Dasara Holiday : ಈ ಬಾರಿ ಅವಧಿಗೂ ಮುನ್ನ ದಸರಾ ರಜೆ ಘೋಷಣೆ!!

Share the Article

 

Dasara Holiday : ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಆರಂಭದಿಂದಲೂ ಕೂಡ ರಜೆಯ ಕುರಿತು ಸಾಕಷ್ಟು ಗುಡ್ ನ್ಯೂಸ್ ಸಿಗುತ್ತಿದೆ. ಅದರಲ್ಲೂ ಮಳೆ ಮತ್ತು ಪ್ರತಿಭಟನೆ ಎಂಬ ಹಲವಾರು ಕಾರಣಗಳಿಂದ ವಿದ್ಯಾರ್ಥಿಗಳು ರಜೆ ಪಡೆದು ಮಜಾ ಮಾಡುತ್ತಿದ್ದಾರೆ. ಇದರ ನಡುವೆ ಈ ವರ್ಷದ ದಸರಾ ರಜೆಯು ಅವಧಿಗೂ ಮುಂಚೆಯೇ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.

ಹೌದು, ಈ ಬಾರಿ ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ವಿದ್ಯಾರ್ಥಿಗಳಿಗೆದಸರಾ ರಜೆಸಿಗಲಿದೆ. ಸಾಮಾನ್ಯವಾಗಿ ಅಕ್ಟೋಬರ್‌ 2 ರಿಂದ ದಸರಾ ರಜೆ ನೀಡಲಾಗುತ್ತದೆ. ಆದರೆ ಈ ಬಾರಿ ನವರಾತ್ರಿ ಮುಂಚಿತವಾಗಿ ಆಗಮಿಸಲಿದೆ. ಹೀಗಾಗಿ ಶಿಕ್ಷಣ ಇಲಾಖೆ ಸೆಪ್ಟೆಂಬರ್‌ 20ರಿಂದಲೇ ದಸರಾ ರಜೆ ಘೋಷಿಸಿದೆ. ಸೆಪ್ಟೆಂಬರ್‌ 20 ರಿಂದ ಅಕ್ಟೋಬರ್‌ 7ರ ವರೆಗೆ ಕರ್ನಾಟಕ ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ಸಿಗಲಿದೆ.

ಹಿಂದೆಯಲ್ಲಾ ಬೇಸಿಗೆ ರಜೆ 2 ತಿಂಗಳ ಕಾಲ ನೀಡಿದ್ರೆ, ದಸರಾ ರಜೆ 30 ದಿನಗಳ ನೀಡಲಾಗುತ್ತಿತ್ತು. ಆದ್ರೆ ಕೊರೊನಾ ನಂತರದಲ್ಲಿ ದಸರಾ ರಜೆಗೆ ಶಿಕ್ಷಣ ಇಲಾಖೆ ಕತ್ತರಿ ಹಾಕಿದೆ. 20 ದಿನ, 15 ದಿನಕ್ಕೆ ಇಳಿಕೆಯಾಗಿದೆ.

Comments are closed.