Mobile Data: ಮೊಬೈಲ್ ಡೇಟಾ ಬೇಗ ಖಾಲಿಯಾಗುತ್ತಾ? ಜಸ್ಟ್ ಹೀಗೆ ಮಾಡಿ, ಇಡೀ ದಿನ ಇಂಟರ್ನೆಟ್ ಬಳಸಿ

Share the Article

Mobile Data: ಇಂದಿನ ಜೀವನದಲ್ಲಿ ಮೊಬೈಲ್ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅಷ್ಟೇ ಅಲ್ಲ ಅದರಲ್ಲಿರುವ ಇಂಟರ್ನೆಟ್ ನಮ್ಮ ಉಸಿರಾಗಿ ಬಿಟ್ಟಿದೆ. ಮೊಬೈಲ್ ನಲ್ಲಿ ಇಂಟರ್ನೆಟ್ ಇಲ್ಲ ಅಂದರೆ ಜೀವವೇ ಹೋದಂತೆ ಪರಿತಪಿಸುವವರು ಇದ್ದಾರೆ. ಆದರೆ ಇಂದು ಕೆಲವು ಅಪ್ಡೇಟ್ಗಳು ಬಂದಂತೆ ಮೊಬೈಲ್ ನಲ್ಲಿ ಇಂಟರ್ನೆಟ್ ಬೇಗ ಖಾಲಿಯಾಗಿ ಬಿಡುತ್ತದೆ. ಹಾಗಾದ್ರೆ ನಿಮ್ಮ ಮೊಬೈಲ್ ಡೇಟಾ ಇಡೀ ದಿನ ಇರಬೇಕಾ? ನೀವು ಇಡೀ ದಿನ ಇಂಟರ್ನೆಟ್ ಯೂಸ್ ಮಾಡಬೇಕಾ? ಈ ಟ್ರಿಕ್ಸ್ ಯೂಸ್ ಮಾಡಿ

ಡೇಟಾ ಸೇವರ್ ಮೋಡ್ ಆನ್ ಮಾಡಿ:

ನಿಮ್ಮ ನಿಮ್ಮ ಮೊಬೈಲ್ಗಳಲ್ಲಿ ಡೇಟಾ ಸೇವರ್ ಮೋಡ್ ಅನ್ನು ಆನ್ ಮಾಡಿ. ಇದು ಅಪ್ಲಿಕೇಶನ್‌ಗಳ ಡೇಟಾವನ್ನು ಮಿತಿಗೊಳಿಸುತ್ತದೆ. ಈ ಸೆಟ್ಟಿಂಗ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದೆ. ಇದಕ್ಕಾಗಿ, ಸೆಟ್ಟಿಂಗ್‌ಗಳಿಗೆ ಹೋಗಿ, ನೆಟ್‌ವರ್ಕ್ ಮತ್ತು ಇಂಟರ್ನೆಟ್‌ಗೆ ಹೋಗಿ ಮತ್ತು ಡೇಟಾ ಬಳಕೆಗೆ ಹೋಗಿ ಡೇಟಾ ಸೇವರ್ ಅನ್ನು ಆನ್ ಮಾಡಿ.

ವೀಡಿಯೊ ಗುಣಮಟ್ಟವನ್ನು ಕಡಿಮೆ ಮಾಡಿ:

ಸಾಮಾನ್ಯವಾಗಿ ಜನರು ಯೂಟ್ಯೂಬ್ ಅಥವಾ ನೆಟ್ಫ್ಲಿಕ್ಸ್ ನಲ್ಲಿ ಉತ್ತಮ ಗುಣಮಟ್ಟದ ವಿಡಿಯೋಗಳನ್ನು ವೀಕ್ಷಿಸುತ್ತಾರೆ, ಇದು ಡೇಟಾವನ್ನು ಬಹಳ ಬೇಗನೆ ಬಳಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, YouTube, Netflix ಅಥವಾ Amazon Prime ನಂತಹ ಅಪ್ಲಿಕೇಶನ್‌ಗಳಲ್ಲಿ ವಿಡಿಯೋ ಗುಣಮಟ್ಟವನ್ನು 480p ಅಥವಾ ಅದಕ್ಕಿಂತ ಕಡಿಮೆಗೆ ಹೊಂದಿಸಿ.

