Healthy food: ದೇಹದ ತೂಕ ಇಳಿಸಿಕೊಳ್ಳಲು ಈ ಟಿಪ್ಸ್ ಸಹಾಯ ಮಾಡುತ್ತೆ

Healthy food: ಅತಿಯಾದ ತೂಕ ದೇಹದ ಆಕಾರವನ್ನು ಹಾಳುಮಾಡುವುದಲ್ಲದೆ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇಡೀ ದಿನ ಒಂದೇ ಕಡೆ ಕುಳಿತುಕೊಳ್ಳುವುದು, ಅತಿಯಾದ ಜಂಕ್ ಫುಡ್ ಸೇವನೆ , ಸಾಕಷ್ಟು ನಿದ್ದೆ ಮಾಡದಿರುವುದು ಸೇರಿದಂತೆ ಹಲವು ಅಭ್ಯಾಸಗಳು ಬೊಜ್ಜುತನಕ್ಕೆ ಕಾರಣವಾಗುತ್ತದೆ. ಹಲವಾರು ತೂಕ ಇಳಿಸಿಕೊಳ್ಳಲು ಹಲವು ರೀತಿಯ ಡಯಟ್ , ಔಷಧಿ ಇತ್ಯಾದಿಗಳನ್ನು ಬಳಸುತ್ತಾರೆ. ಆದರೆ ಅದರ ಅವಶ್ಯಕತೆ ಇಲ್ಲದೆ ನೈಸರ್ಗಿಕವಾಗಿ ಸರಳವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.

ಆಹಾರ ಪದ್ಧತಿ:
ನೀವು ಜಂಕ್ ಫುಡ್, ಸಕ್ಕರೆ ಪಾನೀಯಗಳು ಮತ್ತು ಎಣ್ಣೆಯಲ್ಲಿ ಕರಿದ ಆಹಾರ ತಿನ್ನಬಾರದು. ಬದಲಾಗಿ ಹೆಚ್ಚು ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳು, ಹಾಗೂ ಪ್ರೊಟೀನ್ ಹೆಚ್ಚಾಗಿರುವ ಆಹಾರವನ್ನು (Healthy food) ಸೇವಿಸಬೇಕು. ತರಕಾರಿ, ಹಣ್ಣು, ಮತ್ತು ಓಟ್ಸ್ ನಂತಹ ಫೈಬರ್ ಭರಿತ ಆಹಾರಗಳು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸಿ ಹೆಚ್ಚಿನ ಕ್ಯಾಲೋರಿ ಸೇವಿಸುವುದನ್ನು ತಪ್ಪಿಸುತ್ತದೆ. ದ್ವಿದಳ ಧಾನ್ಯಗಳು, ಮೊಟ್ಟೆ, ಹಾಗೂ ಕೋಳಿ ಮಾಂಸ ಹೆಚ್ಚು ಪ್ರೊಟೀನ್ ಯುಕ್ತ ಆಹಾರಗಳಾಗಿದ್ದು , ಇವು ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ.
ದೈಹಿಕ ವ್ಯಾಯಾಮ:
ವ್ಯಾಯಾಮವು ದೈಹಿಕವಾಗಿ ತೂಕ ಇಳಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿ ಉಪಾಯ. ಪ್ರತಿದಿನ ಕನಿಷ್ಠ ಒಂದು ಘಂಟೆ ವ್ಯಾಯಾಮಕ್ಕಾಗಿ ಮೀಸಲಿಡುವುದು ಉತ್ತಮ. ಕಾರ್ಡಿಯೋ ವ್ಯಾಯಾಮಗಳಾದ ರನ್ನಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್ , ಜಂಪಿಂಗ್ ನಂತಹ ವ್ಯಾಯಾಮಗಳು ಕೊಬ್ಬನ್ನು ಸುಡಲು ಸಹಕರಿಸುತ್ತವೆ. ಯೋಗ, ಪ್ರಾಣಾಯಾಮಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತವೆ.
ನೀರು ಸೇವನೆ:
ಎಲ್ಲದಕ್ಕೂ ಮುಖ್ಯವಾಗಿ ಪ್ರತಿದಿನ ಕನಿಷ್ಠ 8-10 ಗ್ಲಾಸ್ ನೀರು ಕುಡಿಯುವುದು ತುಂಬಾ ಮುಖ್ಯ. ದೇಹದಲ್ಲಿ ನೀರಿನ ಕೊರತೆ ಜೀರ್ಣ ಕ್ರೀಯೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೆ ಹೇರಳವಾಗಿ ನೀರು ಕುಡಿಯುವುದರಿಂದ ದೇಹದಿಂದ ವಿಷಕಾರಿ ಅಂಶಗಳು ಹೊರಬರುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಂಡು ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:Rose Plant Care: ಗುಲಾಬಿ ಗಿಡದಲ್ಲಿ ದಟ್ಟವಾಗಿ ಹೂವು ಅರಳಲು ಈ ರೀತಿ ಮಾಡಿ!
ಉತ್ತಮ ನಿದ್ದೆಮಾಡಿ :
ನಿದ್ದೆಯ ಕೊರತೆಯು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಿ ಹಸಿವನ್ನು ಹೆಚ್ಚಿಸಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ದೇಹಕ್ಕೆ ಕನಿಷ್ಠ 7-8 ಘಂಟೆಯ ನಿದ್ದೆ ಅತ್ಯವಶ್ಯಕ. ಅಧಿಕ ಒತ್ತಡ ಕಡಿಮೆ ಮಾಡಲು ಯೋಗ, ಧ್ಯಾನ ಅಭ್ಯಾಸ ಮಾಡಿಕೊಳ್ಳಿ.
Comments are closed.