Car Purchase : ದೇಶಾದ್ಯಂತ ಕಾರು ಮಾರಾಟ ಇಳಿಕೆ – ಕಾರಣ ಗೊತ್ತಾದ್ರೆ ನೀವು ಕೂಡ ಕಾರು ಖರೀದಿಸೋಲ್ಲ!!

Car Purchase : ದೇಶಾದ್ಯಂತ ಗ್ರಾಹಕರು ಕಾರು ಖರೀದಿಯಲ್ಲಿ ಹಿಂದೇಟು ಹಾಕುತ್ತಿದ್ದು ಇದರಿಂದ ಕಾರು ಮಾರಾಟ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಇದಕ್ಕೆ ಕಾರಣವೂ ಕೂಡ ಇದೆ, ಈ ಕಾರಣವೇನೆನಾದರೂ ನೀವು ತಿಳಿದರೆ ನೀವು ಕೂಡ ಕಾರು ಖರೀದಿಗೆ ಮುಂದಾಗುವುದಿಲ್ಲ.

ಹೌದು, GST ಕೌನ್ಸಿಲ್ ಸಣ್ಣ ಕಾರುಗಳ ಮೇಲಿನ ತೆರಿಗೆ ದರವನ್ನು ಪ್ರಸ್ತುತ 28% ರಿಂದ ಸೆಪ್ಟೆಂಬರ್ನಲ್ಲಿ 18% ಕ್ಕೆ ಇಳಿಸುತ್ತದೆ ಎಂಬ ವ್ಯಾಪಕ ನಿರೀಕ್ಷೆಯಿಂದ ಈ ನಿಧಾನಗತಿ ಉಂಟಾಗಿದೆ. ಹಾಗೆಯೇ ದೊಡ್ಡ ಕಾರುಗಳು ಮತ್ತು SUV ಗಳು 43% ರಿಂದ ಸುಮಾರು 40% ಕ್ಕೆ ಕಡಿತವನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (GST) ಯಲ್ಲಿ ಕಡಿತದ ನಿರೀಕ್ಷೆಯದ್ದು, ಆ ಸಮಯದಲ್ಲಿ ಗ್ರಾಹಕರು ಕಾರು ಖರೀದಿಸಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಆಗಸ್ಟ್ 2025 ರಲ್ಲಿ ಸಗಟು ಕಾರು ರವಾನೆಯು ವರ್ಷದಿಂದ ವರ್ಷಕ್ಕೆ ಸರಿಸುಮಾರು 7% ರಿಂದ 8% ರಷ್ಟು ಕುಸಿದಿದೆ, ಇದು ಮುಂಬರುವ ಹಬ್ಬದ ಋತುವಿನಲ್ಲಿ ವಾಹನ ಮಾರಾಟವನ್ನು ಹೆಚ್ಚಿಸುವ ನಿರೀಕ್ಷೆಯಿರುವ GST ಸುಧಾರಣೆಗಾಗಿ ಖರೀದಿದಾರರು ಕಾಯುತ್ತಿದ್ದರಿಂದ ಮಾರುಕಟ್ಟೆ ವಿರಾಮವನ್ನು ಪ್ರತಿಬಿಂಬಿಸುತ್ತದೆ. ಇನ್ನು ಶೀಘ್ರದಲ್ಲೇ ಘೋಷಿಸಲಾಗುವ ಜಿಎಸ್ಟಿ ಪರಿಷ್ಕರಣೆಯು ಮುಂಬರುವ ಹಬ್ಬದ ಋತುವಿನಲ್ಲಿ ಮಾರಾಟದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಉದ್ಯಮದ ಒಳಗಿನವರು ಆಶಾವಾದ ವ್ಯಕ್ತಪಡಿಸಿದ್ದಾರೆ.
Comments are closed.