Mysore Dasara: ಮೈಸೂರು ದಸರಾ ಏರ್ ಶೋ – ಈ ದಿನದಂದು ನಡೆಯಲಿದೆ ಲೋಹದ ಹಕ್ಕಿಗಳ ಕಲರವ

Mysore Dasara: ದಸರಾ ಮಹೋತ್ಸವದಲ್ಲಿ ಈ ಬಾರಿ ಬಹು ನಿರೀಕ್ಷಿತ ವೈಮಾನಿಕ ಪ್ರದರ್ಶನ ದಸರಾ ಹಬ್ಬದ ಪ್ರವಾಸಿಗರ ಕಣ್ಮಣ ಸೆಳೆಯಲಿದ. 9 ದಿನಗಳ ಕಾಲ ನಡೆಯುವ ದಸರಾ ಹಬ್ಬದಲ್ಲಿ ಈ ಏರ್ ಶೂ ಯಾವಾಗ ನಡೆಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯ ದಶಮಿಯಂದೇ ಏರ್ ಶೋ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಸರಾ ವೇಳೆ ಏರ್ ಶೋ ನಡೆ ಸುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ರಕ್ಷಣಾ ಇಲಾಖೆ ಏರ್ ಶೋ ನಡೆಸಲು ಅನುಮತಿ ನೀಡಿದೆ ಎಂದರು. ಇದೇ ವೇಳೆ ಏರ್ ಶೋ ದಿನಾಂಕ ಹೇಳುವಂತೆ ಕೇಳಿದ್ದಕ್ಕೆ ಮೊದಲು ಜಂಬೂಸವಾರಿಯಂದೇ ಏರ್ ಶೋ ವಿಜಯ ದಶಮಿ ದಿನದ ಮುನ್ನಾ ದಿನ ಎಂದು ಪ್ರತಿಕ್ರಿಯಿಸಿದರು. ಬಳಿಕ ಕ್ಷಣ ಮಾತ್ರದಲ್ಲಿಯೇ ವಿಜಯ ದಶಮಿ ದಿನದಂದು ಏರ್ ಶೋ ನಡೆಯುತ್ತದೆ ಎಂದು ತಿಳಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರ ನಡೆದರು.
ಗೊಂದಲವಾಗಬಹುದು: ವಿಜಯದಶಮಿ ದಿನದಂದೇ ಏರ್ ಶೋ ನಡೆದರೆ ಗೊಂದಲ ಉಂಟಾಗುವುದು ಖಚಿತ. ವಿಜಯ ದಶಮಿಯಂದ ಜಂಬೂಸವಾರಿ ಮೆರವಣಿಗೆಗೆ ಗಜಪಡೆಯನ್ನು ಸಜ್ಜುಗೊಳಿಸಲಾಗುತ್ತಿರುತ್ತದೆ. ಅಪಾರ ಸಂಖ್ಯೆಯ ಜನರೂ ಕಿಕ್ಕಿರಿದು ಮಾರ್ಗದುದ್ದಕ್ಕೂ ಸೇರಿರುತ್ತಾರೆ. ಈ ವೇಳೆ ವೈಮಾನಿಕ ಪ್ರದರ್ಶನ ನೀಡುವ ಲೋಹದ ಹಕ್ಕಿಗಳ ಶಬ್ದಕ್ಕೆ ಗಜಪಡೆ ಹೆದರುವ ಸಾಧ್ಯತೆ ಇದೆ.
ಅಲ್ಲದೆ, ಪಂಜಿನ ಕವಾಯತ್ ಮೈದಾನದಲ್ಲಿ ಏರ್ ಶೋ ನೋಡಲು ಬೆಳಗ್ಗೆಯೇ ಜನ ಸೇರಿದಂತೆ ಸಂಜೆ ನಡೆಯುವ ಪಂಜಿನ ಕವಾಯತ್ ವೀಕ್ಷಣೆಗಾಗಿ ಟಿಕೆಟ್ ಪಡೆದವರು ಹಾಗೂ ಪಾಸ್ ಪಡೆದವರು ಮೈದಾನ ಪ್ರವೇಶಿಸಲು ಕಷ್ಟವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
Medicine: 8 ಔಷಧಿಗಳನ್ನು ಉಪಯೋಗಿಸದಂತೆ ಎಚ್ಚರಿಕೆ ನೀಡಿದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ!
Comments are closed.