Dasara Holiday: ರಾಜ್ಯದಲ್ಲಿ 18 ದಿನ ದಸರಾ ರಜೆ – ಎಲ್ಲಿಂದ, ಎಲ್ಲಿಯವರೆಗೆ?

Dasara Holiday : ರಾಜ್ಯ ಶಿಕ್ಷಣ ಇಲಾಖೆ ದಸರಾ ರಜೆ ಪಟ್ಟಿ ಘೋಷಿಸಿದ್ದು, ರಾಜ್ಯದ ಶಾಲಾ ಮಕ್ಕಳಿಗೆ ಈ ಬಾರಿ ದಸರಾ ರಜೆ ಭಾರೀ ಖುಷಿ ಕೊಡಲಿದೆ.

ಹೌದು, ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ ಮಕ್ಕಳಿಗೆ ಈ ಬಾರಿ ಭರ್ಜರಿ ರಜೆ ಸಿಗಲಿದೆ. ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, 2025ರ ದಸರಾ ರಜೆ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರವರೆಗೆ ಒಟ್ಟು 18 ದಿನಗಳು ಇರಲಿವೆ.
ಸಾಮಾನ್ಯವಾಗಿ ದಸರಾ ಹಬ್ಬದ ವೇಳೆ ಶಾಲೆಗಳಿಗೆ 15ರಿಂದ ಒಂದು ತಿಂಗಳಿಗಳ ಕಾಲ ರಜೆ ನೀಡಲಾಗುತ್ತದೆ. ಅದರಂತೆಯೇ ಈ ಬಾರಿಯೂ 18 ದಿನಗಳ ಕಾಲ ದಸರಾ ರಜೆಯನ್ನು ಘೋಷಣೆ ಮಾಡಲಾಗಿದೆ. ದಸರಾ ರಜೆಯನ್ನು ಮಧ್ಯಂತರ ಪರೀಕ್ಷೆಗಳು ಮುಗಿದ ನಂತರ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
ರಜೆಯ ನಡುವೆಯೂ ಒಂದು ಪ್ರಮುಖ ಸೂಚನೆಯನ್ನು ಶಿಕ್ಷಣ ಇಲಾಖೆ ನೀಡಿದೆ. ‘ಅಕ್ಟೋಬರ್ 2 ರಂದು’ ರಜೆ ಇದ್ದರೂ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಎಲ್ಲ ಶಾಲಾ ಮಕ್ಕಳು ಮತ್ತು ಶಿಕ್ಷಕರು ಶಾಲೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದೆ.
Comments are closed.