Home News Bengaluru : ಚಪ್ಪಲಿ ಧರಿಸಿದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಸಾವು – ಒಳಗಿತ್ತು ಕೊಳಕುಮಂಡಲ ಹಾವು...

Bengaluru : ಚಪ್ಪಲಿ ಧರಿಸಿದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಸಾವು – ಒಳಗಿತ್ತು ಕೊಳಕುಮಂಡಲ ಹಾವು !!

Hindu neighbor gifts plot of land

Hindu neighbour gifts land to Muslim journalist

Bengaluru : ಮನೆಯಿಂದ ಎಲ್ಲಿಗಾದರೂ ಹೊರಗಡೆ ಹೋಗುವ ಸಂದರ್ಭದಲ್ಲಿ ಚಪ್ಪಲಿ (slipper), ಶೂ ಹಾಕುವ ಮುನ್ನ ಅವುಗಳನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕು. ಯಾಕಂದ್ರೆ ಅದರೊಳಗೆ ಯಾವುದಾದರು ವಿಷಜಂತುಗಳು ಸೇರಿಕೊಂಡಿರಬಹುದು. ಇದೀಗ ಅಂತದ್ದೇ ದುರಂತ ಘಟನೆ ಎಂದು ನಡೆದಿದ್ದು ಕ್ರಾಕ್ಸ್​​ ಚಪ್ಪಲಿಯೊಳಗೆ ಸೇರಿಕೊಂಡಿದ್ದ ಕೊಳಕು ಮಂಡಲ ಹಾವು (snake )ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ.

ಹೌದು, ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಭಾನುವಾರ ನಡೆದ ದುರ್ಘಟನೆ ಒಂದು ಕುಟುಂಬವನ್ನು ಕಂಗಾಲು ಮಾಡಿದೆ. ಮನೆಯಲ್ಲೇ ನಿರಾಳವಾಗಿ ಬದುಕುತ್ತಿದ್ದ ಮಂಜು ಪ್ರಕಾಶ್ (41) ಎಂಬ ನಿವಾಸಿ, ಚಪ್ಪಲಿಯೊಳಗೆ ಅಡಗಿಕೊಂಡಿದ್ದ ಕೊಳಕು ಮಂಡಲ ಹಾವು ಕಚ್ಚಿದ ಪರಿಣಾಮ ದುರಂತವಾಗಿ ಸಾವನ್ನಪ್ಪಿದ್ದಾರೆ.

ಅಂದಹಾಗೆ ಮಂಜು ಪ್ರಕಾಶ್ (41) ಮನೆ ಬಾಗಿಲ ಬಳಿ ಇಟ್ಟಿದ್ದ ಕ್ರಾಸ್ ಚಪ್ಪಲಿಯನ್ನು ಹಾಕಿಕೊಂಡು ಹೊರಗೆ ಹೋಗಿದ್ದರು. ಆ ಸಮಯದಲ್ಲಿ ಚಪ್ಪಲಿಯೊಳಗೆ ಹಾವು ನುಸುಳಿಕೊಂಡಿದ್ದ ವಿಷಯ ಅವರಿಗೆ ತಿಳಿದಿರಲಿಲ್ಲ. ನಂತರ ಅವರು ಮನೆಗೆ ಮರಳಿ ವಿಶ್ರಾಂತಿಯಾಗಿದ್ದಾಗ ತೊಂದರೆ ಅನುಭವಿಸಿ ಅಸ್ವಸ್ಥರಾದರು. ಈ ವೇಳೆ ನೆರೆಮನೆಯ ನಿವಾಸಿಯೊಬ್ಬರು ಚಪ್ಪಲಿಯನ್ನು ಗಮನಿಸಿದಾಗ, ಅದರೊಳಗೆ ಹಾವು ಸತ್ತಿರುವುದು ಕಂಡು ಬೆಚ್ಚಿಬಿದ್ದಿದ್ದು, ಕೂಡಲೇ ಅವರು ಮಂಜು ಮನೆಯವರಿಗೆ ತಿಳಿಸಿದ್ದಾರೆ. ಆದರೆ ಆ ವೇಳೆಗೆ ಮಂಜು ಪ್ರಕಾಶ್ ಮಲಗಿದ್ದ ಹಾಸಿಗೆಯ ಮೇಲೆಯೇ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದರು. ಮನೆಯವರು ಬಂದು ನೋಡಿದಾಗ ಅದಾಗಲೇ ಅವರ ಮಂಜು ಅವರ ಸಾವನ್ನಪ್ಪಿದ್ದರು.