Home News Karwar: ಅನ್ನದ ಅಗುಳು ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

Karwar: ಅನ್ನದ ಅಗುಳು ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

Hindu neighbor gifts plot of land

Hindu neighbour gifts land to Muslim journalist

Karwar: ಊಟ ಮಾಡುವಾಗ ಅನ್ನದ ಅಗುಳು ಗಂಟಲಲ್ಲಿ ಸಿಲುಕಿಕೊಂಡು ಯುವಕನೋರ್ವ ಸಾವನ್ನಪ್ಪಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾದಲ್ಲಿ ನಡೆದಿದೆ

ಬಿಣಗಾ ಮಾಳಸವಾಡ ನಿವಾಸಿ ಅಮಿತ್‌ ಮಾಳಸೇರ್‌ (38) ಮೃತ ವ್ಯಕ್ತಿ. ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಮಿತ್‌, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದ. ಭಾನುವಾರ ಊಟ ಮಾಡುವಾಗ ಅನ್ನದ ಅಗುಳು ಗಂಟಲಲ್ಲಿ ಸಿಲುಕಿದೆ. ಕೂಡಲೇ ಅಮಿತ್‌ ಮನೆಯವರು ಅಮಿತ್‌ಗೆ ನೀರು ಕುಡಿಸಿದ್ದಾರೆ. ಆದರೆ ಕೂಡಲೇ ಆತ ಅಲ್ಲೇ ಕುಸಿದು ಬಿದ್ದಿದ್ದು, ಆತನನ್ನು ಆಂಬುಲೆನ್ಸ್‌ ಮೂಲಕ ಕಾರವಾರದ ಕ್ರಿಮ್ಸ್‌ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ವೈದ್ಯರು ಪರಿಶೀಲನೆ ಮಾಡಿದಾಗ ಗಂಟಲಲ್ಲಿ ಅನ್ನದ ಅಗುಳು ಸಿಲುಕಿ ಅಮಿತ್‌ ಮೃತಪಟ್ಟಿದ್ದಾರೆ ಘೋಷಣೆ ಮಾಡಿದ್ದಾರೆ.