಮ ಮಕ್ಕಳು ಇಂತಹ ಕಾರುಗಳನ್ನು ನೋಡಿ, ಸುಸ್ಥಿರ ಸಾರಿಗೆಯ ಮಹತ್ವವನ್ನು ಅರಿಯಬೇಕು” ಎಂದು ಅವರು ತಿಳಿಸಿದರು. ತಾನು ಕೊಂಡ ಈ ಕಾರನ್ನು ತಮ್ಮ ಮೊಮ್ಮಗನಿಗೆ ಉಡುಗೊರೆಯಾಗಿ ನೀಡುವುದಾಗಿಯೂ ಅವರು ಹೇಳಿದ್ದಾರೆ.
ಮುಂದಿನ ದಶಕದಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ ‘ಸ್ವಚ್ಛ ಚಲನಶೀಲತೆ’ಯ ದೃಷ್ಟಿಗೆ ಅನುಗುಣವಾಗಿ ಪ್ರಮುಖ ಇವಿ ಪರಿವರ್ತನೆಯ ಗುರಿಯನ್ನು ಹೊಂದಿದೆ. ಅದನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಅಟಲ್ ಸೇತು ಮತ್ತು ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ವಿನಾಯಿತಿಯಂತಹ ಹಲವು ಪ್ರೋತ್ಸಾಹದ ನಡೆಗಳನ್ನು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಆದಾಯ ತೆರಿಗೆ ಸಲ್ಲಿಕೆಗೆ ಸೆಪ್ಟೆಂಬರ್ 15 ಅಂತಿಮ ಗಡುವು: ಈ ದಿನಾಂಕ ಮುಂದೂಡಲ್ಪಡುತ್ತಾ?
ಭಾರತದ ಮಾರುಕಟ್ಟೆಯಲ್ಲಿ ಟೆಸ್ಲಾಗೆ ಆರಂಭದಲ್ಲಿ ಅಷ್ಟೇನೂ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದುವರೆಗೆ ಮಾಡೆಲ್ Y ಗಾಗಿ 600 ಬುಕ್ಕಿಂಗ್‌ಗಳನ್ನು ಸ್ವೀಕರಿಸಲಾಗಿದ್ದು, ಕಂಪನಿಯು ಈ ವರ್ಷ 350-500 ಕಾರುಗಳನ್ನು ಭಾರತಕ್ಕೆ ಕಳಿಸುವ ಯೋಜನೆ ಹೊಂದಿದೆ ಎನ್ನಲಾಗಿದೆ. ಭಾರತದಲ್ಲಿ ಮಾಡೆಲ್ Y ಎರಡು ವೇರಿಯೆಂಟ್’ಗಳಲ್ಲಿ ಲಭ್ಯವಿದೆ. ರಿಯರ್-ವೀಲ್ ಡ್ರೈವ್ ಆವೃತ್ತಿಯ ಬೆಲೆ 59.89 ಲಕ್ಷ ರೂಪಾಯಿಯಿಂದ ಮತ್ತು ಲಾಂಗ್ ರೇಂಜ್ ಆವೃತ್ತಿಯ ಬೆಲೆ 67.89 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಇದೀಗ ದೇಶದಾದ್ಯಂತ ಬುಕಿಂಗ್ ಸೌಲಭ್ಯವಿಲ್ಲ. ಮುಂಬೈ, ದೆಹಲಿ ಮತ್ತು ಗುರುಗ್ರಾಮದ ಶೋರೂಂಗಳಲ್ಲಿ ಮಾತ್ರ ಸದ್ಯಕ್ಕೆ ಬುಕ್ಕಿಂಗ್ ಸಾಧ್ಯ.
Comments are closed.