Salary : ಪ್ರಪಂಚದ ಬಲಿಷ್ಠ ದೇಶಗಳ ನಾಯಕರ ಸಂಬಳವೆಷ್ಟು?

Share the Article

Salary : ನಮ್ಮಲ್ಲಿ ಆಗಾಗ ದೇಶದ ಪ್ರಧಾನಿ, ರಾಷ್ಟ್ರಪತಿಯ, ಮುಖ್ಯಮಂತ್ರಿ ಹಾಗೂ ಇತರೆ ರಾಜಕೀಯ ನಾಯಕರುಗಳ ಸಂಬಳಗಳ ಕುರಿತು ಚರ್ಚೆಯಾಗುತ್ತಿರುತ್ತದೆ. ಇದು ನಮ್ಮ ದೇಶದ ವಿಚಾರ ಆಯ್ತು. ಆದರೆ ಇಡೀ ವಿಶ್ವದ ಬಲಿಷ್ಠ ರಾಷ್ಟ್ರಗಳ ನಾಯಕರ ಸಂಬಳವೆಸ್ಟ್ ಎಂಬುದು ನಿಮಗೆ ಗೊತ್ತೇ. ಇಲ್ಲಿದೆ ನೋಡಿ ಡೀಟೇಲ್ಸ್.

ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಪ್ರತಿ ತಿಂಗಳಿಗೆ 1.66 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಇದರಲ್ಲಿ ಸಂಸದೀಯ ಭತ್ಯೆ 45,000 ರೂ., ವೆಚ್ಚ ಭತ್ಯೆ 3000ರೂ., ದಿನಭತ್ಯೆ 2000 ರೂ. ಮತ್ತು ಮೂಲ ವೇತನ 50,000 ರೂಪಾಯಿ ಸೇರಿದೆ. ಇನ್ನು ಭಾರತದ ರಾಷ್ಟ್ರಪತಿಯವರ ಸಂಬಳ ರೂ. 5 ಲಕ್ಷಗಳು, ಭಾರತದ ಉಪ ರಾಷ್ಟ್ರಪತಿಗಳು ರೂ. 4 ಲಕ್ಷ ಸಂಬಳ. ಸಂಸತ್ತಿನಲ್ಲಿ ಪ್ರತಿ ಸಂಸದರು ತಿಂಗಳಿಗೆ ರೂ.1 ಲಕ್ಷ ಮೂಲ ವೇತನವನ್ನು ಪಡೆಯುತ್ತಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಬಳದ ಬಗ್ಗೆ ಕೇಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರಾ. ಐಷಾರಾಮಿ ಜೀವನ, ಬಿಗಿ ಭದ್ರತೆ, ಶ್ವೇತಾ ಭವನದಲ್ಲಿ ವಾಸ್ತವ್ಯ ಹೂಡಿ ಅಧಿಕಾರ ಚಲಾಯಿಸುವ ಟ್ರಂಪ್ ಅವರಿಗೆ ವಾರ್ಷಿಕವಾಗಿ ಬರೋಬ್ಬರಿ 3,52,34,799 ರೂಪಾಯಿಗಳು. ಭಾರತದ ಪ್ರಧಾನಿ ಸಂಬಳಕ್ಕೆ ಹೋಲಿಸಿದರೆ, ಇಪ್ಪತ್ತು ಪಟ್ಟು ಹೆಚ್ಚು. ಇಷ್ಟೇ ಅಲ್ಲ ವೈಯಕ್ತಿಕ ಖರ್ಚಿಗಾಗಿ ವಾರ್ಷಿಕ 50,000 ಡಾಲರ್ (42,18, 400 ರೂಪಾಯಿ ) ತೆರಿಗೆ ರಹಿತ ಭತ್ಯೆ ಪಡೆಯುತ್ತಾರೆ. ಅದರ ಜೊತೆಗೆ ಅಧ್ಯಕ್ಷರ ಪ್ರಯಾಣಕ್ಕಾಗಿ 1,00,000 ಡಾಲರ್(84,36,447.82 ರೂಪಾಯಿ) ಭತ್ಯೆ ಹಾಗೂ 19,000 ಡಾಲರ್(16,02,992) ಮನರಂಜನಾ ಭತ್ಯೆ ಪಡೆಯುತ್ತಾರೆ. ಅಮೆರಿಕ ಅಧ್ಯಕ್ಷರ ಒಂದು ತಿಂಗಳ ಸಂಬಳ ಭಾರತದ ಪ್ರಧಾನಿಯವರ ವಾರ್ಷಿಕ ಸಂಬಳಕ್ಕೂ ಕೂಡ ಸಮವಲ್ಲವೆಂದು ವರದಿಗಳು ಹೇಳುತ್ತವೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಗ್ಗೆ ನೋಡುವುದಾದರೆ, 1952 ರಲ್ಲಿ ಜನಿಸಿದ ಪುಟಿನ್ ವಿಶ್ವದ ಶ್ರೀಮಂತ ನಾಯಕರಲ್ಲಿ ಒಬ್ಬರಾಗಿದ್ದಾರೆ. ಪುಟಿನ್ ವಾರ್ಷಿಕ 14,0000 ಡಾಲರ್ (ಸುಮಾರು 11.7 ಕೋಟಿ) ಸಂಬಳ ಪಡೆಯುತ್ತಾರೆ. ಹಾಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸಂಬಳವನ್ನು ಗಮನಿಸಿದರೆ, ಅವರು ವಾರ್ಷಿಕವಾಗಿ 1,992,000 ಲಕ್ಷ ರೂ. ವೇತನ ಪಡೆಯುತ್ತಾರೆ.

ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಅವರ ಬಗ್ಗೆ ನೋಡುವುದಾದರೆ 1953 ಜನಿಸಿದ ಅವರು, ಚೀನಾ ಕಂಡ ಪ್ರತಿಮಾ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇನ್ನು ಸಂಬಳದ ಬಗ್ಗೆ ನೋಡುವುದಾದರೆ, ವಾರ್ಷಿಕವಾಗಿ 18,05,783 ರೂಪಾಯಿಯನ್ನು ಪಡೆಯುತ್ತಾರೆ. ಭಾರತಕ್ಕೆ ಹೋಲಿಸಿದರೆ ಎರಡು ಲಕ್ಷ ಕಡಿಮೆ ಸಂಬಳವನ್ನು ಜಿಂಗ್ ಪಿಂಗ್ ಹೊಂದಿದ್ದಾರೆ.

ಇದನ್ನೂ ಓದಿ:UPI ಪಾವತಿ ಮಿತಿ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ

Comments are closed.