GST: GST ಪರಿಷ್ಕರಣೆ ಬೆನ್ನಲ್ಲೇ ಐಪಿಎಲ್ ಟಿಕೆಟ್‌ಗಳು ದುಬಾರಿ!

GST: ಸರಕು ಮತ್ತು ಸೇವಾ ತೆರಿಗೆ(GST) ಸ್ಲ್ಯಾಬ್ ಪರಿಷ್ಕರಣೆ ಬೆನ್ನಲ್ಲೇ 2026ನೇ ಆವೃತ್ತಿಯ ಐಪಿಎಲ್ ಪಂದ್ಯಗಳ (IPL Match) ಟಿಕೆಟ್ ದರ ದುಬಾರಿಯಾಗಲಿದೆ.

ಇಲ್ಲಿಯವರೆಗೆ ಐಪಿಎಲ್ ಟಿಕೆಟ್‌ಗಳು 28% ರಷ್ಟು ತೆರಿಗೆ ಸ್ಲ್ಯಾಬ್ ಅಡಿಯಲ್ಲಿದ್ದವು. ಆದರೆ ಪರಿಷ್ಕರಣೆಯಾದ ಬಳಿಕ ಇವು 40% ರ ವಿಭಾಗದಲ್ಲಿ ಬರುವುದರಿಂದ ಟಿಕೆಟ್ ದರ (Ticket Price) ಏರಿಕೆಯಾಗಲಿದೆ.
ತಂಬಾಕು ಉತ್ಪನ್ನಗಳು ಹಾಗೂ ಕ್ಯಾಸಿನೊ, ರೇಸ್ ಕ್ಲಬ್‌ಗಳು ಮತ್ತು ಇತರ ಐಷಾರಾಮಿ ಖರ್ಚುಗಳಿಗೆ 40% ತೆರಿಗೆ ಹಾಕಲಾಗಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬೆಂಗಳೂರಿನ ಪಂದ್ಯದ ಟಿಕೆಟ್ ದರ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.
ಎಷ್ಟು ಏರಿಕೆಯಾಗಬಹುದು?
ಈ ಸೀಸನ್ ವರೆಗೆ 500 ರೂ. ಮೂಲ ಬೆಲೆ ಹೊಂದಿದ್ದ ಟಿಕೆಟ್ 28% ಜಿಎಸ್‌ಟಿ ಹಾಕಲಾಗುತ್ತಿತ್ತು. ಹೀಗಾಗಿ ಒಂದು ಟಿಕೆಟ್ ದರ 640 ರೂ. ಆಗುತ್ತಿತ್ತು. 2026 ರ ಆವೃತ್ತಿಯಲ್ಲಿ ಸರ್ಕಾರವು 40% ರಷ್ಟು ಜಿಎಸ್‌ಟಿ ವಿಧಿಸಿದ ನಂತರ ಅದೇ ಟಿಕೆಟ್ ದರ 700 ರೂ.ಗೆ ಏರಿಕೆಯಾಗಲಿದೆ.
ಇದನ್ನೂ ಓದಿ:Crime: ‘ನನಗೆ ಏಕೆ ವಧು ಹುಡುಕಿಲ್ಲ’ – ತಾಯಿಯನ್ನು ಗುದ್ದಿ ಕೊ*ಲೆ ಮಾಡಿದ ವ್ಯಕ್ತಿ
ಈ ವರ್ಷ ಆರ್‌ಸಿಬಿಯ ಬೆಂಗಳೂರು ಪಂದ್ಯದ ದುಬಾರಿ ಟಿಕೆಟ್ ಬೆಲೆ 42,350 ರೂ. ಇತ್ತು. ಈ ದರಕ್ಕೆ 40% ಜಿಎಸ್‌ಟಿ ಹಾಕಿದರೆ ಸುಮಾರು 4 ಸಾವಿರ ರೂ. ಏರಿಕೆ ಕಾಣಬಹುದು. ಚೆಪಾಕ್‌ನಲ್ಲಿ ಅತ್ಯಂತ ದುಬಾರಿ ಟಿಕೆಟ್ (7,000 ರೂ.) 7,656 ಕ್ಕೆ ಏರುವ ಸಾಧ್ಯತೆಯಿದೆ. ಆರ್‌ಸಿಬಿಯ ಬೆಂಗಳೂರು ಪಂದ್ಯದ ಕಡಿಮೆ ಬೆಲೆಯ ಟಿಕೆಟ್‌ಗೆ 2,300 ರೂ. ಇತ್ತು. ಇನ್ನು ಮುಂದೆ ಈ ದರ 2,515 ರೂ. ಆಗಬಹುದು.
Comments are closed.