Su From So: ಈ ದಿನದಂದು OTT ಗೆ ‘ಸು ಫ್ರಮ್ ಸೋ’ ಲಗ್ಗೆ – ಯಾವ OTT?

Share the Article

Su From So: ‘ಸು ಫ್ರಮ್ ಸೋ’ (Su From So) ರಿಲೀಸ್ ಆಗಿ 32 ದಿನಗಳು ಕಳೆದಿವೆ. ಆದಾಗ್ಯೂ ಸಿನಿಮಾದ ಅಬ್ಬರ ಮಾತ್ರ ಕಡಿಮೆ ಆಗುತ್ತಿಲ್ಲ. ಈ ಚಿತ್ರ ಹಲವು ದಾಖಲೆಗಳನ್ನು ಬರೆದು ಮುಂದಕ್ಕೆ ಸಾಗುತ್ತಿದೆ. ಈಗ ಸಿನಿಮಾದ ಒಟಿಟಿ ದಿನಾಂಕ ರಿವೀಲ್ ಆಗಿದೆ.

 ಮೂಲಗಳ ಪ್ರಕಾರ ಸೋ ಫ್ರಮ್ ಸೋ ಸಿನಿಮಾ ಸೆಪ್ಟೆಂಬರ್ 2ನೇ ವಾರದಲ್ಲಿ ಜಿಯೋ ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮ್ ಆಗಲಿದೆ.  ಆದರೆ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮೂಲಗಳಿಂದ ತಿಳಿದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವಿಶೇಷ ಅಂದ್ರೆ ಸಿನಿಮಾ ಒಟಿಟಿಗೆ ಬಂದ ಬಳಿಕವೂ ಇದನ್ನು ಕೆಲವರು ಥಿಯೇಟರ್​​ನಲ್ಲಿ ನೋಡುವುದನ್ನು ಮುಂದುವರಿಸಬಹುದು ಎಂದು ಊಹಿಸಲಾಗಿದೆ.

ಈ ಚಿತ್ರದ ಒಟ್ಟಾರೆ ಕಲೆಕ್ಷನ್ 115.26 ಕೋಟಿ ರೂಪಾಯಿ ಆಗಿದೆ. ಇದರಲ್ಲಿ ಭಾರತದ ನೆಟ್ ಕಲೆಕ್ಷನ್ 86 ಕೋಟಿ ರೂಪಾಯಿ ಇದೆ. ಭಾರತದ ಗ್ರಾಸ್ ಕಲೆಕ್ಷನ್ 100 ಕೋಟಿ ರೂಪಾಯಿ ಆಗಿದೆ. ವಿದೇಶದಿಂದ ಸಿನಿಮಾಗೆ 14 ಕೋಟಿ ರೂಪಾಯಿ ಹರಿದು ಬಂದಿದೆ.

Comments are closed.