Nagalakshmi Choudhary: ಸೌಜನ್ಯ ಪ್ರಕರಣದಲ್ಲಿ ಲೇಡಿ ಒಬ್ಬಳು ನನ್ನನ್ನೇ ರೇ*ಪ್ ಮಾಡೋ ಕಮೆಂಟ್ ಹಾಕಿದ್ಲು – ಶಾಕಿಂಗ್ ಸತ್ಯ ಬಿಚ್ಚಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ

Share the Article

Nagalakshmi Choudhary: ಸುಮಾರು 12 13 ವರ್ಷಗಳಿಗೂ ಮುಂಚೆ ಧರ್ಮಸ್ಥಳದ ನೇತ್ರಾವತಿ ಬಳಿ ಅತ್ಯಾಚಾರಗೊಂಡು ದುರಂತ ಸಾವಿಗೀಡಾದ ಸೌಜನ್ಯ ಪ್ರಕರಣ ಇಂದಿಗೂ ಕೂಡ ಜೀವಂತವಾಗಿದ್ರೂ, ನ್ಯಾಯ ಸಿಗದಂತಾಗಿದೆ. ಸೌಜನ್ಯ ಅಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಅನೇಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ, ಇನ್ನೂ ಕೆಲವರು ಇಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ಈ ವಿಚಾರದ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಶಾಕಿಂಗ್ ವಿಚಾರ ಒಂದನ್ನು ರೆವಿಲ್ ಮಾಡಿದ್ದಾರೆ.

ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಯವರು ಸೌಜನ್ಯ ಪ್ರಕರಣದಲ್ಲಿ ನನ್ನನ್ನೇ ರೇಪ್ ಮಾಡೋ ಕಮೆಂಟ್ ಮಾಡಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಮಾತನಾಡಿದವರು ತನಿಖೆಯನ್ನು ಮೊದಲು ಆರಂಭಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ನಂತರ SIT ತನಿಖೆ ಆರಂಭವಾಯಿತು. ಆದರೆ ಇದರ ನಡುವೆಯೇ, ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ (Dr. Nagalakshmi Choudhary) ಅವರ ವಿಡಿಯೋ ಮಿಸ್​ಯೂಸ್​ ಆಗಿದ್ದು, ಅದರಲ್ಲಿ ಒಂದು ಕಮೆಂಟ್​ನಲ್ಲಿ ನಿಮ್ಮನ್ನು ರೇ*ಪ್ ಮಾಡಲಾಗುವುದು ಎಂದು ಹೇಳಲಾಗಿತ್ತು ಎಂದಿದ್ದಾರೆ.

ಬಳಿಕ ಈ ಕಮೆಂಟ್ ಕುರಿತು ಕೇಸ್ ದಾಖಲಿಸಿ ತನಿಖೆಯನ್ನು ಆರಂಭಿಸಿದೆವು. ಆದರೆ ಅದು ಫೇಕ್ ಅಕೌಂಟಾಗಿತ್ತು. ಆಶ್ಚರ್ಯದ ವಿಚಾರ ಏನೆಂದರೆ ಅಪೇಕ್ ಅಕೌಂಟ್ ಮಾಡಿದ್ದು ಒಬ್ಬಳು ಲೇಡಿ. ಆಕೆ ಎಂಜಿನಿಯರಿಂಗ್​ ವಿದ್ಯಾರ್ಥಿನಿಯಾಗಿದ್ದಳು. ನಾನೇನಾದರೂ ಸ್ವಲ್ಪ ಮುಂದೆ ಹೋಗಿದ್ದರೆ ಆಕೆ ಅರೆಸ್ಟ್​ ಕೂಡ ಆಗುತ್ತಿದ್ದಳು ಎನ್ನುತ್ತಲೇ ಫೇಕ್​ ಅಕೌಂಟ್​ ಕ್ರಿಯೇಟ್​ ಮಾಡಿ ಇಂಥ ಅಸಭ್ಯ ಕಮೆಂಟ್ಸ್​ ಹಾಕಿದರೆ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಬಗ್ಗೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಇದನ್ನೂ ಓದಿ:G Parameshwar: ವಿದೇಶಿಗರು ʼಪ್ರವಾಸಿ ವೀಸಾʼ ಪಡೆದು ರಾಜ್ಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ: ಗೃಹ ಸಚಿವ

Comments are closed.