TATA: GST ಕಡಿತ ಬೆನ್ನಲ್ಲೇ ಟಾಟಾ ಕಾರುಗಳ ಬೆಲೆಯಲ್ಲಿ 65,000 ರಿಂದ 1.45ರೂ ಲಕ್ಷವರೆಗೆ ಇಳಿಕೆ !!

TATA: ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ಮಾಡಿದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಕೆಲವು ಕಂಪನಿಗಳ ಕಾರು ಹಾಗೂ ಬೈಕ್ ಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಅಂತೆಯೇ ಟಾಟಾ ಕಂಪನಿ ಕಾರುಗಳಲ್ಲಿ 65,000 ದಿಂದ ಒಂದೂವರೆ ಲಕ್ಷದವರೆಗೆ ಇಳಿಕೆಯಾಗಿರುವುದನ್ನು ಕಾಣಬಹುದು.

ಹೌದು, ಟಾಟಾದ ಬಹುತೇಕ ಎಲ್ಲ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳು ಜಿಎಸ್‌ಟಿ ಕಡಿತದ ಪ್ರಯೋಜನವನ್ನು ಪಡೆಯಲಿವೆ. ಬಹುಮುಖ್ಯವಾಗಿ ಮಧ್ಯಮ ಹಾಗೂ ಶ್ರೀಮಂತ ವರ್ಗದವರ ನೆಚ್ಚಿನ ಟಿಯಾಗೊ, ಟಿಗೊರ್, ಆಲ್ಟ್ರೋಜ್, ಪಂಚ್, ನೆಕ್ಸಾನ್, ಕರ್ವ್, ಹ್ಯಾರಿಯರ್ ಹಾಗೂ ಸಫಾರಿ ಕಾರುಗಳ ಬೆಲೆಯು ಭಾರೀ ಇಳಿಕೆಯಾಗಿದೆ. ಹಾಗಿದ್ದರೆ ಯಾವ ಕಾರುಗಳ ಬೆಲೆಯಲ್ಲಿ ಎಷ್ಟು ಕಡಿಮೆಯಾಗಿದೆ ನೋಡೋಣ ಬನ್ನಿ.
ಇದನ್ನೂ ಓದಿ:Golden Kalash: ಕೆಂಪು ಕೋಟೆಯಲ್ಲಿ 1.5 ಕೋಟಿ ಮೌಲ್ಯದ ವಜ್ರ, ರತ್ನ ಖಚಿತ ಕಲಶ ಕಳವು!
ಯಾವುದಕ್ಕೆ ಎಷ್ಟು:
ಟಿಯಾಗೊ – ರೂ.75,000
ಟಿಗೊರ್ – ರೂ.80,000
ಆಲ್ಟ್ರೋಜ್ – ರೂ.1.10 ಲಕ್ಷ
ಪಂಚ್ – ರೂ.85,000
ನೆಕ್ಸಾನ್ – ರೂ. 1.55 ಲಕ್ಷ
ಕರ್ವ್ – ರೂ.65,000
ಹ್ಯಾರಿಯರ್ – ರೂ.1.40 ಲಕ್ಷ
ಸಫಾರಿ – ರೂ.1.45 ಲಕ್ಷ
ಸಧ್ಯ ಇರುವ ಶೋ ರೂಮ್ ಬೆಲೆ:
ಟಿಯಾಗೊ ರೂ.5 ಲಕ್ಷದಿಂದ ರೂ.8.55 ಲಕ್ಷ,
ಟಿಗೊರ್ ರೂ.6 ಲಕ್ಷದಿಂದ ರೂ.9.55 ಲಕ್ಷ,
ಆಲ್ಟ್ರೋಜ್ ರೂ.6.89 ಲಕ್ಷದಿಂದ ರೂ.11.49 ಲಕ್ಷ,
ಪಂಚ್ ರೂ.6.20 ಲಕ್ಷದಿಂದ 10.32 ಲಕ್ಷ,
ನೆಕ್ಸಾನ್ ರೂ.8 ಲಕ್ಷದಿಂದ ರೂ.15.60 ಲಕ್ಷ,
ಕರ್ವ್ ರೂ.10 ಲಕ್ಷದಿಂದ ರೂ.19.52 ಲಕ್ಷ,
ಹ್ಯಾರಿಯರ್ ರೂ.15 ಲಕ್ಷದಿಂದ ರೂ.26.69 ಲಕ್ಷ
ಸಫಾರಿ ರೂ.15.50 ಲಕ್ಷದಿಂದ ರೂ.27.44 ಲಕ್ಷ
ಇನ್ನು ಇದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಶುಕ್ರವಾರ ಕಂಪನಿಯು ಅಧಿಕೃತವಾಗಿ ಘೋಷಣೆ ಮಾಡಿದೆ. ಇದು ಸೆಪ್ಟೆಂಬರ್ 22 ರಿಂದ ಅನ್ವಯವಾಗಲಿದೆ. ಅಂದರೆ ಜಿಎಸ್‌ಟಿ ಪರಿಷ್ಕೃತ ದರಗಳು ಜಾರಿಗೆ ಬರುವ ದಿನದಿಂದಲೇ ಮಾನ್ಯವಾಗಲಿದೆ.
Comments are closed.