Dharmasthala Case: ವಸಂತಿ ಶ್ರೀವತ್ಸ ನಿಜವಾಗಿಯೂ ಬದುಕಿದ್ದಾರೆಯೇ? ಹಾಗಾದರೆ ಎಲ್ಲಿದ್ದಾರೆ? – ಸುಜಾತ ಭಟ್‌ಗೆ ಮಾಳೇಟಿರ ವಿಜಯ್ ಪ್ರಶ್ನೆ – ವರದಿ

Dharmasthala Case: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2003ರಲ್ಲಿ ನಾಪತ್ತೆಯಾದ ಅನನ್ಯ ಭಟ್, ತನ್ನ ಮಗಳಾಗಿದ್ದು, ಆಕೆಯ ಅಸ್ತಿ ಪಂಜರವನ್ನು ಹುಡುಕಿ ಕೊಡಿ ಎಂದು ಸುಜಾತ ಭಟ್ ಎಸ್‌ಐಟಿಗೆ ದೂರು ನೀಡಿದ್ದರು. ತದನಂತರ ಅವರು ಬಿಡುಗಡೆ ಮಾಡಿರುವ ಫೋಟೋ ಅನನ್ಯ ಭಟ್ ದ್ದು ಅಲ್ಲ. ಅದು ವಿರಾಜಪೇಟೆಯ ಕೆದಮಳೂರು ಗ್ರಾಮ ಬೊಯಿಕೇರಿ ನಿವಾಸಿ ಮಾಳೇಟರ ವಸಂತಿ ಶ್ರೀವತ್ಸ ಎಂಬುವರದ್ದು ಎಂದು ತಿಳಿದುಬಂತು.

ಇದೀಗ ವಸಂತಿ ಅವರು ಸತ್ತಿಲ್ಲ, ಇನ್ನೂ ಜೀವಂತವಾಗಿದ್ದಾಳೆ ಎಂದು ವಿಶೇಷ ತನಿಖಾ ತಂಡದ ಮುಂದೆ ಸಾಜಾತ ಭಟ್ ನೀಡಿದರೆನ್ನಲಾಗಿರುವ ವರದಿ ಸಂಪೂರ್ಣ ತನಿಖೆಯ ಮಜಲುಗಳನ್ನೇ ಬದಲಿಸುತ್ತಿದೆ. ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಅನನ್ಯ ಭಟ್ ಅವರದ್ದು ಎನ್ನಲಾದ ಫೋಟೋ ಬೆಳಕಿಗೆ ಬಂದ ಬಳಿಕ ಅದು ಮಾಳೇಟರ ವಸಂತಿ ಶ್ರೀವತ್ಸ ಎಂಬುವವರ ಫೋಟೋ ಎಂದು ಅವರ ಸಹೋದರ ವಿರಾಜ ಪೇಟೆ ಕೆದಮಳ್ಳೂರು ನಿವಾಸಿ ಮಾಳೇಟರ ವಿಜಯ್ ಅವರು ಸ್ಪಷ್ಟ ಪಡಿಸಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ “ಮೈಸೂರು ಮಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯನ್ನಾಧರಿಸಿ, ಸುಜಾತ ಭಟ್ ಅವರು ಎಸ್‌ಐಟಿ ಅಧಿ ಕಾರಿಗಳ ಮುಂದೆ ವಸಂತಿ ಶ್ರೀವತ್ಸ ಎಂಬುವರು ಜೀವಂತ ಇದ್ದಾರೆ ಎಂಬ ಹೇಳಿಕೆ ನೀಡಿರುವ ಬೆನ್ನಲ್ಲೇ, 1 ನಿಮಿಷ 2 ಸೆಕೆಂಡ್‌ಗಳ ವಿಡಿಯೋ ಬಿಡುಗಡೆ ಮಾಡಿರುವ ವಸಂತಿ ಶ್ರೀವತ್ಸ ಅವರ ಸಹೋದರ ಮಾಳೇಟಿರ ವಿಜಯ್, ‘ನನ್ನ ತಂಗಿ ಬದುಕಿದ್ದರೆ ನನ್ನಷ್ಟು ಸಂತೋಷ ಪಡುವವರು ಯಾರು ಇಲ್ಲ’ ಎಂದು ಹೇಳಿದ್ದಾರೆ.
