Putin: ಕಾರೊಳಗೆ ಮೋದಿ ಜೊತೆ ಏನು ಸಂಭಾಷಣೆ ನಡೆಯಿತು? ಕೊನೆಗೂ ರಿವಿಲ್ ಮಾಡಿದ ರಷ್ಯಾ ಅಧ್ಯಕ್ಷ ಪುಟಿನ್

Putin: ಇತ್ತೀಚಿಗೆ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆ ಭಾರತ ರಷ್ಯಾ ಸೇರಿದಂತೆ ದೇಶದ ಅನೇಕ ರಾಷ್ಟ್ರಗಳು ಭಾಗವಹಿಸಿದ್ದವು. ಈ ಸಭೆಯ ಬಳಿಕ ಚೀನಾದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದು ಭಾರೀ ಸದ್ದು ಮಾಡಿತ್ತು. ಇದೀಗ ಈ ಕುರಿತು ಕೊನೆಗೂ ರಷ್ಯಾ ಅಧ್ಯಕ್ಷ ಪುಟಿನ್ ಮೌನ ಮುರಿದಿದ್ದಾರೆ.

ಹೌದು, ಸಭೆಯ ಬಳಿಕ ರಷ್ಯಾ ಅಧ್ಯಕ್ಷರ ಕಾರಿನಲ್ಲಿ ಮೋದಿ ಮತ್ತು ಪುಟಿನ್ ಒಟ್ಟಿಗೆ 50 ನಿಮಿಷಗಳ ಕಾಲ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರು ಯಾವ ವಿಚಾರ ಬಗ್ಗೆ ಮಾತನಾಡಿದ್ದರು ಎಂಬುದನ್ನು ಹೇಳಿರಲಿಲ್ಲ. ಇದೀಗ ಈ ಸಂಬಂಧ ಪುಟಿನ್ ಅವರು ಪ್ರತಿಕ್ರಿಯಿಸಿದ್ದಾರೆ. ಕಾರಿನಲ್ಲಿ ಪ್ರಯಾಣ ಬೆಳೆಸಿದಾಗ ಯುಎಸ್ ಮಾತುಕತೆಯ ಬಗ್ಗೆ ಸಂಭಾಷಣೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.
ಚೀನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ ಅವರು, “ಇದು ರಹಸ್ಯವಲ್ಲ, ನಾವು ಅಲಾಸ್ಕಾದಲ್ಲಿ ಏನು ಮಾತನಾಡಿದ್ದೇವೆ ಎಂಬುದನ್ನು ನಾನು ಅವರಿಗೆ ಹೇಳಿದೆ.” ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ:Mysuru Dasara: ಮೈಸೂರು ದಸರಾ ಹಬ್ಬಕ್ಕೆ ಬೆಂಗಳೂರು, ಬೆಳಗಾವಿ, ಮೈಸೂರಿಗೆ ವಿಶೇಷ ರೈಲು
Comments are closed.