Home News CM Siddaramiah : ಬಿಜೆಪಿಯವರು ಸೌಜನ್ಯ ಪರವೋ ಇಲ್ಲಾ ವೀರೇಂದ್ರ ಹೆಗ್ಗಡೆ ಪರವೋ ಎಂದು ಸ್ಪಷ್ಟಪಡಿಸಲಿ...

CM Siddaramiah : ಬಿಜೆಪಿಯವರು ಸೌಜನ್ಯ ಪರವೋ ಇಲ್ಲಾ ವೀರೇಂದ್ರ ಹೆಗ್ಗಡೆ ಪರವೋ ಎಂದು ಸ್ಪಷ್ಟಪಡಿಸಲಿ – ಸಿಎಂ ಸಿದ್ದರಾಮಯ್ಯ !!

Hindu neighbor gifts plot of land

Hindu neighbour gifts land to Muslim journalist

CM Siddaramiah : ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣೆ ಯಾತ್ರೆಯನ್ನು ಹಮ್ಮಿಕೊಂಡಿರುವ ಬಿಜೆಪಿ ನಾಯಕರು ಇದೀಗ ಸೌಜನ್ಯ ಮನೆಗೂ ಕೂಡ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರು ಸೌಜನ್ಯ ಪರವೋ ಅಥವಾ ವೀರೇಂದ್ರ ಹೆಗ್ಗಡೆಯವರ ಪರವೋ ಎಂದು ಪ್ರಶ್ನೆ ಮಾಡಿದ್ದಾರೆ.

ಹೌದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಹಾಗೂ ನಾಯಕರು ನಿನ್ನೆ ದಿನ ಸೌಜನ್ಯ ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವನ ಹೇಳಿದ್ದರು. ಈ ಸಂದರ್ಭದಲ್ಲಿ ಸೌಜನ್ಯ ಮನೆಯವರು ಸುಪ್ರೀಂ ಕೋರ್ಟ್ ಗೆ ಪ್ರಕರಣದ ಮರುತನಿಗೆ ಅರ್ಜಿ ಸಲ್ಲಿಸುವುದಾದರೆ ಅದರ ಸಂಪೂರ್ಣ ಖರ್ಚನ್ನು ತಾವೇ ವಹಿಸುವುದಾಗಿಯೂ ಕೂಡ ಭರವಸೆ ನೀಡಿದ್ದರು. ಇದೀಗ ಈ ಕುರಿತಾಗಿ ಮಾಧ್ಯಮಗಳೊಂದಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಯಸ್, ಸೌಜನ್ಯ ತಾಯಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಿರುವ ಬಗ್ಗೆ ಮಾತನಾಡಿದ CM, ಸಿಬಿಐ ಯಾರ ಅಧೀನದಲ್ಲಿದೆ. ಕೇಂದ್ರದವರೇ ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸುಪ್ರೀಂ ಕೋರ್ಟ್ ಹೋಗಿ ಅಂಥ ಹೇಳುತ್ತಿರುವುದು ಯಾರು? ಎಂದು ಬಿಜೆಪಿಯವರನ್ನೇ ಮರು ಪ್ರಶ್ನೆ ಮಾಡಿದ್ದಾರೆ. ಇನ್ನು ಸೌಜನ್ಯ ಕೇಸ್ ನಲ್ಲಿ ಯಾರ ಮೇಲೆ ಆರೋಪ ಬಂದಿದೆ. ಹಾಗಾದ್ರೆ ಬಿಜೆಪಿ ಯಾರ ಪರ ಹೇಳಿ? ಒಂದು ಕಡೆ ವೀರೇಂದ್ರ ಹೆಗೆಡೆ ಪರ ಅಂತಾರೆ, ಮತ್ತೊಂದು ಕಡೆ ಸೌಜನ್ಯ ಪರ ಅಂತಾರೆ, ಹಾಗಾದ್ರೆ ಯಾರ ಪರ ಇದ್ದಾರೆ ಬಿಜೆಪಿವರು ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ಧರ್ಮಸ್ಥಳ ಪ್ರಕರಣ ಎಸ್‌ಐಟಿ ತನಿಖೆ ಆಗುತ್ತಿದೆ. ನಮ್ಮ ಪೊಲೀಸಿನವರ ಮೇಲೆ ನಂಬಿಕೆ ಇಲ್ವಾ, ಎನ್‌ಐಎ ತನಿಖೆ ಯಾಕೆ ಕೇಳುತ್ತಿದ್ದಾರೆ. ಆರಂಭದಲ್ಲಿ ಬಿಜೆಪಿಯವರು ತನಿಖೆ ಮಾಡಿ ಎಂದು ಹೇಳಲೇ ಇಲ್ಲ. ಶವಗಳು ಸಿಗದಿದ್ದಾಗ ತನಿಖೆ ಮಾಡಿ ಎಂದು ಹೇಳುತ್ತಿದ್ದಾರೆ. ಸತ್ಯ ಹೊರಬರಬೇಕು, ಎಲ್ಲವೂ ಜನರಿಗೆ ಗೊತ್ತಾಗಬೇಕೆಂದು ಹೆಗ್ಗಡೆಯವರೇ ಎಸ್‌ಐಟಿ ತನಿಖೆಯನ್ನ ಸ್ವಾಗತ ಮಾಡಿದ್ದಾರೆ. ಆದರೆ ಬಿಜೆಪಿ ಯಾಕೆ ಈಗ ವಿರೋಧಿಸುತ್ತಿದೆ? ಎಸ್‌ಐಟಿ ಸ್ವತಂತ್ರವಾಗಿ ತನಿಖೆ ಮಾಡಿಸುತ್ತಿದ್ದು, ಸತ್ಯ ಹೊರ ಬರಲಿ. ನಾವು ಯಾರು ಸಹ ತನಿಖೆಯಲ್ಲಿ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದರು.

Puttur: ತಾಲೂಕು ಮಟ್ಟದ ಯೋಗ ಸ್ಪರ್ಧೆ: ಪಿಎಂಶ್ರೀ ವೀರಮಂಗಲ ಶಾಲಾ ವಿದ್ಯಾರ್ಥಿನಿ “ಇಶಾನಿ” ಜಿಲ್ಲಾ ಮಟ್ಟಕ್ಕೆ ಆಯ್ಕೆ