ಮಾತ್ರವಲ್ಲದೇ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ‘ವಸಂತಿ ಬದುಕಿದ್ದರೆ ಯಾಕೆ ಹೊರಗಡೆ ಬರಲಿಲ್ಲ? ಅವಳನ್ನು ಗುಪ್ತವಾಗಿ ಇಟ್ಟವರು ಯಾರು? ಆಕೆಯನ್ನು ಗೃಹ ಬಂಧನದಲ್ಲಿ ಇಟ್ಟಿದ್ದಾರೋ? ಇದರಲ್ಲಿ ಯಾರ ಕೈವಾಡ ಇದೆ? ಇದರಲ್ಲಿ ಸುಜಾತ ಭಟ್ ಅವರ ಪಾತ್ರ ಏನು? ಸುಜಾತ ಭಟ್ ಹೇಳಿಕೆಯಂತೆ ನನ್ನ ತಂಗಿ ಬದುಕಿದ್ದೇ ಆದರೆ ನನ್ನ ತಂಗಿಯದ್ದೇ ಎಂದು ತೋರಿಸಲಾದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ತೋರಿಸಿದ್ದರ ಹಿಂದೆ ಯಾರ ಕೈವಾಡವಿದೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ವಸಂತಿಯನ್ನು ನಮಗೊಪ್ಪಿಸಿ ಸುಜಾತ ಭಟ್ ನೀಡಿರುವ ಹೇಳಿಕೆ ಹಾಗೂ ನನ್ನ ಪ್ರಶ್ನೆಗಳ ಸಹಿತ ಎಲ್ಲವನ್ನು ಕೂಲಂಕುಶ ವಾಗಿ ವಿಚಾರಣೆ ನಡೆಸಬೇಕು. ‘ನನ್ನ ಸಹೋದರಿ ವಸಂತಿ ಬದುಕಿದ್ದರೆ ಆಕೆಯನ್ನು ನಮ್ಮ ವಶಕ್ಕೆ ಒಪ್ಪಿಸಬೇಕು’ ಎಂದು ಸರ್ಕಾರ ಮತ್ತು ಎಸ್‌ಐಟಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಸುಜಾತ ಭಟ್ ವಿಚಾರದಲ್ಲಿ ಸಂಪೂರ್ಣ ತನಿಖೆ ಮಾಡಿ ಇದರಲ್ಲಿ ಭಾಗಿಯಾದವರನ್ನು ಬಹಿರಂಗ ಪಡಿಸಬೇಕು. ಇದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಮಾಳೇಟರ ವಿಜಯ್ ಸಹಪಡಿಸಿದ್ದಾರೆ ಎಂದು ಮೈಸೂರು ಮಿತ್ರ ಪತ್ರಿಕೆಯಲ್ಲಿ ವರದಿಯಾಗಿದೆ.
2007ರ ಆಗಸ್ಟ್ 24ರಂದು ಕೊಳೆತ ಸ್ಥಿತಿಯಲ್ಲಿ ಕೆದಮಳ್ಳೂರು ಗ್ರಾಮದ ಬೊಯಿಕೇರಿ ಬಳಿಯ ಕೊಟ್ಟೋಳಿ ನದಿಯಲ್ಲಿ 30ರಿಂದ 35 ವರ್ಷದ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಸಂದರ್ಭ ಮೃತದೇಹದಲ್ಲಿ ಬಿಳಿ ಮಿಶ್ರಿತ ಹಸಿರು ಬಣ್ಣದ ಚೂಡಿದಾರ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಇತ್ತು. ಕುತ್ತಿಗೆಯಲ್ಲಿ ತಾಳಿ ಮಾದರಿಯ ಚಿನ್ನದ ಸರ, ಓಲೆ, ಕಾಲುಂಗುರ ಇದ್ದವು. ಇದು ಪೊಲೀಸ್ ಮಹಜರಿನಲ್ಲೂ ದಾಖಲಾಗಿದೆ.
ಆ ದಿನ ತನ್ನ ಸಹೋದರಿ ಘಟನಾ ಸ್ಥಳಕ್ಕೆ ತೆರಳಿ ನೋಡಿದಾಗ ಚೂಡಿದಾರದಲ್ಲಿ ವಜ್ರ ಎಂಬ ಟೈಲರ್ ಅಂಗಡಿಯ ಹೆಸರು ಮತ್ತು ಮೃತದೇಹದ ಕೈಯಲ್ಲಿದ್ದ ಸುಟ್ಟ ಗುರುತಿನ ಆಧಾರದಲ್ಲಿ ಮಹಿಳೆಯ ಮೃತದೇಹ ವಸಂತಿ ಎಂಬವರದ್ದೇ ಎಂದು ಗುರುತಿಸಲಾಗಿತ್ತು. ಸ್ಥಳೀಯ ಪಂಚಾಯಿತಿ ಕೂಡ ಮರಣ ಪ್ರಮಾಣ ಪತ್ರದಲ್ಲಿ ಎಂ.ಪಿ. ವಸಂತಿ ಎಂದು ನಮೂದಿಸಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ದಾಖಲಾತಿಗಳ ಸಹಿತ ಮಾಳೇಟರ ವಿಜಯ್ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದಾರೆ.
BJP Govt: ಬಿಜೆಪಿ ಜತೆ ಸೇರಿ ಸರ್ಕಾರ ರಚನೆಗೆ ಡಿಕೆಶಿ ಮುಂದಾಗಿದ್ದರು – ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್ ಹೊಸ ಬಾಂಬ್
Comments are closed.