ಅಪ್ಲಿಕೇಶನ್‌ಗಳ ಅಟೋ ಅಪ್ಡೇಟ್ ಆಫ್ ಮಾಡಿ:

ಸಾಮಾನ್ಯವಾಗಿ ಜನರ ಮೊಬೈಲ್‌ನಲ್ಲಿರುವ ಅಪ್ಲಿಕೇಶನ್‌ಗಳು ಅಟೋ ಅಪ್ಡೇಟ್ನಲ್ಲಿರುತ್ತದೆ. ಈ ಕಾರಣದಿಂದಾಗಿ, ಗೂಗಲ್ ಪ್ಲೇ ಸ್ಟೋರ್ನಲ್ಲಿನ ಅಪ್ಲಿಕೇಶನ್‌ಗಳಿಗೆ ಅಪ್ಡೇಟ್ ಆಯ್ಕೆ ಬಂದ ತಕ್ಷಣ, ಅಪ್ಲಿಕೇಶನ್‌ಗಳು ತಮ್ಮ ಪಾಡಿಗೆ ತಾವು ಅಪ್ಡೇಟ್ ಆಗುತ್ತಿರುತ್ತವೆ. ಹೀಗಾಗಿ ನೀವು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಇದನ್ನು ಆಫ್ ಮಾಡಬೇಕು.

ಡೇಟಾ ಮಿತಿಯನ್ನು ಆನ್ ಮಾಡಿ

ನಿಮ್ಮ ಸಾಧನದಲ್ಲಿ ನೀವು ಡೇಟಾ ಮಿತಿಯನ್ನು ಆನ್ ಮಾಡಬಹುದು. ಮಿತಿಯನ್ನು ಹೊಂದಿಸುವ ಮೂಲಕ ನಿಮ್ಮ ಮೊಬೈಲ್ ಡೇಟಾವನ್ನು ಉಳಿಸಬಹುದು. ಇದಕ್ಕಾಗಿ, ಸೆಟ್ಟಿಂಗ್‌ಗಳನ್ನು ತೆರೆಯಿರಿ, ಸಂಪರ್ಕಗಳಿಗೆ ಹೋಗಿ ಮತ್ತು ಡೇಟಾ ಬಳಕೆಯನ್ನು ಟ್ಯಾಪ್ ಮಾಡಿ. ಇಲ್ಲಿ ನೀವು ಡೇಟಾ ಅಲರ್ಟ್ ಅನ್ನು ಹೊಂದಿಸಬಹುದು, ಮೊಬೈಲ್ ಡೇಟಾ ಬಳಕೆಯ ಸಂಪೂರ್ಣ ಮಿತಿಯನ್ನು ಇಲ್ಲಿ ಹೊಂದಿಸಬಹುದು

ಮೊಬೈಲ್ ಆಟೋ ಅಪ್ಡೇಟ್ ಆಫ್ ಮಾಡಿ:

ಮೊಬೈಲ್‌ನಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಬರುತ್ತಲೇ ಇರುತ್ತವೆ. ಮೊಬೈಲ್ ಅಪ್‌ಡೇಟ್ ಬಂದು ಅದು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಿ ಇನ್‌ಸ್ಟಾಲ್ ಆದ ತಕ್ಷಣ, ಸಾಫ್ಟ್‌ವೇರ್ ಆಟೋ ಅಪ್‌ಡೇಟ್‌ನಲ್ಲಿದೆ ಎಂದು ಅರ್ಥಮಾಡಿಕೊಳ್ಳಿ. ಆದ್ದರಿಂದ ಅದನ್ನು ಆಟೋ ಅಪ್‌ಡೇಟ್‌ನಿಂದ ತೆಗೆದುಹಾಕಿ.

Afghanistan earthquake: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ: 800 ಕ್ಕೂ ಹೆಚ್ಚು ಜನರು ಸಾವು: 2,500 ಕ್ಕೂ ಹೆಚ್ಚು ಮಂದಿಗೆ ಗಾಯ

Comments are closed.