School Teachers: ದೇಶದಲ್ಲಿ ಒಂದು ಕೋಟಿ ದಾಟಿದ ಶಾಲಾ ಶಿಕ್ಷಕರ ಸಂಖ್ಯೆ !!

School Teachers: ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಕರ ಸಂಖ್ಯೆ ಒಂದು ಕೋಟಿಯನ್ನು ದಾಟಿ ದಾಖಲೆ ಬರೆದಿದೆ. ಈ ಕುರಿತಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಮಾಹಿತಿಯನ್ನು ಹಂಚಿಕೊಂಡಿದೆ.

ಹೌದು, ‘ಯುನೈಟೆಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಂ ಫಾರ್ ಎಜುಕೇಷನ್‌ನ (ಯುಡಿಐಎಸ್‌ಇ)’ ದತ್ತಾಂಶದ ವರದಿ ಬಿಡುಗಡೆ ಮಾಡಿದ್ದು ಇತಿಹಾಸದಲ್ಲಿ ಮೊದಲ ಬಾರಿಗೆ ಶಿಕ್ಷಕರ ಸಂಖ್ಯೆ ಒಂದು ಕೋಟಿ ಗಡಿ ದಾಟಿದ್ದು, ಭಾರತ ಶಾಲಾ ಶಿಕ್ಷಣದಲ್ಲಿ ಒಂದು ಮೈಲಿಗಲ್ಲು ತಲುಪಿದೆ ಎಂದು ಹೇಳಿದೆ.
ಯುಡಿಐಎಸ್‌ಐ, ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ದತ್ತಾಂಶವನ್ನು ಕ್ರೋಢಿಕರಿಸುವ ವೇದಿಕೆಯಾಗಿದೆ. ಇದನ್ನು ಶಿಕ್ಷಣ ಸಚಿವಾಲಯ ನಿರ್ವಹಿಸುತ್ತಿದೆ. ಶಿಕ್ಷಕರ ಸಂಖ್ಯೆಯಲ್ಲಿ ಆಗಿರುವ ಈ ಏರಿಕೆಯು ವಿದ್ಯಾರ್ಥಿ- ಶಿಕ್ಷಕರ ಅನುಪಾತದ ಸುಧಾರಣೆ ಜತೆಗೆ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುತ್ತದೆ. ಶಿಕ್ಷಕರ ಲಭ್ಯತೆ ವಿಚಾರದಲ್ಲಿನ ಪ್ರಾದೇಶಿಕ ಅಸಮತೋಲನ ಪರಿಹರಿಸುವ ನಿಟ್ಟಿನಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಅಂದಹಾಗೆ 2022-13ಕ್ಕೆ ಹೋಲಿಸಿದರೆ ಶಿಕ್ಷಕರ ಸಂಖ್ಯೆಯಲ್ಲಿ ಶೇ.6.7ರಷ್ಟು ಹೆಚ್ಚಳವಾಗಿದೆ. ಮೂಲಭೂತ, ಪೂರ್ವಸಿದ್ಧತಾ, ಮಧ್ಯಮ ಮತ್ತು ಮಾಧ್ಯಮಿಕ ಹಂತಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತ ಈಗ ಕ್ರಮವಾಗಿ 10, 13, 17 ಮತ್ತು 21ರಷ್ಟಿದೆ. ಎನ್‌ಇಪಿ ಶಿಫಾರಸು ಮಾಡಿದ 1:30 ಅನುಪಾತಕ್ಕೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಸುಧಾರಣೆಯಾಗಿದೆ.
Comments are closed.