Pooja Flowers: ಪ್ರಸಾದವಾಗಿ ಕೊಟ್ಟ ಹೂವು ಒಣಗಿದರೆ ಅದನ್ನು ಎಸೆಯಬಹುದೇ?

Pooja Flowers: ಪೂಜೆಯ ಸಮಯದಲ್ಲಿ ದೇವರಿಗೆ ಅರ್ಪಿಸಿದ ಹೂವನ್ನು (Pooja Flowers) ಅರ್ಚಕರು ಪ್ರಸಾದವಾಗಿ ನಮಗೆ ನೀಡುತ್ತಾರೆ. ಇದನ್ನು ನಾವು ಪ್ರಸಾದವೆಂದು ಕಣ್ಣಿಗೆ ಒತ್ತಿಕೊಂಡು ತಲೆಯ ಮೇಲೆ, ಕಿವಿಯ ಮೇಲೆ ಅಥವಾ ನಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತೇವೆ.

ಆದ್ರೆ ದೇವರ ಪ್ರಸಾದವಾಗಿ ತಂದ ಹೂವುಗಳು ಒಂದಿಷ್ಟು ಸಮಯ ಕಲೆದ ನಂತರ ಬಾಡಿ ಹೋಗುತ್ತದೆ. ಅಂದರೆ ಅದು ಒಣಗಿ ಹೋಗುತ್ತದೆ. ಕೆಲವರು ಈ ಒಣಗಿದ ಹೂವನ್ನು ಎಸೆಯುತ್ತಾರೆ. ಇನ್ನು ಕೆಲವರು ಇದನ್ನು ಎಸೆಯುವುದು ತಪ್ಪು ಎಂದು ಹೇಳುತ್ತಾರೆ. ದೇವರ ಪ್ರಸಾದವಾಗಿ ತೆಗೆದುಕೊಂಡ ಹೂವು ಒಣಗಿದಾಗ ಅದನ್ನು ಏನು ಮಾಡಬೇಕು? ಎಸೆಯಬಹುದೇ.? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಪ್ರಸಾದವಾಗಿ ಕೊಟ್ಟ ಹೂವು ಒಣಗಿದರೆ ಏನು ಮಾಡಬೇಕು.?
ನೀವು ದೇವಸ್ಥಾನಗಳಿಗೆ ಅಥವಾ ಯಾವುದೇ ಧಾರ್ಮಿಕ ಕಾರ್ಯಗಳಿಗೆ ಹೋದಂತಹ ಸಮಯದಲ್ಲಿ ನಿಮಗೆ ಹೂವುಗಳನ್ನು ಪ್ರಸಾದವಾಗಿ ನೀಡಿದ್ದರೆ ಅದನ್ನು ನಿಮ್ಮ ಬಲಗೈಯಿಂದ ತೆಗೆದುಕೊಂಡು ಆ ಹೂವನ್ನು ದೇವರನ್ನು ಸ್ಮರಿಸುತ್ತಾ ಹಣೆಗೆ ಸ್ಫರ್ಶಿಸಿ ಮನೆಗೆ ತೆಗೆದುಕೊಂಡು ಬರಬೇಕು. ನಂತರ ಆ ಹೂವನ್ನು ದೇವರ ಕೋಣೆಯಲ್ಲಿ ಇಡಿ. ಹೂವು ಒಣಗಿದಾಗ ಅದನ್ನು ಎಲ್ಲೆಂದರಲ್ಲಿ ಮನಬಂದಂತೆ ಎಸೆಯುವ ಬದಲು ನೀವು ಹಣ ಇಡುವ ಸ್ಥಳದಲ್ಲಿ ಅಥವಾ ತಿಜೋರಿಯಲ್ಲಿ ಇಟ್ಟುಕೊಳ್ಳಿ. ಈ ರೀತಿ ಮಾಡುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ಹೂವನ್ನು ನೀವು ನಿಮ್ಮ ಪರ್ಸ್‌ನಲ್ಲಿಯೂ ಇಟ್ಟುಕೊಳ್ಳಬಹುದಾಗಿದೆ.
ಪ್ರಸಾದವಾಗಿ ತೆಗೆದುಕೊಂಡ ಹೂವಿನಿಂದ ಈ ತಪ್ಪನ್ನು ಮಾಡಬೇಡಿ:
ನೀವು ತೀರ್ಥಯಾತ್ರೆಗೆ ಹೋಗಿದ್ದರೆ ಮತ್ತು ಅಲ್ಲಿನ ದೇವಾಲಯದಿಂದ ಹಾರ ಅಥವಾ ಹೂವನ್ನು ಪ್ರಸಾದವಾಗಿ ಮನೆಗೆ ತೆಗೆದುಕೊಂಡು ಬಂದಿದ್ದರೆ, ಅದನ್ನು ಸ್ವಲ್ಪ ಸಮಯದವರೆಗೆ ನಿಮ್ಮೊಂದಿಗೆ ಇಟ್ಟುಕೊಳ್ಳಿ. ನಂತರ ಅದನ್ನು ನೀವು ಎಸೆಯಬೇಕಾದರೆ ಮರದ ಕೆಳಗೆ ಮಾತ್ರ ಎಸೆಯಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಒಂದು ವೇಳೆ ನಿಮಗೆ ಹೂವನ್ನು ಎಸೆಯಲು ಮರಗಳು ಸಿಗದೇ ಇದ್ದರೆ ಅಂತಹ ಸಂದರ್ಭದಲ್ಲಿ ಅದನ್ನು ಹರಿಯುವ ನದಿಯಲ್ಲಿಯೂ ಎಸೆಯಬಹುದು. ನಿಮಗೆ ಆ ಹೂವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಲು ಮನಸ್ಸಾದರೆ ಅದನ್ನು ಒಂದು ಪುಟ್ಟ ಬ್ಯಾಗ್ ನಲ್ಲಿ ಹಾಕಿ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಅಥವಾ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಅದರಲ್ಲಿಯೂ ಹೂವನ್ನು ಹಾಕಿ ಇಟ್ಟುಕೊಳ್ಳಬಹುದು. ಆದರೆ, ಮರೆತು ಕೂಡ ನೀವು ಇಂತಹ ಹೂವನ್ನು ಕಸದ ಬುಟ್ಟಿಗೆ ಹಾಕಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
Priyank Kharge: ಧರ್ಮಸ್ಥಳ ಪ್ರಕರಣ – ಇದು RSS ವಿರುದ್ಧ RSS ಹೋರಾಟ : ಪ್ರಿಯಾಂಕ್ ಖರ್ಗೆ!!
Comments are closed.