Prajwal Revanna ಪ್ರಕರಣ – ಪೆನ್​ಡ್ರೈವ್​ನಲ್ಲಿ ಇದ್ದದ್ದೇನು? ಶಾಕಿಂಗ್​ ವಿಚಾರ ಬಿಚ್ಚಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ

Share the Article

Prajwal Revanna : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಗಂಭೀರ ಅತ್ಯಾಚಾರ ಪ್ರಕರಣ ಸಾಭೀತಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 11.5ಲಕ್ಷ ರೂ ದಂಡವನ್ನು ವಿಧಿಸಿದೆ. ಪ್ರಜ್ವಲ್ ರೇವಣ್ಣ ಪ್ರಕರಣ ವೈರಲ್ ಆದ ಸಂದರ್ಭದಲ್ಲಿ ಪೆಂಡ್ರೈವ್ ವಿಚಾರ ಕೂಡ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಅದರಲ್ಲಿ ಏನಿತ್ತು ಎಂಬುದು ಎಲ್ಲರ ಕುತೂಹಲ ಕೆರಳಿಸಿತ್ತು. ಅದ್ಯ ಇದೀಗ ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೇ ಮಾತನಾಡಿದ್ದು ಪೆನ್ ಡ್ರೈವ್ನಲ್ಲಿ ಏನಿತ್ತು ಎಂಬುದನ್ನು ರಿವಿಲ್ ಮಾಡಿದ್ದಾರೆ.

 

ಹೌದು, ಪ್ರಜ್ವಲ್​ ರೇವಣ್ಣ ಅವರ ಕರ್ಮಕಾಂಡ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದಂತಹ ಆರಂಭದಲ್ಲಿ ಪೆನ್​ಡ್ರೈವ್​ನಲ್ಲಿದ್ದ ವಿಡಿಯೋವನ್ನು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ (Dr Nagalakshmi Choudhary ) ವೀಕ್ಷಿಸಿದ್ದರು. ಇದೀಗ ಅವರು ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ರಿವೀಲ್​ ಮಾಡಿದ್ದಾರೆ. ಅಂದು ತಾವು ನೋಡಿದ ಪೆನ್​ಡ್ರೈವ್​ (Prajwal Revanna Pen drive case)ನಲ್ಲಿ ಏನಿತ್ತು ಎನ್ನುವುದನ್ನು ತಿಳಿಸಿದ್ದಾರೆ.

 

“ಮನೆ ಕೆಲಸದವಳನ್ನು ಅಟ್ಟಾಡಿಸಿಕೊಂಡು … ಮಾಡುವುದು ಇವೆಲ್ಲವೂ ಅದರಲ್ಲಿ ರೆಕಾರ್ಡ್​ ಆಗಿತ್ತು. ಅದನ್ನು ನೋಡಿದ ತಕ್ಷಣ ಏನೋ ಆಯ್ತು. ಅದರಲ್ಲಿಯೂ ಮಹಿಳಾ ಆಯೋಗದ ಅಧ್ಯಕ್ಷೆ ಸ್ಥಾನದಲ್ಲಿ ಕುಳಿತಾದ ಇದರ ಬಗ್ಗೆ ಗಮನ ಹರಿಸುವುದು ಸೂಕ್ತ ಎನ್ನಿಸಿ ಮಧ್ಯಾಹ್ನವೇ ಪ್ರೆಸ್​ಮೀಟ್​ ಕರೆದೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದೆ. ಒಬ್ಬರಲ್ಲ, ಇಬ್ಬರಲ್ಲ… ಯಾವ್ಯಾವ ಸ್ಥಿತಿಗಳಲ್ಲಿ ಅವರು ಈ ರೀತಿಯ ಕೆಲಸ ಮಾಡಬೇಕಾಯಿತು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಇದರ ತನಿಖೆ ಆಗಲೇಬೇಕು, ಇದಕ್ಕೆ ನ್ಯಾಯ ಸಿಗಲೇಬೇಕು ಎಂದು ಎನ್ನಿಸಿತು. ಜೊತೆಗೆ ತುಂಬಾ ಜನ ಹೆಣ್ಣುಮಕ್ಕಳ ಮಾನಹಾನಿಯಾಗಿದೆ ಎನ್ನುವುದು ತಿಳಿಯಿತು. ಎಷ್ಟೋ ಮಂದಿ ಊರು ಬಿಟ್ಟು ಹೋದರು. ಇವತ್ತು ಎಷ್ಟು ಮಂದಿ ಎಲ್ಲಿ ಇದ್ದಾರೆ ಎನ್ನುವುದೇ ಗೊತ್ತಿಲ್ಲ ಎಂದು ಅವರ ವಿವರಿಸಿದ್ದಾರೆ.

Comments are closed.