Bangalore: ಪ್ರಯಾಣಿಕರಿಗೆ ಸಿಹಿ ಸುದ್ದಿ, ಕೇಂದ್ರದಿಂದ ರಾಜ್ಯಕ್ಕೆ 5250 ಹೊಸ ಎಲೆಕ್ಟ್ರಿಕ್‌ ಬಸ್‌ ಮಂಜೂರು

Share the Article

Bangalore: ಕೇಂದ್ರದಿಂದ ರಾಜ್ಯಕ್ಕೆ ಎಲೆಕ್ಟ್ರಿಕ್‌ ಬಸ್‌ಗಳು ಸೇರ್ಪಡೆಗೊಳ್ಳಲಿದೆ. ಪಿಎಂ ಇ-ಡ್ರೈವ್‌, ಇ-ಬಸ್‌ ಯೋಜನೆಯಡಿಯಲ್ಲಿ ಕೇಂದ್ರದ ಸಬ್ಸಿಡಿ ಮೂಲಕ 5250 ಎಲೆಕ್ಟ್ರಿಕ್‌ ಬಸ್‌ಗಳ ಸೇರ್ಪಡೆಯಾಗಲಿದೆ.

ಬಿಎಂಟಿಸಿಗೆ 4500 ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲಾಗುವುದು. ಉಳಿದ ರೀತಿಯಲ್ಲಿ ಪಿಎಂ ಇ-ಬಸ್‌ ಸೇವಾ ಅಡಿ ಕೆಎಸ್‌ಆರ್‌ಟಿಸಿಗೆ 350, ಎನ್‌.ಡಬ್ಲ್ಯೂ.ಕೆ.ಆರ್‌.ಟಿ.ಸಿ.ಗೆ 200 ಬಸ್‌ಗಳು, ಕೆಕೆಆರ್‌ಟಿಸಿಗೆ 200 ಬಸ್‌ ಸೇರಿ ಒಟ್ಟು 750 ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲು ಅನುಮೋದನೆ ನೀಡಲಾಗಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ:’Su From So’ ಸಿನಿಮಾ ಈ ದಿನದಂದು ಜಿಯೊ ಹಾಟ್‌ಸ್ಟಾರ್‌ನಲ್ಲಿ ಲಭ್ಯ !!

ಗ್ರಾಸ್‌ ಕಾಸ್ಟ್‌ ಕಾಂಟ್ರಾಕ್ಟ್‌ ಅಡಿಯಲ್ಲಿ ಈ ಎಲ್ಲಾ ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆಯಲಾಗುವುದು. ಎಲ್ಲಾ ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿ ಸಂಸ್ಥೆ ಪೂರೈಕೆ ಮಾಡಲಿದ್ದು, ನಿರ್ವಹಣೆ ಕೂಡಾ ನಡೆಸಲಿದೆ.

Comments are closed.