Technology: ಮಳೆಗಾಲದಲ್ಲಿ ಮೊಬೈಲ್ ಒದ್ದೆಯಾದರೆ ಏನು ಮಾಡಬೇಕು?

Technology: ಮಳೆಗಾಲದಲ್ಲಿ ಮೊಬೈಲ್ ಫೋನ್ ನ್ನು ಎಷ್ಟು ಸೇಫ್ ಆಗಿ ಇಟ್ಟುಕೊಂಡರು ಒಂದಲ್ಲ ಒಂದು ಕಾರಣದಿಂದ ಮೊಬೈಲ್ ಒದ್ದೆ ಆಗುತ್ತೆ. ಅದಕ್ಕಾಗಿ ಮೊಬೈಲ್ ಫೋನ್ ಒದ್ದೆಯಾದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ಸರಿಯಾದ ಕ್ರಮಗಳನ್ನು ಇಲ್ಲಿ ತಿಳಿಸಲಾಗಿದೆ.

ಫೋನ್ ಆಫ್ ಮಾಡಿ:
ಫೋನ್ ಒದ್ದೆಯಾದಾಗ ಫೋನ್ ಕಾರ್ಯನಿರ್ವಹಿಸುತ್ತಿದ್ದರೂ ಸಹ, ತಕ್ಷಣ ಅದನ್ನು ಆಫ್ ಮಾಡಿ. ಇದು ಶಾರ್ಟ್ ಸರ್ಕ್ಯೂಟ್ ಆಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಆಂತರಿಕ ಭಾಗಗಳು ಹಾನಿಯಾಗುವುದನ್ನು ತಡೆಯುತ್ತದೆ.
ಸಿಮ್ ಮತ್ತು ಮೆಮೊರಿ ಕಾರ್ಡ್ ರಿಮೂವ್ ಮಾಡುವುದು: ಯಾವುದೇ ವಿಳಂಬ ಮಾಡದೆ ಸಿಮ್ ಕಾರ್ಡ್, ಮೆಮೊರಿ ಕಾರ್ಡ್ ಮತ್ತು ತೆಗೆಯಬಹುದಾದ ಬ್ಯಾಟರಿ (ಇದ್ದರೆ) ತೆಗೆದುಹಾಕಿ.
ಫೋನ್ ಒರೆಸಿ:
ಫೋನಿನ ಹೊರಭಾಗವನ್ನು ಒಣಗಿದ, ಮೃದುವಾದ ಬಟ್ಟೆಯಿಂದ ಒರೆಸಿ. ಚಾರ್ಜಿಂಗ್ ಪೋರ್ಟ್ ಮತ್ತು ಇಯರ್‌ಫೋನ್ ಜ್ಯಾಕ್‌ನಂತಹ ತೆರವುಗಳಲ್ಲಿರುವ ನೀರನ್ನು ಎಚ್ಚರಿಕೆಯಿಂದ ತೆಗೆಯಿರಿ.
ಅಕ್ಕಿಯಲ್ಲಿ ಇಡಿ:
ಫೋನಿನಲ್ಲಿ ಉಳಿದಿರುವ ತೇವಾಂಶವನ್ನು ಹೀರಿಕೊಳ್ಳಲು, ಫೋನಿನ ಭಾಗಗಳನ್ನು 24-48 ಗಂಟೆಗಳ ಕಾಲ ಒಣಗಿದ ಅಕ್ಕಿಯ ಚೀಲದಲ್ಲಿ ಇರಿಸಿ. ಇಷ್ಟಾದರೂ ಫೋನ್ ಆನ್ ಆಗಿಲ್ಲ ಎಂದಾಗ ಮೊಬೈಲ್ ಸರ್ವಿಸ್ ಸೆಂಟರ್ ಗೆ ಭೇಟಿ ನೀಡುವುದು ಸೂಕ್ತ.
ಈ ತಪ್ಪುಗಳನ್ನು ಮಾಡಬೇಡಿ:
ಆನ್ ಮಾಡಬೇಡಿ: ಒದ್ದೆಯಾದ ಫೋನ್ ಆಫ್ ಆಗಿದ್ದರೆ ಅದನ್ನು ಆನ್ ಮಾಡಲು ಪ್ರಯತ್ನಿಸಬೇಡಿ. ಇದರಿಂದ ಶಾರ್ಟ್ ಸರ್ಕ್ಯೂಟ್ ಆಗಿ ಫೋನ್ ಸಂಪೂರ್ಣವಾಗಿ ಹಾಳಾಗಬಹುದು.
ಸೂರ್ಯನ ಬಿಸಿಲಿನಲ್ಲಿ ಇಡಬೇಡಿ: ಹೆಚ್ಚಿನ ಶಾಖವು ಬ್ಯಾಟರಿ ಮತ್ತು ಆಂತರಿಕ ಭಾಗಗಳಿಗೆ ಹಾನಿ ಮಾಡುವುದರಿಂದ, ಫೋನ್ ಅನ್ನು ನೇರ ಸೂರ್ಯನ ಬೆಳಕಿನಲ್ಲಿ ಇಡಬೇಡಿ.
ಚಾರ್ಜ್ ಮಾಡಬೇಡಿ:
ಒದ್ದೆಯಾದ ಫೋನ್‌ಗೆ ಚಾರ್ಜರ್ ಅನ್ನು ಸಂಪರ್ಕಿಸಬೇಡಿ. ಚಾರ್ಜಿಂಗ್ ಪೋರ್ಟ್‌ನಲ್ಲಿ ನೀರಿದ್ದರೆ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಫೋನ್‌ನ ಆಂತರಿಕ ಭಾಗಗಳಿಗೆ ಹಾನಿಯಾಗಬಹುದು.
ಹೇರ್ ಡ್ರೈಯರ್ ಬಳಸಬೇಡಿ: ಫೋನ್ ಒಣಗಿಸಲು ಹೇರ್ ಡ್ರೈಯರ್‌ನ ಬಿಸಿ ಗಾಳಿಯನ್ನು ಬಳಸಬೇಡಿ. ಇದು ಸೂಕ್ಷ್ಮ ಎಲೆಕ್ಟ್ರಾನಿಕ್ ಭಾಗಗಳನ್ನು ಹಾನಿಗೊಳಿಸುತ್ತದೆ.
ಫೋನ್ ಬಿಚ್ಚಿ ನೋಡಲು ಹೋಗಬೇಡಿ:
ನಿಮಗೆ ತಾಂತ್ರಿಕ ಜ್ಞಾನವಿಲ್ಲದಿದ್ದರೆ, ಫೋನ್‌ನ ಭಾಗಗಳನ್ನು ನೀವೇ ತೆಗೆದು ಶುಚಿಗೊಳಿಸಲು ಪ್ರಯತ್ನಿಸಬೇಡಿ.
Aadhaar: 5 ರಿಂದ 15 ವರ್ಷದ ಮಕ್ಕಳಿಗೆ “ಆಧಾರ್ ಬಯೋಮೆಟ್ರಿಕ್” ನವೀಕರಣ ಕಡ್ಡಾಯ!
Comments are closed.