DCM DK Shivakumar: ಆರ್‌ಎಸ್‌ಎಸ್‌ ಗೀತೆ, ಕಡೆಗೂ ಕ್ಷಮೆ ಕೇಳಿದ ಡಿಸಿಎಂ ಡಿಕೆಶಿ

Share the Article

DCM DK Shivakumar: ಸದನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಆರ್‌ಎಸ್‌ಎಸ್‌ ಗೀತೆ ಹಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ವಲಯದಲ್ಲಿ ಭಾರೀ ವಿವಾದ ಆಗಿತ್ತು. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಆರ್‌ಎಸ್‌ಎಸ್‌ ಗೀತೆ ವಿಚಾರದಲ್ಲಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ. ಎಲ್ಲರ ಬಳಿಯೂ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಯಾರ ಮನಸ್ಸನ್ನೂ ನೋಯಿಸಲು ನನಗೆ ಇಷ್ಟವಿಲ್ಲ. ಯಾರಿಗಾದರೂ ಇದರಿಂದ ನೋವಾಗಿದ್ದರೆ ನಾನು ಕ್ಷಮಾಪಣೆ ಕೇಳಲು ಸಿದ್ಧ ಎಂದು ಡಿಕೆಶಿ ಹೇಳಿದ್ದಾರೆ. ನನ್ನ ಮಾತಿನ ಕುರಿತು ಯಾರು ಪ್ರಶ್ನೆ ಮಾಡಿದ್ದರೋ ಅವರೆಲ್ಲರೂ ಮೂರ್ಖರು ಎಂದು ಸ್ವಪಕ್ಷದವರ ವಿರುದ್ಧ ಡಿಕೆಶಿ ಟಾಂಗ್‌ ನೀಡಿದ್ದಾರೆ.

Comments are closed.