Reliance Intelligence: ಹೊಸ AI ಘಟಕ ‘ರಿಲಯನ್ಸ್ ಇಂಟೆಲಿಜೆನ್ಸ್’ ಪ್ರಾರಂಭ – ಗೂಗಲ್ ಮತ್ತು ಮೆಟಾ ಜತೆ ಪಾಲುದಾರಿಕೆ – ಮುಖೇಶ್ ಅಂಬಾನಿ

Share the Article

Reliance Intelligence: ಭಾರತದ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್‌ ಅಂಬಾನಿ ಅವರು ‘ರಿಲಯನ್ಸ್ ಇಂಟೆಲಿಜೆನ್ಸ್‌’ ಎಂಬ ಹೊಸ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ, ಇದು ಭಾರತದ AI ಸಾಮರ್ಥ್ಯಗಳನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ. ಕ್ಷೌಡ್ ಮತ್ತು AI ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರುವ ಗೂಗಲ್‌ನೊಂದಿಗೆ “ಆಳವಾದ” ಸಮಗ್ರ ಪಾಲುದಾರಿಕೆ ಮತ್ತು ಓಪನ್-ಸೋರ್ಸ್ Al ಗಾಗಿ ಮೆಟಾದೊಂದಿಗೆ ಹೊಸ ಭಾರತ-ಕೇಂದ್ರಿತ AI ಜಂಟಿ ಉದ್ಯಮವನ್ನು ಘೋಷಿಸಿದರು.

ಹೊಸ AI ಕಂಪನಿಯ 4 ದೃಷ್ಟಿಕೋನಗಳನ್ನು ವಿವರಿಸಿದ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ. ಇದು AI ಮೂಲಸೌಕರ್ಯ, ಜಾಗತಿಕ ಪಾಲುದಾರಿಕೆಗಳು, Al ಸೇವೆಗಳನ್ನು ರಚಿಸುವುದು ಮತ್ತು AI ಪ್ರತಿಭೆಗಳಿಗೆ ಸ್ಥಳಾವಕಾಶ ಒದಗಿಸುವುದು ಸೇರಿದಂತೆ 4 ವಿಧಾನಗಳನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು. ಈ ಕಂಪನಿಯು ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಗೆ AI ಸೇವೆಗಳನ್ನು ಒದಗಿಸಲಿದೆ.

ಕೃತಕ ಬುದ್ಧಿಮತ್ತೆ (AI) ಹೊಸ ‘ಕಾಮಧೇನು’

ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಮಹಾಸಭೆಯಲ್ಲಿ, ಬಿಲಿಯನೇರ್ ಮುಖೇಶ್ ಅಂಬಾನಿ, “ಅದ್ಭುತ ಶಕ್ತಿಯಿಂದಾಗಿ, AI ಅನ್ನು ಈಗ ಹೊಸ ‘ಕಾಮಧೇನು’ ಎಂದು ಕರೆಯಬಹುದು. ನಮ್ಮ ಯುಗದ ದೈವಿಕ ಆಶಯಗಳನ್ನು ಪೂರೈಸುವ ಹಸು” ಎಂದು ಹೇಳಿದರು. ಅವರು ಮೂರು ತಾಂತ್ರಿಕ ರೂಪಾಂತರಗಳನ್ನು ಉಲ್ಲೇಖಿಸಿದರು: ಶುದ್ಧ ಇಂಧನ, ಜೀನೋಮಿಕ್ಸ್ ಮತ್ತು AI ಯಲ್ಲಿನ ಪ್ರಗತಿಗಳು. ರಿಲಯನ್ಸ್ ಈ ರೂಪಾಂತರಗಳನ್ನು “ದೂರದ ಸಾಧ್ಯತೆಗಳಾಗಿ ಅಲ್ಲ, ಆದರೆ ಭಾರತಕ್ಕೆ ತಕ್ಷಣದ ಅವಕಾಶಗಳಾಗಿ ನೋಡುತ್ತದೆ” ಎಂದು ಅವರು ಹೇಳಿದರು.

ಯಾವುದೇ ಪರದೆಯನ್ನು ವರ್ಚುವಲ್‌ ಕಂಪ್ಯೂಟರ್ ಆಗಿ ಪರಿವರ್ತಿಸುವ ಜಿಯೋ ಪಿಸಿ ಎಂದರೇನು?

