Yatnal: RSS ಗೀತೆ ಹಾಡೋ ಬದಲು, ‘ನಮಸ್ತೇ ಸೋನಿಯಾ ಮಾತೆ, ಇಟಲಿ ಪುತ್ರೆ’ ಎಂದಿದ್ದರೆ ಡಿಕೆಶಿ ಸಿಎಂ ಆಗುತ್ತಿದ್ದರು – ಯತ್ನಾಳ್ ವ್ಯಂಗ್ಯ

Share the Article

Yatnal: ಡಿ.ಕೆ ಶಿವಕುಮಾರ್ ಗುರುವಾರ ವಿಧಾನಸಭೆಯನ್ನುದ್ದೇಶಿಸಿ ಮಾತನಾಡುವಾಗ ಆರ್‌ಎಸ್‌ಎಸ್ (RSS) ಗೀತೆಯನ್ನು ಹಾಡಿ ಗಮನ ಸೆಳೆದಿದ್ದರು. ಇದು ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿದ್ದಲ್ಲದೆ ಕಾಂಗ್ರೆಸ್ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಕ್ಷಮೆಯಾಚಿಸಿದ್ದರು.

ಆದರೆ ಈ ಕುರಿತಾಗಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರುಗಳು ಭಾರತ ಮಾತೆಗೆ ವಂದಿಸಿದರೆ ಕ್ಷಮೆ ಕೇಳುವ ಸ್ಥಿತಿ ಬರುತ್ತದೆ ಎಂದರೆ ಅದು ದುರಂತ ಎಂದು ಕಾಂಗ್ರೆಸ್ ಅನ್ನು ಟೀಕಿಸಿದ್ದರು. ಅಲ್ಲದೆ ಡಿಕೆ ಶಿವಕುಮಾರ್ ಅವರಿಗೆ ಕರುಣೆಯನ್ನು ತೋರಿದರು. ಈ ಬೆನ್ನಲ್ಲೇ ಇದೀಗ ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕುರಿತು ವ್ಯಂಗ್ಯವಾಡಿದ್ದಾರೆ. ಡಿಕೆ ಶಿವಕುಮಾರ ಅವರು ಭಾರತ ಮಾತೆಗೆ ಬಿಟ್ಟು ಸೋನಿಯಾ ಗಾಂಧಿಗೆ ಏನಾದರೂ ನಮಿಸಿದ್ದರೆ ಅವರು ಸಿಎಂ ಆಗುತ್ತಿದ್ದರು ಎಂದು ಕಾಲೆಳೆದಿದ್ದಾರೆ.

ಹೌದು, ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್ ಅವರು ಡಿಕೆ ಶಿವಕುಮಾರ್ ಅವರು ನಮಸ್ತೆ ಭಾರತ ಮಾತೆ ಎಂಬುದನ್ನು ಬಿಟ್ಟು ನಮಸ್ತೆ ಸೋನಿಯಾ ಮಾತೆ ಇಟಲಿಪುತ್ರಿ ಎಂದಿದ್ದರೆ ಅವರಿಗೆ ಸಿಎಂ ಸ್ಥಾನ ಸಿಗುತ್ತಿತ್ತು. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ತಕ್ಷಣ ಅವರನ್ನು ಮುಖ್ಯಮಂತ್ರಿ ಮಾಡುತ್ತಿದ್ದರು. ಭಾರತ ಮಾತೆಗೆ ನಮಸ್ತೆ ಅಂದರೆ ಕಾಂಗ್ರೆಸ್ ಅವರಿಗೆ ಬೇಜಾರಾಗುತ್ತೆ, ನೋವಾಗುತ್ತೆ. ಇಟಲಿ ಮಾತೆಗೆ ನಮಸ್ತೆ ಅಂದರೆ ಏನು ಆಗಲ್ಲ ಎಂದು ಟೀಕೆಸಿದ್ದಾರೆ.

 

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

 

ಹಿಂದೂ ಕೇಸರಿ ಪಡೆ (@hindu_kesari_pade_) ರಿಂದ ಹಂಚಲಾದ ಪೋಸ್ಟ್

Comments are closed.