Home News Luck: ಯುವಕನಿಗೆ ಅದೆಂಥಾ ಲಕ್ ನೋಡಿ! ಸೆಕೆಂಡ್ ಹ್ಯಾಂಡ್ ಕೋಟ್​​ ಜೇಬಿನಲ್ಲಿ​ ಸಿಕ್ಕಿದ್ದೇನು ಗೊತ್ತಾ?

Luck: ಯುವಕನಿಗೆ ಅದೆಂಥಾ ಲಕ್ ನೋಡಿ! ಸೆಕೆಂಡ್ ಹ್ಯಾಂಡ್ ಕೋಟ್​​ ಜೇಬಿನಲ್ಲಿ​ ಸಿಕ್ಕಿದ್ದೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Luck: ಅದೃಷ್ಟ (Luck) ಅನ್ನೋದು ಹೇಗೆ ಖುಲಾಯಿಸುತ್ತೆ ಅಂತ ಇದೊಂದು ಉದಾಹರಣೆ ಆಗಿದೆ. ಇಲ್ಲೊಬ್ಬ ಯುವಕನಿಗೆ ಅದೆಂಥಾ ಲಕ್ ನೋಡಿ, ಸೆಕೆಂಡ್ ಹ್ಯಾಂಡ್ ಜಾಕೆಟ್ ಖರೀದಿಸಿದವನ ಲೈಫೇ ಚೇಂಜ್ ಆಗಿದೆ.

ಹೌದು, ಹಳೆಯ ಜಾಕೆಟ್‌ ನಲ್ಲಿ ತನ್ನ ಅದೃಷ್ಟವನ್ನೇ ಬದಲಾಯಿಸಿಕೊಂಡ ಅಮೇರಿಕನ್ ವ್ಯಕ್ತಿಯ ಕಥೆ ಇದು. ಅಮೆರಿಕದ ಯುವಕನೊಬ್ಬ ಒಂದು ಅಂಗಡಿಯಿಂದ ಖರೀದಿಸಿದ ಸೂಟ್ ಜಾಕೆಟ್‌ ನ ಜೇಬಿನಲ್ಲಿ $700 (ಸುಮಾರು ರೂ. 58,000) ಸಿಕ್ಕಿದೆ.
ಈ ಕಥೆಯನ್ನು ರೆಡ್ಡಿಟ್‌ ನಲ್ಲಿ ಹಂಚಿಕೊಳ್ಳಲಾಗಿದ್ದು, ಯುವಕ ಡೇವಿಡ್ (ಬಳಕೆದಾರ ಹೆಸರು u/davidudeman) ಆಗಸ್ಟ್ 31 ರಂದು ತನಗೆ ಈ ಅನುಭವವಾಗಿದೆ ಎಂದು ಹೇಳಿದ್ದಾನೆ.

ಡೇವಿಡ್ ನ್ಯೂಸ್‌ ವೀಕ್ ವೆಬ್‌ ಸೈಟ್‌ಗೆ ನೀಡಿದ ಸಂದರ್ಶನದಲ್ಲಿ, ತನಗೆ 20 ವರ್ಷ ವಯಸ್ಸಾಗಿದ್ದು, ಸೆಕೆಂಡ್ ಹ್ಯಾಂಡ್ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಪಾಕೆಟ್‌ ಗಳನ್ನು ಪರಿಶೀಲಿಸುವ ಅಭ್ಯಾಸ ಹಲವು ವರ್ಷಗಳಿಂದ ಇದೆ ಎಂದು ಹೇಳಿದರು. ಎರಡು ವರ್ಷಗಳಿಂದ, ತಾನು ಪ್ರತಿ ಬಾರಿ ಥ್ರಿಫ್ಟ್ ಅಂಗಡಿಗೆ ಹೋದಾಗಲೆಲ್ಲಾ ಕೆಲವು ಬಟ್ಟೆಗಳ ಪಾಕೆಟ್‌ ಗಳನ್ನು ಪರಿಶೀಲಿಸುತ್ತಿದ್ದೆ ಎಂದು ಡೇವಿಡ್ ಹೇಳಿದರು.

ಇದನ್ನೂ ಓದಿ:Karnataka: ಅಪಘಾತದಲ್ಲಿ ಗಾಯಗೊಂಡವರಿಂದ ಚಿಕಿತ್ಸೆಗೂ ಮುನ್ನ ಹಣ ಕೇಳಿದ್ರೆ ವೈದ್ಯರಿಗೆ ಜೈಲು ಶಿಕ್ಷೆ!

ಈ ಬಾರಿ ಸೂಟ್ ವಿಭಾಗಕ್ಕೆ ಹೋಗಿ ಜಾಕೆಟ್‌ ಗಳ ಒಳಗಿನ ಪಾಕೆಟ್‌ಗಳನ್ನು ಪರಿಶೀಲಿಸಲು ಪ್ರಾರಂಭಿಸಿದೆ. ಹತ್ತನೇ ಜಾಕೆಟ್‌ ನ ಜೇಬಿನಲ್ಲಿ, ಅವನಿಗೆ ಒಂದು ಬಂಡಲ್ ಸಿಕ್ಕಿತು, ಅದು ಆರಂಭದಲ್ಲಿ ಆಟಿಕೆ ನೋಟು ಅಥವಾ ನಕಲಿ ನೋಟು ಎಂದುಕೊಂಡಿದ್ದೆ ಎಂದಿದ್ದಾನೆ. ಡೇವಿಡ್ ಹಿಂಜರಿಕೆಯಿಲ್ಲದೆ ಜಾಕೆಟ್ ಅನ್ನು ಖರೀದಿಸಿ ಬಂಡಲ್ ತೆರೆಯಲು ತನ್ನ ಕಾರಿಗೆ ಹೋದನು. ಅದು $100 ನೋಟುಗಳನ್ನು ಹೊಂದಿರುವ ಬ್ಯಾಂಕ್ ಲಕೋಟೆಯಾಗಿತ್ತು. ಮೊದಲಿಗೆ ಅದು ಕೇವಲ $200 ಎಂದು ಭಾವಿಸಿದ್ದೆ, ಆದರೆ ಎಣಿಸಿದ ನಂತರ, ಮೊತ್ತವು $700 ತಲುಪಿತು ಎಂದು ಹೇಳಿಕೊಂಡಿದ್ದಾನೆ.