Radhika Kumaraswamy: ಜಮೀರ್‌ಗೆ 2.5 ಕೋಟಿ ಸಾಲ: ಲೋಕಾ ಪೊಲೀಸರಿಂದ ನಟಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ

Share the Article

Radhika Kumaraswamy: ಜಮೀರ್‌ ಅಹ್ಮದ್‌ಗೆ 2.5 ಕೋಟಿ ಸಾಲ ನೀಡಿದ ವಿಚಾರಕ್ಕೆ ಸಂಬಂಧ ಪಟ್ಟಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಕುರಿತಂತೆ ಲೋಕಾಯುಕ್ತ ಪೊಲೀಸರು ವಸತಿ ಸಚಿವರ ಆದಾಯದ ಮೂಲವನ್ನು ಪರಿಶೀಲನೆ ಮಾಡಿದಾಗ, ಸಾಲ ನೀಡಿದ ವ್ಯಕ್ತಿಗಳ ಪಟ್ಟಿ ದೊರಕಿದೆ. ಈ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಇದ್ದ ಕಾರಣ ಪೊಲೀಸರು ವಿಚಾರಣೆ ಮಾಡಿದ್ದು, ಈ ಸಂದರ್ಭದಲ್ಲಿ ದಶಕದ ಹಿಂದೆ ತಾವು ಜಮೀರ್‌ ಅವರಿಗೆ ಸಾಲ ಕೊಟ್ಟಿದ್ದನ್ನು ಒಪ್ಪಿಕೊಂಡು ಹೇಳಿಕೆ ದಾಖಲು ಮಾಡಿದ್ದಾರೆ.

ಬಹುಕೋಟಿ ವಂಚನೆ ಹಗರಣವು 2019 ರಲ್ಲಿ ಐ ಮಾನಿಟರಿ ಅಡ್ವೈಸರಿ ಕಂಪನಿದ್ದು ಬೆಳಕಿಗೆ ಬಂದಿದ್ದು, ಇದರ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಜಮೀರ್‌ ಖಾನ್‌ ಅವರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು.

ಎಸಿಬಿ ಈ ಕುರಿತು ಪ್ರಕರಣ ದಾಖಲು ಮಾಡಿತ್ತು. ಎಸಿಬಿ ರದ್ದಾದ ನಂತರ ಈ ಪ್ರಕರಣದ ತನಿಖೆ ಲೋಕಾಯುಕ್ತ ಪೊಲೀಸರಿಗೆ ವರ್ಗವಾಗಿತ್ತು. ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ಮಾಡುತ್ತಿದ್ದು, ಹಲವರ ವಿಚಾರಣೆ ನಡೆಸುತ್ತಿದ್ದಾರೆ.

ಸಾಲ ನೀಡಿದವರ ಪಟ್ಟಿಯನ್ನು ಲಿಖಿತವಾಗಿ ಜಮೀರ್‌ ನೀಡಿದ್ದು, ಈ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿಯಿಂದ 2.5 ಕೋಟಿ ರೂ. ಸಾಲ ಪಡೆದಿರುವ ಕುರಿತು ಮಾಹಿತಿ ಇತ್ತು.

2012 ರಲ್ಲಿ ಶಮಿಕಾ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ ಯಶ್‌ ಮತ್ತು ರಮ್ಯಾ ಅಭಿನಯದ ಲಕ್ಕಿ ಸಿನಿಮಾ ನಿರ್ಮಾಣ ಮಾಡಿದ್ದು, ಮನರಂಜನಾ ಚಾನೆಲ್‌ಗಳಿಗೆ ಈ ಸಿನಿಮಾ ಸ್ಯಾಟಲೈಟ್‌ ಹಕ್ಕು, ಚಲನಚಿತ್ರ ಬಿಡುಗಡೆಗೊಂಡು ಗಳಿಸಿದ ಹಣದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಜಮೀರ್‌ ಅಹ್ಮದ್‌ಗೆ 2.5ಕೋಟಿ ರೂ ಸಾಲ ನೀಡಿದ್ದೆ ಎಂದು ರಾಧಿಕಾ ಹೇಳಿದ್ದಾರೆ ಎಂದು ವರದಿಯಾಗಿದೆ.

PM Modi: ಮೋದಿಗೆ ಓಡಾಟಕ್ಕೆ ತಮ್ಮ ನೆಚ್ಚಿನ ‘ಹಾಂಗ್ಕಿ’ ಕಾರು ಕೊಟ್ಟ ಚೀನಾ ಅಧ್ಯಕ್ಷ !!

Comments are closed.