Home News D Mart: ಗಣೇಶ ಹಬ್ಬ ಸ್ಪೆಷಲ್ – ಡಿ ಮಾರ್ಟ್‌ನಲ್ಲಿ ಅರ್ಧ ಬೆಲೆಗೆ ಈ ವಸ್ತುಗಳ...

D Mart: ಗಣೇಶ ಹಬ್ಬ ಸ್ಪೆಷಲ್ – ಡಿ ಮಾರ್ಟ್‌ನಲ್ಲಿ ಅರ್ಧ ಬೆಲೆಗೆ ಈ ವಸ್ತುಗಳ ಮಾರಾಟ !!

Hindu neighbor gifts plot of land

Hindu neighbour gifts land to Muslim journalist

D Mart: ಡಿಮಾರ್ಟ್ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಗಣೇಶ ಹಬ್ಬದ ಪ್ರಯುಕ್ತ, ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಮನೆ ಬಳಕೆ ವಸ್ತುಗಳು, ಅಡುಗೆ ಪಾತ್ರೆಗಳು ಹೀಗೆ ಎಲ್ಲದರ ಮೇಲೂ ಭಾರಿ ರಿಯಾಯಿತಿ ಇದೆ.

ಹೌದು, ಗಣೇಶ ಚತುರ್ಥಿಯ ಪ್ರಯುಕ್ತ, “ಅರ್ಧಕ್ಕಿಂತ ಕಡಿಮೆ ಬೆಲೆ” ಎಂಬ ಆಫರ್ ಅನ್ನು ಡಿಮಾರ್ಟ್ ಘೋಷಿಸಿದೆ. ವಾರಾಂತ್ಯದಲ್ಲಿ ಶಾಪಿಂಗ್ ಮಾಡಲು ಬಯಸುವ ಕುಟುಂಬಗಳಿಗೆ ಇದು ಒಂದು ಉತ್ತಮ ಅವಕಾಶ.

ಯಾವುದಕ್ಕೆಲ್ಲಾ ಆಫ಼ರ್ ಇದೆ?

ಬ್ರಿಟಾನಿಯಾ ಜಿಮ್ ಜಾಮ್ ಪಾಪ್ಸ್ ಬಿಸ್ಕತ್ತು ಪ್ಯಾಕೆಟ್‌ನ MRP ರೂ.120. ಸಾಮಾನ್ಯವಾಗಿ ರೂ.75 ಕ್ಕೆ ಮಾರಾಟವಾದರೂ, ಈಗ ರೂ.60 ಕ್ಕೆ ಸಿಗುತ್ತಿದೆ. ಬ್ರಿಟಾನಿಯಾ ಚೀಸ್ ಪ್ಯಾಕ್ – ಅಸಲು ಬೆಲೆ ರೂ.460, ಈಗ ಕೇವಲ ರೂ.230. ಫ್ರೆಶ್ ಟಾಯ್ಲೆಟ್ ಕ್ಲೀನರ್ – MRP ರೂ.225, ಆದರೆ ರೂ.112 ಕ್ಕೆ ನೀಡಲಾಗುತ್ತಿದೆ

ತೊಗರಿಬೇಳೆ ಕಿಲೋ ರೂ.365 ಕ್ಕೆ ಬದಲಾಗಿ ರೂ.182 ಕ್ಕೆ ಮಾರಾಟವಾಗುತ್ತಿದೆ. ಸಫೋಲಾ ಮೀಲ್ ಮೇಕರ್ ರೂ.150 ಕ್ಕೆ ಬದಲಾಗಿ ರೂ.75 ಕ್ಕೂ, ಎಪಿಸ್ ಕ್ಲಾಸಿಕ್ ಖರ್ಜೂರ (½ ಕಿಲೋ) ರೂ.199 ಕ್ಕೆ ಬದಲಾಗಿ ರೂ.99 ಕ್ಕೂ ಮಾರಾಟವಾಗುತ್ತಿದೆ.

ಚಾಕೊಲೇಟ್, ಬಿಸ್ಕತ್ತುಗಳ ಮೇಲೂ ಭಾರಿ ರಿಯಾಯಿತಿ. ಉದಾಹರಣೆಗೆ, Sunfeast Dark Fantasy Bourbon ಬಿಸ್ಕತ್ತು (MRP ರೂ.180), ಈಗ ರೂ.83 ಕ್ಕೆ ಮಾತ್ರ ಸಿಗುತ್ತಿದೆ. ಪಾತ್ರೆಗಳು, ಕುಕ್ಕರ್‌ಗಳ ಮೇಲೂ ರಿಯಾಯಿತಿ. Butterfly 5.5 ಲೀಟರ್ ಸ್ಟೀಲ್ ಕುಕ್ಕರ್ – MRP ರೂ.4,851. ಈಗ ಕೇವಲ ರೂ.1,949 ಕ್ಕೆ ಸಿಗುತ್ತಿದೆ.