R V Deshpande: ಜಿಲ್ಲೆಗೆ ಹೆರಿಗೆ ಆಸ್ಪತ್ರೆ ಕಟ್ಟಿಸಿ ಕೊಡಿ ಎಂದ ಮಹಿಳಾ ಪತ್ರಕರ್ತೆ – ‘ನಿನ್ನ ಹೆರಿಗೆ ಬೇರೆ ಕಡೆ ಮಾಡಿಸುವೆ’ ಎಂದ ಹಿರಿಯ ಶಾಸಕ ದೇಶಪಾಂಡೆ

R V Deshpande: ಹೆರಿಗೆ ಆಸ್ಪತ್ರೆಯ ಬೇಡಿಕೆ ಇಟ್ಟಿದ್ದಕ್ಕೆ ಮಹಿಳಾ ಪತ್ರಕರ್ತೆ ಒಬ್ಬರಿಗೆ ಕಾಂಗ್ರೆಸ್ ಹಿರಿಯ ಶಾಸಕ R V ದೇಶಪಾಂಡೆಯವರು ನೀಡಿರುವ ಉತ್ತರ ಸದ್ಯ ವಿವಾದವನ್ನು ಹುಟ್ಟು ಹಾಕಿದೆ.

ಹೌದು, “ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಹೆರಿಗೆ ಆಸ್ಪತ್ರೆ ಇಲ್ಲ, ಮಹಿಳೆಯರು ಪರದಾಡುತ್ತಿದ್ದಾರೆ. ಹೀಗಾಗಿ ತಾವು ಏನಾದರೂ ಮನಸ್ಸು ಮಾಡಿ ಜಿಲ್ಲೆಗೆ ಒಂದು ಹೆರಿಗೆ ಆಸ್ಪತ್ರೆಯನ್ನು ಕಟ್ಟಿಸಿ ಕೊಡಿ” ಎಂದು ಮಹಿಳಾ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ನೀಡಿದ ಉತ್ತರ ಸದ್ಯ ರಾಜ್ಯಾದ್ಯಂತ ವಿವಾದವನ್ನು ಸೃಷ್ಟಿಸಿದೆ.
ಆರ್‌ವಿ ದೇಶಪಾಂಡೆ ಅವರ ಹೇಳಿಕೆಯಿಂದ ಆಘಾತಕ್ಕೊಳಗಾದ ಪತ್ರಕರ್ತೆ “ಏನ್ ಸರ್” ಎಂದು ಮರುಪ್ರಶ್ನಿಸುತ್ತಲೇ, ” ಮತ್ತೆ ಅದೇ ಉತ್ತರವನ್ನು ಅವರು ಪುನರುಚ್ಚರಿಸುತ್ತಾರೆ ಆಗ ಆ ಮಹಿಳಾ ಪತ್ರಕರ್ತೆ ಧೈರ್ಯಗೆಡದೆ “ಆಯ್ತು ಸರ್, ನಮ್ಮದೆಲ್ಲ ಆಗಿದೆ.. ಈಗಿನ ಮಹಿಳೆಯರಿಗಾದರೂ ಅದು ಉಪಯೋಗವಾಗುತ್ತದೆ ಎಂದು ಹೇಳುತ್ತಾರೆ. ಆಗ ಆರ್‌ವಿ ದೇಶಪಾಂಡೆ ಅಲ್ಲಿಂದ ಹೊರಟು ನಿಂತರು.
Comments are closed.