Bangalore: ಧಾರಾವಾಹಿ ನಿರ್ಮಾಣಕ್ಕಾಗಿ 1 ಕೋಟಿ ಹಣ ಪಡೆದು ವಂಚನೆ: ನಟಿ ನಿರ್ಮಲಾ, ಗಂಡ ಸತ್ಯಾ ವಿರುದ್ಧ ಕೇಸ್ ದಾಖಲು

Share the Article

Bangalore: ಲಕ್ಷ್ಮಿ ನಿವಾಸ ಧಾರವಾಹಿ ನಿರ್ಮಾಣಕ್ಕಾಗಿ ಹಣ ಪಡೆದು ವಂಚನೆ ಮಾಡಿದ ಆರೋಪ ನಟ ಸತ್ಯ ಮತ್ತು ನಟಿ ನಿರ್ಮಲಾ ದಂಪತಿ ವಿರುದ್ಧ ಕೇಳಿ ಬಂದಿದೆ. ಅಗ್ನಿ ಯು ಸಾಗರ್ ಎಂಬಾತ ಬೆಂಗಳೂರಿನ (Bangalore) ಸಿ.ಕೆ. ‌ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ.

ಸೃಜನ್ ಲೋಕೇಶ್ ಒಡೆತನದ ಲೋಕೇಶ್ ಪ್ರೊಡಕ್ಷನ್ಸ್ ನ ಜಿಪಿಎ ಹೋಲ್ಡರ್ ಆಗಿರುವ ಅಗ್ನಿ ಯು ಸಾಗರ್ ಎಂಬುವವರು ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿ ನಿರ್ಮಾಣಕ್ಕಾಗಿ ಒಂದು ಕೋಟಿ ಹಣವನ್ನು ನಟ ಸತ್ಯ ದಂಪತಿ ಸಾಲವಾಗಿ ಪಡೆದಿದ್ದಾರೆ. 2023ರ ನವೆಂಬರ್ ನಲ್ಲಿ ಅಗ್ರಿಮೆಂಟ್ ಅನ್ನು ಆರೋಪಿಗಳು ಮಾಡಿಕೊಂಡಿದ್ದರು. ಏಪ್ರಿಲ್‌ 1ನೇ ತಾರೀಖು 2024 ರಿಂದ ಪ್ರತೀ ತಿಂಗಳು 5 ಲಕ್ಷ ಹಣವನ್ನು ವಾಪಸ್ ಕೊಡೋದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದ್ರೆ ಈವರೆಗೂ ಯಾವುದೇ ಹಣ ಪಾವತಿಯಾಗಿಲ್ಲ. MOU ನಲ್ಲಿರುವ ಷರತ್ತು ಉಲ್ಲಂಘನೆ ಮಾಡಿರೋದಾಗಿ ದೂರು ಅನ್ನು ಪೊಲೀಸ್ ಠಾಣೆಗೆ ನೀಡಲಾಗಿದೆ. ನಟ ಸೃಜನ್ ಲೋಕೇಶ್ ಅವರಿಂದ ಹಣವನ್ನು ಸಾಲವಾಗಿ ಪಡೆದಿದ್ದಾರೆ. ಆದರೇ, ಸಾಲದ ಹಣವನ್ನೇ ವಾಪಸ್ ನೀಡದೇ ವಂಚನೆ ಮಾಡಿದ್ದಾರೆ ಎಂಬ ಆರೋಪದಡಿ ಕೇಸ್ ದಾಖಲಾಗಿದೆ.

Life style: ನಿಮಗೆ 50 ವರ್ಷಗಳಾಗುತ್ತಿದ್ದಂತೆ ನಿಮ್ಮ ಜೀವನಶೈಲಿ ಹೀಗಿರಲಿ!

Comments are closed.