ಸೊಳ್ಳೆಗಳ ಸಂತಾನೋತ್ಪತ್ತಿ ತಾಣ ನಾಶಪಡಿಸದಿದ್ರೆ ರೂ.4000 ದಂಡ

ಡೆಂಗಿಜ್ವರ ವನ್ನು “ಸಾಂಕ್ರಾಮಿಕ ರೋಗ” ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಲಾಗಿದ್ದು, ಡೆಂಗಿಜ್ವರ ಹರಡುವ ಈಡೀಸ್ ಸೊಳ್ಳೆಗಳ ಲಾರ್ವಾಉತ್ಪತ್ತಿ ತಾಣಗಳನ್ನು ನಾಶ ಪಡಿಸದೇ ನಿರ್ಲಕ್ಷ್ಯ ವಹಿಸಿ ಡೆಂಗೀಜರ ಹರಡಲು ಕಾರಣವಾಗುವವರಿಗೆ ಈ ಕೆಳಕಂಡಂತೆ ದಂಡವನ್ನು ವಿಧಿಸಲಾಗುವುದು.

ಸೊಳ್ಳೆಗಳ ಸಂತಾನೋತ್ಪತ್ತಿ ಕಂಡು ಬಂದ ಮನೆಗಳಿಗೆ ನಗರ ಪ್ರದೇಶದಲ್ಲಿ ರೂ.200/- ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರೂ.400/-, ಸೊಳ್ಳೆಗಳ ಸಂತಾನೋತ್ಪತ್ತಿ ಕಂಡು ಬಂದ ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಶಾಲಾ-ಕಾಲೇಜುಗಳು, ಹೋಟೆಲ್ಗಳು, ಲಾಡ್ಗಳು, ರೆಸಾರ್ಟ್-ಹೋಂ ಸ್ನೇಗಳು, ಮಾಲ್ಗಳು, ಸಣ್ಣ ಅಂಗಡಿಗಳು, ಸೂಪರ್ ಮಾರ್ಕೆಟ್ಟಳು ಎಳನೀರ ವ್ಯಾಪಾರಿಗಳು, ಕಾರ್ಖಾನೆಗಳು, ಕೈಗಾರಿಕೆಗಳು ಪಂಚರ್ ಶಾಪ್ಟಳು, ಪ್ಲಾಂಟ್ ನರ್ಸರಿಗಳು, ಸಿನಿಮಾ ಥಿಯೇಟರ್ಗಳು, ಸಭಾಂಗಣಗಳು, ಇತ್ಯಾದಿಗಳಲ್ಲಿ ನಗರ ಪ್ರದೇಶಗಳಲ್ಲಿ ರೂ. 2000/- ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರೂ. 1000/-ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ನಿವೇಶನಗಳು, ಪಾಳುಬಿದ್ದ ನಿರ್ಮಾಣಗಳ ನಿವೇಶನಗಳು, ಖಾಲಿ ನಿವೇಶನಗಳು, ಬಯಲು ಜಮೀನುಗಳು ಇತ್ಯಾದಿಗಳಲ್ಲಿ ನಗರ ಪ್ರದೇಶಗಳಲ್ಲಿ ರೂ. 4000/- ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರೂ. 2000/-ದಂಡವನ್ನು ವಿಧಿಸಲಾಗುವುದು ಎಂದು ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ತಿಳಿಸಿದ್ದಾರೆ.
Comments are closed.