ಇದೇ ಸಭೆಯಲ್ಲಿ ಜಿಯೋ ಪಿಸಿಯನ್ನು ಬಿಡುಗಡೆ ಮಾಡಲಾಯಿತು. ಕಂಪನಿಯ ಅಧಿಕಾರಿಯೊಬ್ಬರು, “ಜಿಯೋ ಪಿಸಿ ಒಂದು ಕ್ರಾಂತಿಕಾರಿ ಉತ್ಪನ್ನವಾಗಿದ್ದು ಅದು ಟಿವಿ/ಯಾವುದೇ ಪರದೆಯನ್ನು ವೈಯಕ್ತಿಕ ಕಂಪ್ಯೂಟರ್ ಆಗಿ ಪರಿವರ್ತಿಸುತ್ತದೆ. ಇದನ್ನು ಬಳಸಲು ತುಂಬಾ ಸುಲಭ, ಕೀಬೋರ್ಡ್ ಅನ್ನು ಜಿಯೋ ಸೆಟ್ ಟಾಪ್ ಬಾಕ್ಸ್‌ಗೆ ಸಂಪರ್ಕಪಡಿಸಿ ಮತ್ತು ನೀವು ತಕ್ಷಣ ವರ್ಚುವಲ್ ಕಂಪ್ಯೂಟರ್‌ನ ಶಕ್ತಿಯನ್ನು ಪಡೆಯುತ್ತೀರಿ” ಎಂದು ಹೇಳಿದರು.

ಹೊಸ AI ಕನ್ನಡಕಗಳನ್ನು ಪರಿಚಯಿಸಿದ ಜಿಯೋ

ರಿಲಯನ್ಸ್ ಇಂಡಸ್ಟ್ರೀಸ್ (RIL) ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ರಿಲಯನ್ಸ್ ಜಿಯೋದ ಹೊಸ ಉತ್ಪನ್ನಗಳ ಕುರಿತು ಮಾತನಾಡುತ್ತಾ, ಕಂಪನಿಯ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಕಂಪನಿಯು ಶೀಘ್ರದಲ್ಲೇ A। ಗ್ಲಾಸ್‌ಗಳಾದ ‘ಜಿಯೋ ಪ್ರೇಮ್‌ಗಳು’ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆಕಾಶ್ ಪ್ರಕಾರ, ಈ AI-ಚಾಲಿತ ಗ್ಲಾಸ್‌ಗಳು ಅನೇಕ ಭಾರತೀಯ ಭಾಷೆಗಳೊಂದಿಗೆ ಲಭ್ಯವಿರಲಿದ್ದು, ಇದರ ಮೂಲಕ ನೈಜ-ಸಮಯದ ಅನುವಾದದ ಜತೆಗೆ ಇತರ ಹಲವು ಕಾರ್ಯಗಳನ್ನು ಮಾಡಬಹುದು.

ಜಿಯೋ ಹಾಟ್‌ಸ್ಟಾರ್ ವಿಶ್ವದ ಎರಡನೇ ಅತಿದೊಡ್ಡ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್

ರಿಲಯನ್ಸ್‌ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್‌ ಅಂಬಾನಿ, ಜಿಯೋ ಹಾಟ್‌ಸ್ಟಾರ್ ಈಗ 300 ಮಿಲಿಯನ್ ಪಾವತಿಸಿದ ಚಂದಾದಾರರನ್ನು ಹೊಂದಿರುವ ವಿಶ್ವದ ಎರಡನೇ ಅತಿದೊಡ್ಡ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್ ಆಗಿದೆ ಎಂದು ಹೇಳಿದರು. ಜಿಯೋ ಹಾಟ್‌ಸ್ಟಾರ್ ಈಗ ಮೊಬೈಲ್, ಟಿವಿ ಮತ್ತು ಇತರ ಸಾಧನಗಳಲ್ಲಿ ಒಂದು ಬಿಲಿಯನ್ ಪರದೆಗಳನ್ನು ತಲುಪುವ ಹಾದಿಯಲ್ಲಿದೆ ಎಂದು ಆಕಾಶ್ ಹೇಳಿದರು.

Gold Idli: ಇದು ‘ಗೋಲ್ಡ್ ಇಡ್ಲಿ’: ಒಂದು ಪ್ಲೇಟ್ ಇಡ್ಲಿಯ ಬೆಲೆ ₹1,200 : ಅದರ ವಿಶೇಷತೆ ಏನು ಗೊತ್ತಾ?

Comments are closed.