Cricket: ದಿಢೀರ್ ರಾಜೀನಾಮೆ ಹಿಂದಿನ ಕಾರಣ ಏನು? ಮೌನ ಮುರಿದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ

Cricket: ಭಾರತೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ಹಠಾತ್ ನಿವೃತ್ತಿ ಘೋಷಿಸಿದ ಬಗ್ಗೆ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಮೌನ ಮುರಿದಿದ್ದಾರೆ. ಯುಕೆಯಲ್ಲಿ ನಡೆದ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಸಂದರ್ಭದಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ನಿವೃತ್ತಿ ಹೊಂದುವ ಮನಸ್ಥಿತಿಯಲ್ಲಿ ಇರಲಿಲ್ಲ ಎಂದು ಚೇತೇಶ್ವರ ಪೂಜಾರ ಬಹಿರಂಗಪಡಿಸಿದರು. ನಂತರ ಅವರು ದೇಶಕ್ಕೆ ಹಿಂದಿರುಗಿದಾಗ ಅವರ ಮನಸ್ಸು ಬದಲಾಯಿತು.

“ಈಗ ಮುಂದಿನ ಪೀಳಿಗೆಗೆ ಬ್ಯಾಟನ್ ಹಸ್ತಾಂತರಿಸುವ ಸಮಯ ಬಂದಿದೆ. ಆದ್ದರಿಂದ ನಾನು ಮುಂದುವರಿಯಲು ಮತ್ತು ಸೌರಾಷ್ಟ್ರ ತಂಡದ ಭಾಗವಾಗಬಹುದಾದ ಯುವ ಆಟಗಾರರಿಗೆ ಅವಕಾಶ ನೀಡಲು ಇದು ಅತ್ಯುತ್ತಮ ಸಮಯ ಎಂದು ಭಾವಿಸಿದೆ” ಎಂದು ಅವರು ಹೇಳಿದರು.
“ನಾನು ಯುಕೆಯಲ್ಲಿದ್ದಾಗ (ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಸಮಯದಲ್ಲಿ), ಈ ಆಟಕ್ಕಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೆ. ಆದರೆ ಮನೆಗೆ ಹಿಂತಿರುಗಿದ ನಂತರ ರಣಜಿ ಟ್ರೋಫಿಗೆ ತಯಾರಿ ಆರಂಭಿಸುವ ಹಂತದಲ್ಲಿದ್ದಾಗ, ನನ್ನ ಕುಟುಂಬ, ನನ್ನ ಸ್ನೇಹಿತರು ಮತ್ತು ನನ್ನ ಕೆಲವು ತಂಡದ ಸದಸ್ಯರೊಂದಿಗೆ ಮಾತನಾಡಲು ಬಯಸಿದ್ದೆ. ಹಾಗೆ ನಾಣು ಈ ಆಟದಲ್ಲಿ ನಾನು ಆಡುವ ಬಗ್ಗೆ ಅವರ ಅಭಿಪ್ರಾಯವೇನು?” ಎಂದು ತಿಳಿಯಲು ಉತ್ಸುಕನಾಗಿದ್ದೆ ಎಂದು ಪೂಜಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಏಕೆಂದರೆ ನಾನು ಇನ್ನೊಂದು ಋತುವಿನಲ್ಲಿ ಆಡಿದರೆ ತಂಡದಲ್ಲಿ ನನ್ನ ಸ್ಥಾನವನ್ನು ಉಳಿಸಿಕೊಳ್ಳುತ್ತೇನೆ ಎಂದು ನನಗೆ ತಿಳಿದಿತ್ತು ಮತ್ತು ನನಿಗೆ ಹಾಗೆ ಮಾಡಲು ಮನಸಿರಲಿಲ್ಲ. ಮತ್ತು ನಾನು ಇಡೀ ಋತುವಿನಲ್ಲಿ ಆಡುವುದನ್ನು ಮುಂದುವರಿಸುತ್ತೇನೆ ಎನ್ನುವ ಬಗ್ಗೆ ನನಗೆ ಖಚಿತವಿರಲಿಲ್ಲ. ಮುಂದಿನ ಪೀಳಿಗೆಗೆ ನನ್ನ ಅವಕಾಶವನ್ನು ಹಸ್ತಾಂತರಿಸುವ ಸಮಯ ಬಂದಿದೆ ಎಂದು ಪೂಜಾರ ಹೇಳಿದರು.
Comments are closed.