RSS: ಕಾಶಿ, ಮಥುರಾ ದೇವಾಲಯ ವಶಕ್ಕೆ ನಮ್ಮ ಬೆಂಬಲವಿಲ್ಲ – RSS ಘೋಷಣೆ!!

Share the Article

RSS: ಅಯೋಧ್ಯೇಯ ರಾಮಮಂದಿರದ ನಿರ್ಮಾಣದ ಬೆನ್ನಲ್ಲೇ ಕಾಶಿ ಮತ್ತು ಮಥುರ ದೇವಾಲಯಗಳನ್ನು ಮತ್ತೆ ವಶಪಡಿಸಿಕೊಳ್ಳಲಾಗುತ್ತದೆ, ಬಿಜೆಪಿ ಮತ್ತು ಆರ್ ಎಸ್ ಎಸ್ ಇದರ ಕುರಿತು ಚಿಂತನೆ ನಡೆಸಿವೆ ಎಂದು ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಆರ್ ಎಸ್ ಎಸ್ ನಾಯಕ ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದು ಕಾಶಿ ಮತ್ತು ಮಥುರಾ ವಶಕ್ಕೆ ನಮ್ಮ ಬೆಂಬಲವಿಲ್ಲ ಎಂದು ಘೋಷಿಸಿದ್ದಾರೆ.

ಹೌದು, ಸಂಘಟನೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಲ್ಲಿನ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ 3 ದಿನಗಳ ಕಾರ್ಯಕ್ರಮದ ಅಂತಿಮ ದಿನವಾದ ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಭಾಗವತ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಮಮಂದಿರ ಚಳವಳಿಯನ್ನು ಮಾತ್ರ ಬೆಂಬಲಿಸಿತು. ಆದರೆ ಮುಂದೆ ಕಾಶಿ- ಮಥುರಾ ದೇಗುಲಗಳ ಮರುವಶ ಸೇರಿದಂತೆ ಮತ್ಯಾವುದೇ ಅಭಿಯಾನವನ್ನು ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಅಷ್ಟು ಮಾತ್ರವಲ್ಲದೆ ಮುಂದುವರೆದು ಮಾತನಾಡಿದ ಅವರು ಸಂಘ ಇದನ್ನು ಬೆಂಬಲಿಸುವುದಿಲ್ಲ, ಆದರೆ ನಮ್ಮ ಸ್ವಯಂಸೇವಕರಿಗೆ ಯಾವುದೇ ನಿರ್ಬಂಧ ಇಲ್ಲ. ಕಾರ್ಯಕರ್ತರು ಅಂಥ ಹೋರಾಟಗಳನ್ನು ಬೆಂಬಲಿಸಬಹುದು’ ಎಂದು ಹೇಳಿದರು.

Comments are closed.